Site icon Vistara News

Karnataka Election : ಸವದಿಗೆ ಬಿಜೆಪಿಯಲ್ಲಿದ್ದಾಗ 40% ಗೊತ್ತಿರಲಿಲ್ವಾ?; ಬೊಮ್ಮಾಯಿ ತಿರುಗೇಟು

karnataka-election : Did savadi didnt know about 40% commission when he was in BJP; asks CM Bommai

karnataka-election : Did savadi didnt know about 40% commission when he was in BJP; asks CM Bommai

ಬೆಳಗಾವಿ: ಲಕ್ಷ್ಮಣ ಸವದಿ ಅವರು ಗಾಳಿಯಲ್ಲಿ ಗುಂಡು ಹಾರಿಸುವುದರಿಂದ ಪ್ರಯೋಜನವಿಲ್ಲ. ಯಾವ ನಿರ್ದಿಷ್ಟ ಪ್ರಕರಣದಲ್ಲಿ 40 ಪರ್ಸೆಂಟ್ ಹಣ ಪಡೆದಿದ್ದೇವೆ ಎಂದು ಸ್ಪಷ್ಟವಾಗಿ ಹೇಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ (Karnataka Election 2023) 40 % ಕಮಿಷನ್‌ ಈ ಮೂಲಕ ಮತ್ತೆ ಸದ್ದು ಮಾಡಿದೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ 40 ಪರ್ಸೆಂಟ್ ಕಮಿಷನ್ ತನಿಖೆ ಕೈಗೊಳ್ಳಲಾಗುವುದು ಎಂಬ ಲಕ್ಷ್ಮಣ್ ಸವದಿ ಅವರ ಹೇಳಿಕೆಗೆ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬುಧವಾರ ತಿರುಗೇಟು ನೀಡಿದರು.

ʻʻಅವರು ಬಿಜೆಪಿಯಲ್ಲಿದ್ದಾಗಲೇ ಹೇಳಬಹುದಿತ್ತಲ್ಲ, ಏಕೆ ಸುಮ್ಮನಿದ್ದರು?ʼʼ ಎಂದು ಮಾಜಿ ಡಿಸಿಎಂ ಲಕ್ಷ್ಮಣ್ ಸವದಿಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನೆ ಮಾಡಿದರು.

ವರ್ಚಸ್ಸು ಕೆಡಿಸುವ ಪ್ರಯತ್ನ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ ಮುಖ್ಯಮಂತ್ರಿಗಳು, ರಾಜ್ಯದ ಮುಖ್ಯಮಂತ್ರಿಗಳನ್ನು ಗುರಿಯಾಗಿಸಿ ಬಿಜೆಪಿ ಇಮೇಜ್ ಕೆಡಿಸಬೇಕು ಅಂತಿದ್ದಾರೆ, ಆದರೆ ಸಾಧ್ಯವಾಗುತ್ತಿಲ್ಲ. ಕಳೆದ ಒಂದೂವರೆ ವರ್ಷದಿಂದ ಸಿದ್ದರಾಮಯ್ಯ ಅವರು ಪ್ರಯತ್ನ ಮಾಡುತ್ತಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.

ʻʻಕಾಂಗ್ರೆಸ್‌ನವರು ಏನೇ ಹೇಳಿದರೂ ಜನರು ನಂಬುತ್ತಿಲ್ಲ. ಏಕೆಂದರೆ ಅವರೇ ದೊಡ್ಡ ಭ್ರಷ್ಟಾಚಾರಿಗಳು ಎನ್ನುವುದು ಜನರಿಗೆ ಗೊತ್ತಿದೆ. ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್. ಭ್ರಷ್ಟಾಚಾರ ಕಾಂಗ್ರೆಸ್ ಪಕ್ಷದ ಅವಿಭಾಜ್ಯ ಅಂಗವಾಗಿದೆ. ಹೀಗಿರುವಾಗ ಅವರು ಭ್ರಷ್ಟಾಚಾರ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲʼʼ ಎಂದು ಹೇಳಿದರು.

ಲಿಂಗಾಯತ ಲಡಾಯಿ ಇಲ್ಲ

ʻʻʻನಿಮ್ಮ ಹಾಗೂ ಸಿದ್ದರಾಮಯ್ಯ ಮಧ್ಯೆ ಲಿಂಗಾಯತ ಲಡಾಯಿ ಜೋರಾಗಿದೆʼʼ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ʻʻಲಡಾಯಿ ಏನಿಲ್ಲ, ಅವರೇ ಮಾಡಿಕೊಂಡಿರೋದು. ಅವರೇ ಮಾಡಿಕೊಂಡು ಬೇರೆ ಬೇರೆ ಸ್ಪಷ್ಟೀಕರಣ ಕೊಡುತ್ತ ತಿರುಗುತ್ತಿದ್ದಾರೆ. ಗ್ರೌಂಡ್‌ನಲ್ಲಿ ಲಿಂಗಾಯತರು ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಜನ ಬಹಳ ಪ್ರಬುದ್ಧವಾಗಿದ್ದಾರೆ, ಯಾರಿಗೆ ಯಾವಾಗ ಹೇಗೆ ಬೆಂಬಲ ಮಾಡಬೇಕೆಂದು ಗೊತ್ತಿದೆʼʼ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಕನಿಷ್ಠ 15 ಸ್ಥಾನ

ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯಲ್ಲಿ ಪ್ರಚಾರ ಮಾಡುತ್ತಿದ್ದು, ಎಲ್ಲ ಕಡೆ ರೋಡ್ ಷೋ, ಸಭೆಗಳಲ್ಲಿ ಜನರ ಉತ್ಸಾಹ ದೊಡ್ಡ ಪ್ರಮಾಣದಲ್ಲಿ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಕನಿಷ್ಠ 15 ಸ್ಥಾನ ಗೆಲ್ಲುವ ವಿಶ್ವಾಸವಿದೆ ಎಂದರು ಬೊಮ್ಮಾಯಿ.

ʻʻನಾನು ರಾಜ್ಯದ ಉದ್ದಗಲಕ್ಕೂ ಸುತ್ತುತ್ತಿದ್ದೇನೆ. ನಾಮಪತ್ರ ವಾಪಸ್ ಪ್ರಕ್ರಿಯೆ ಆದಮೇಲೆ ಬಿಜೆಪಿ ಸುನಾಮಿ ಇಡೀ ರಾಜ್ಯದಲ್ಲಿ ಇದೆ. ಬಿಜೆಪಿ ಸ್ಪಷ್ಟ ಬಹುಮತದಿಂದ ಬರಲಿದೆʼʼ ಎಂದು ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

ಅಭೂತಪೂರ್ವ ಜನಬೆಂಬಲ

ʻʻದಕ್ಷಿಣ ಕರ್ನಾಟಕದಿಂದ ಪ್ರಚಾರ ಶುರು ಮಾಡಿ ಉತ್ತರಕ್ಕೆ ಬಂದಿದ್ದು, ಎಲ್ಲಾ ಕಡೆ ಅಭೂತಪೂರ್ವ ಜನ ಬೆಂಬಲ ಇದೆ. ವಿಶೇಷವಾಗಿ ಯುವಕರು, ಮಹಿಳೆಯರು ರೈತರು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸುತ್ತಿದ್ದಾರೆ. ನಮ್ಮ ನಿರೀಕ್ಷೆ ಮೀರಿ ಜನಸ್ಪಂದನೆ ಇದೆʼʼ ಎಂದು ತಿಳಿಸಿದರು.

ಇದನ್ನೂ ಓದಿ : Muslim quota issue : ಮೀಸಲಾತಿ ಬರೀ ಲಾಲಿಪಾಪ್‌ ಎಂದ ಸುರ್ಜೇವಾಲಾ, ಬಿಜೆಪಿಗೆ 9 ಪ್ರಶ್ನೆಗಳು

karnataka-election : Did savadi didnt know about 40% commission when he was in BJP; asks CM Bommai

Exit mobile version