Site icon Vistara News

Karnataka Election | ಕುಟುಂಬ ರಾಜಕಾರಣ ಎಂದರೇ ಭ್ರಷ್ಟಾಚಾರ; ದೇಶ-ಕರ್ನಾಟಕದಲ್ಲಿ ಇದಕ್ಕಿಲ್ಲ ಅವಕಾಶ: ಪ್ರಲ್ಹಾದ್‌ ಜೋಶಿ

ಬೆಂಗಳೂರು: ಕುಟುಂಬ ರಾಜಕಾರಣ ಎಂದರೇ ಭ್ರಷ್ಟಾಚಾರ. ಈ ಭ್ರಷ್ಟಾಚಾರದಿಂದಲೇ ದೇಶದ ಅವನತಿಗಳಾಗಿವೆ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣಕ್ಕೆ ಅವಕಾಶವಿಲ್ಲ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಖಂಡಿಸುತ್ತಲೇ ಬಂದಿದ್ದಾರೆ. ಮುಂದಿನ ದಿನಗಳಲ್ಲಿ ಇದು ಕರ್ನಾಟಕ ಸೇರಿದಂತೆ ಇಡೀ ದೇಶದಲ್ಲಿ ಜಾರಿಗೆ ಬರುತ್ತದೆ. ಚುನಾವಣೆ (Karnataka Election) ವೇಳೆ ಇದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಅರಮನೆ ಮೈದಾನದಲ್ಲಿ ಬಿಜೆಪಿಯ ಬೂತ್‌ ವಿಜಯ ಸಂಕಲ್ಪ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿಯು ಕುಟುಂಬ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡು ನಾವು, ನಮ್ಮ ಕಾರ್ಯಕರ್ತರು ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಇಂದು ನಾವು ಚುನಾವಣೆಯನ್ನು ಸರಿಯಾದ ರೀತಿಯಲ್ಲಿ ಎದುರಿಸಿದರೆ ಗೆಲುವು ಸಾಧಿಸಬಹುದು ಎಂಬುದಕ್ಕೆ ಇಂದು ಹಲವಾರು ಉದಾಹರಣೆಗಳು ನಮ್ಮ ಮುಂದಿವೆ. ಉತ್ತರ ಪ್ರದೇಶ, ಉತ್ತರಾಖಂಡ, ರಾಜ್ಯದ ಚುನಾವಣೆ ಇರಬಹುದು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್‌ ಅಮಿತ್‌ ಶಾ ಇರಬಹುದು ಪಕ್ಷವನ್ನು ಅತ್ಯುತ್ತಮವಾಗಿ ಮುನ್ನಡೆಸುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | Amit Shah | ಬಿಜೆಪಿಯವರು ಭಾರತ್‌ ಮಾತಾಕಿ ಜೈ ಅಂದ್ರೆ, ಕಾಂಗ್ರೆಸ್‌ನವರು ಸೋನಿಯಾ ಮಾತಾಕಿ ಜೈ ಅಂತಾರೆ: ಸಿಎಂ ಬೊಮ್ಮಾಯಿ

ಬಿಜೆಪಿಯಲ್ಲಿ ಮ್ಯಾಕ್ರೋ ಮ್ಯಾನೇಜ್ಮೆಂಟ್‌ ಅಂದರೆ ಬೂತ್‌ ಮ್ಯಾನೇಜ್ಮೆಂಟ್‌ ಅತ್ಯುತ್ತಮವಾಗಿದ್ದು, ಇದರಿಂದಲೇ ನಾವು ಗೆಲ್ಲಲು ಸಹಾಯಕವಾಗಿದೆ. ನಾನು ಉತ್ತರಾಖಂಡದಲ್ಲಿ ಉಸ್ತುವಾರಿಯಾಗಿದ್ದೆ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರಾದ ಸಿ.ಟಿ. ರವಿ ಗೋವಾದಲ್ಲಿ ಉಸ್ತುವಾರಿಯಾಗಿದ್ದರು. ಇಲ್ಲಿ ಎಲ್ಲವೂ ಸಹಿತ ಬೂತ್‌ ಮಟ್ಟದಲ್ಲಿ ಕಾರ್ಯತಂತ್ರಗಳನ್ನು ಹೆಣೆಯಲಾಗಿತ್ತು. ಬೂತ್‌ಗಳಲ್ಲಿ ನಮ್ಮ ಕೆಲಸವನ್ನು ನಾವು ಎಷ್ಟು ಮಜಬೂತ್‌ ಆಗಿ ಮಾಡುತ್ತೇವೋ ಅಷ್ಟು ನಾವು ನಮ್ಮ ಚುನಾವಣೆಯನ್ನು ಗೆಲ್ಲಬಹುದಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಒಂದು ಬೂತ್‌ನಲ್ಲಿ ೧ ಸಾವಿರ ಮತಗಳಿದ್ದರೆ, ಅಲ್ಲಿ ಯುವ ಮೋರ್ಚಾ, ಬಿಎಲ್‌ಒ, ಎಸ್‌ಸಿ ಮೋರ್ಚಾ, ಎಸ್‌ಟಿ ಮೋರ್ಚಾ ಸೇರಿದಂತೆ ಸುಮಾರು ೨೫೦ ಪದಾಧಿಕಾರಿಗಳನ್ನು ಅಲ್ಲೇ ರಚಿಸಬಹುದು. ಅವರಿಗೆ ಈ ಪಕ್ಷ ನಮ್ಮದು ಎಂಬ ಭಾವನೆಯನ್ನು ಮೂಡುವಂತೆ ಮಾಡಬೇಕಿದೆ. ಕಾರಣ ಒಂದು ಸಾವಿರದಲ್ಲಿ ಸುಮಾರು ೬೦೦-೭೦೦ ಮಂದಿ ಮತ ಹಾಕುತ್ತಾರೆ. ಹಾಗಾಗಿ ನಾವು ಎಲ್ಲರನ್ನೂ ಒಟ್ಟಾಗಿ ಕೊಂಡೊಯ್ಯಬೇಕು. ನಮ್ಮ ಪಕ್ಷದಲ್ಲಿ ಬಿಎಲ್‌ಒಗಳಿಗೆ ಹೆಚ್ಚಿನ ಅಧಿಕಾರವಿದೆ. ಅವರ ಸದ್ಬಳಕೆಯನ್ನು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಕೇಂದ್ರದ ಮಂತ್ರಿ, ರಾಜ್ಯದ ಮುಖ್ಯಮಂತ್ರಿ, ಮಂತ್ರಿಗಳು, ಶಾಸಕರು ಇರಬಹುದು, ಅವರವರ ಬೂತ್‌ಗಳಲ್ಲಿ ಹೆಚ್ಚಿನ ಮತಗಳನ್ನು ತರುವ ಕೆಲಸಗಳು ನಮ್ಮಿಂದ ಆಗಬೇಕು. ಇದು ನಮಗೂ ಸೇರಿದಂತೆ ಬಿಎಲ್‌ಒ, ಬೂತ್‌ ಅಧ್ಯಕ್ಷರಿಗೂ ಅನ್ವಯವಾಗುತ್ತದೆ. ಅನೇಕ ಬಾರಿ ನಮ್ಮ ಬೂತ್‌ಗಳಲ್ಲಿ ನಮಗೆ ಹಿನ್ನಡೆಯಾಗಿರುತ್ತದೆ. ಹೀಗಾಗಿ ಮೊದಲು ನಿಮ್ಮ ನಿಮ್ಮ ಬೂತ್‌ಗಳನ್ನು ಗೆಲ್ಲಿಸಿ, ಕೊನೆಗೆ ಗೆಲುವಿನ ಸಂಭ್ರಮವನ್ನು ಆಚರಿಸಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾದ ಅಮಿತ್‌ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ ಎಂದು ಜೋಶಿ ಹೇಳಿದರು.

ಈ ಹಿಂದಿನ ಸರ್ಕಾರಗಳಲ್ಲಿ ನಿತ್ಯವೂ ಹಗರಣಗಳ ಸುದ್ದಿ ಆಗುತ್ತಿದ್ದವು. ಆದರೆ, ಇಂದು ಜಗತ್ತಿನಲ್ಲಿ ಎಲ್ಲಿಯೇ ಹೋದರೂ ಭಾರತಕ್ಕೆ ಮನ್ನಣೆ ಸಿಗುತ್ತಿದೆ. ಇತ್ತೀಚೆಗೆ ವಿಶ್ವಸಂಸ್ಥೆಯ ಜನರಲ್‌ ಅಸೆಂಬ್ಲಿ ನಡೆಯಿತು. ಜಿ೨೦ ನೇತೃತ್ವವನ್ನು ಭಾರತ ವಹಿಸಿಕೊಳ್ಳುತ್ತಿದೆ. ದೇಶಕ್ಕೆ ಗೌರವವನ್ನು ತಂದು ಕೊಡುವ ಕೆಲಸವು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಗುತ್ತಿದೆ. ಇಂದು ಜಗತ್ತಿನಲ್ಲಿ ಭಾರತದ ಸಾಧನೆ, ಕೊರೊನಾವನ್ನು ನಿರ್ವಹಿಸಿದ ರೀತಿ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಜೋಶಿ ಹೇಳಿದರು.

ಇದನ್ನೂ ಓದಿ | Karnataka Election | ಜೆಡಿಎಸ್‌ಗೆ ವೋಟ್ ಮಾಡಿದ್ರೆ ಕಾಂಗ್ರೆಸ್‌ಗೆ ವೋಟ್ ಮಾಡಿದ ಹಾಗೆ ಎಂದ ಅಮಿತ್ ಶಾ!

Exit mobile version