Site icon Vistara News

Karnataka Election | ಮಾಜಿ ಸಚಿವ ಎಚ್.ನಾಗೇಶ್ ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ: ಸ್ಪರ್ಧೆ ಎಲ್ಲಿಂದ?

H Nagesh Congress

ಕೋಲಾರ: ಮಾಜಿ ಸಚಿವ ಎಚ್.ನಾಗೇಶ್ ಅವರು ಶನಿವಾರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ…ಆಗುತ್ತಿದ್ದಾರೆ. ಮುಳಬಾಗಿಲು ಕ್ಷೇತ್ರದ ಶಾಸಕರಾಗಿರುವ ನಾಗೇಶ್‌ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಪಕ್ಷಕ್ಕೆ ಬರಮಾಡಿಕೊಳ್ಳಲಿದ್ದಾರೆ.

೨೦೧೮ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದ ಎಚ್. ನಾಗೇಶ್‌ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಬಳಿಕ ರಾಜೀನಾಮೆ ನೀಡಿ ಬಿಜೆಪಿ ಬೆಂಬಲಿಸಿದ್ದರು. ಬಿಜೆಪಿ ಸರ್ಕಾರದಲ್ಲೂ ಅಬಕಾರಿ ಸಚಿವರಾಗಿ, ಅಂಬೇಡ್ಕರ್ ನಿಗಮ ಮಂಡಳಿ ಅಧ್ಯಕ್ಷರಾಗಿ ಅಧಿಕಾರ ಪಡೆದಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿಯಾಗಿ ಕಾಂಗ್ರೆಸ್‌ ಸೇರ್ಪಡೆ ಇಂಗಿತ ವ್ಯಕ್ತಪಡಿಸಿದ್ದರು. ಇದೀಗ ಪಕ್ಷ ಸೇರ್ಪಡೆಯ ಅವರ ಕನಸು ಇಂದು ನನಸಾಗುತ್ತಿದೆ. ಮುಂದಿನ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸುವುದಾಗಿ ಖಚಿತಪಡಿಸಿದ ಅವರು ಖಚಿತಪಡಿಸಿದ್ದಾರೆ.

ಕ್ಷೇತ್ರ ಯಾವುದು?
ಕಳೆದ ಚುನಾವಣೆಯಲ್ಲಿ ಮುಳಬಾಗಿಲು ಮೀಸಲು ಕ್ಷೇತ್ರದಲ್ಲಿ ಕೊತ್ನೂರು ಮಂಜು ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು. ಆದರೆ, ಮತದಾನಕ್ಕೆ ಇನ್ನು ಒಂದು ವಾರ ಇದೆ ಎನ್ನುವಾಗ ಅವರಿಗೆ ಜಾತಿ ಸರ್ಟಿಫಿಕೇಟ್‌ ಸಮಸ್ಯೆ ಎದುರಾಗಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ಅವರ ಮೀಸಲು ಸಮಸ್ಯೆಯಿಂದಾಗಿ ಕಾಂಗ್ರೆಸ್‌ ಪಕ್ಷೇತರರಾಗಿ ಕಣದಲ್ಲಿದ್ದ ಎಚ್‌. ನಾಗೇಶ್‌ ಅವರನ್ನು ಬೆಂಬಲಿಸಿತು. ನಾಗೇಶ್‌ ಗೆದ್ದೇಬಿಟ್ಟರು.

ಈಗಲೂ ಕೊತ್ನೂರು ಮಂಜು ಅವರಿಗೆ ಸ್ಪರ್ಧೆಗೆ ಅವಕಾಶ ಸಿಗುವುದು ಕಷ್ಟ ಎಂದು ಹೇಳಲಾಗುತ್ತಿದೆ. ಅವರ ಜಾತಿ ವಿಚಾರದ ಗೊಂದಲ ಒಂದು ವೇಳೆ ಚುನಾವಣೆಗೆ ಮೊದಲು ಬಗೆಹರಿದರೆ ಮೀಸಲು ಕ್ಷೇತ್ರದ ಟಿಕೆಟ್‌ ಸಿಗಬಹುದು. ಅವರಿಗೆ ಅವಕಾಶ ಸಿಗದೆ ಹೋದರೆ ಮುಳಬಾಗಿಲು ನಾಗೇಶ್‌ ಅವರಿಗೆ ಗಟ್ಟಿಯಾಗುತ್ತದೆ. ಈಗ ನಡುವೆ, ಒಂದು ವೇಳೆ ಮುಳಬಾಗಿಲಿನಿಂದ ಕೊತ್ನೂರು ಮಂಜು ಅವರಿಗೇ ಅವಕಾಶ ಸಿಕ್ಕಿದರೆ ತನಗೆ ಮಹದೇವಪುರದಿಂದ ಟಿಕೆಟ್‌ ಕೊಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ.

ಹಾಗಂತ ಕಾಂಗ್ರೆಸ್‌ ಅವರಿಗೆ ಟಿಕೆಟ್‌ ಗ್ಯಾರಂಟಿ ಕೊಟ್ಟಿಲ್ಲ. ಎರಡೂ ಕ್ಷೇತ್ರಗಳಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಕೇಳಿಕೊಂಡು, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಟಿಕೆಟ್‌ ವಿಚಾರ ಫೈನಲ್‌ ಮಾಡುವುದಾಗಿ ಡಿ.ಕೆ ಶಿವಕುಮಾರ್‌ ಸ್ಪಷ್ಟವಾಗಿ ಹೇಳಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Karnataka Election | ಟಾರ್ಚ್ ಲೈಟಲ್ಲಿ ಬಜೆಟ್‌ ಓದಿದ ಸಿದ್ದರಾಮಯ್ಯ ಈಗ ಉಚಿತ ವಿದ್ಯುತ್‌ ಕೊಡ್ತಾರ?: ಪ್ರಶ್ನಿಸಿದ ಬಿಜೆಪಿ

Exit mobile version