ಚಿಕ್ಕಮಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ (Karnataka Election) ಸಮೀಪಿಸುತ್ತಿದೆ. ಈ ಮಧ್ಯೆ ರಾಜಕೀಯ ಪಕ್ಷಗಳಲ್ಲೂ ಚಟುವಟಿಕೆ ಗರಿಗೆದರಿದೆ. ಇತ್ತ ಹಲವು ಕಡೆ ಪ್ರತಿ ವರ್ಷದಂತೆ ಚುನಾವಣೆ ಬಹಿಷ್ಕಾರದ ಬೆದರಿಕೆಗಳು ಹುಟ್ಟಿಕೊಳ್ಳುತ್ತಿವೆ. ಈಗ ಕಾಫಿನಾಡಲ್ಲಿ ಮೊದಲ ಚುನಾವಣಾ ಬಹಿಷ್ಕಾರ ಪ್ರಕರಣವೊಂದು ಕೇಳಿಬಂದಿದೆ. ರಾಜಕೀಯ ಪಕ್ಷದ ವಿವಿಧ ಹುದ್ದೆಗಳಿಗೂ ರಾಜೀನಾಮೆ ನೀಡುವ ಮೂಲಕ ಗ್ರಾಮಸ್ಥರು ಪ್ರತಿಭಟಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಾಡುಗಾರ ಗ್ರಾಮದ ರಸ್ತೆಗಾಗಿ ಗ್ರಾಮಸ್ಥರು ಕಳೆದ ವಾರ ಆಗ್ರಹಿಸಿದ್ದರು. ದುರಸ್ತಿ ಮಾಡದೇ ಇದ್ದರೆ ಚುನಾವಣೆ ಬಹಿಷ್ಕಾರದ ಎಚ್ಚರಿಕೆಯನ್ನೂ ನೀಡಿದ್ದರು. ರಾಜೀನಾಮೆ ಎಚ್ಚರಿಕೆ ನೀಡಿದ್ದರೂ ಪರಿಹಾರ ಮಾತ್ರ ಸಿಕ್ಕಿರಲಿಲ್ಲ. ಗಡುವು ನೀಡಿದರೂ ರಸ್ತೆ ಮಾಡಲು ಮುಂದಾಗಲಿಲ್ಲ ಎಂಬ ಕಾರಣಕ್ಕೆ ಚುನಾವಣಾ ಬಹಿಷ್ಕಾರದ ಬ್ಯಾನರ್ ಹಿಡಿದಿರುವ ಗ್ರಾಮಸ್ಥರು ಮೂಲಭೂತ ಸೌಲಭ್ಯ, ರಸ್ತೆ, ಸೇತುವೆಗೆ ಆಗ್ರಹಿಸಿದ್ದಾರೆ.
ಬಿಜೆಪಿ ಕಾಂಗ್ರೆಸ್‌ಗೆ ರಾಜೀನಾಮೆ
ಬಿಜೆಪಿ, ಕಾಂಗ್ರೆಸ್, ಬೂತ್ ಸಮಿತಿಯ ಸದಸ್ಯತ್ವಕ್ಕೆ ಗ್ರಾಮದ ಹಲವರು ರಾಜೀನಾಮೆ ನೀಡಿದ್ದಾರೆ. ಇನ್ನಾದರೂ ಸ್ಥಳೀಯ ಆಡಳಿತ ಎಚ್ಚೆತ್ತು ಸಮಸ್ಯೆಗಳನ್ನು ಬಗೆಹರಿಸಬೇಕು. ಇಲ್ಲದಿದ್ದರೆ ಗ್ರಾಮದವರೆಲ್ಲರೂ ಚುನಾವಣೆಯನ್ನು ಬಹಿಷ್ಕಾರ ಮಾಡುತ್ತೇವೆ. ಯಾರೊಬ್ಬರೂ ಮತ ಹಾಕುವುದಿಲ್ಲ. ಅಲ್ಲದೆ, ರಸ್ತೆ ಮಾಡುವವರೆಗೆ ತಮ್ಮ ಗ್ರಾಮದಲ್ಲಿ ಯಾವುದೇ ರಾಜಕೀಯ ಚಟುವಟಿಕೆಯನ್ನು ನಡೆಸಲು ಬಿಡಲಾರೆವು ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | Elephant Attack | ನಾಡಿನಲ್ಲಿ ಒಂಟಿ ಸಲಗ ಬಿಂದಾಸ್ ಆಟ; ಹೇಮಾವತಿ ಬ್ಯಾಕ್ ವಾಟರ್‌ನಲ್ಲಿ ಈಜಾಡಿದ ಕಾಡಾನೆ