Site icon Vistara News

karnataka Election : ಪಕ್ಷ ಹೇಳಿದರೆ ಹಾಸನದಿಂದ ಸ್ಪರ್ಧೆ ಮಾಡೋಕೆ ನಾನ್‌ ರೆಡಿ ಎಂದ ಎಚ್‌.ಡಿ. ರೇವಣ್ಣ

Revanna is trying to get Hassan JDS ticket Karnataka Election 2023 updates

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ (karnataka Election) ಪತ್ನಿ ಭವಾನಿ ಮತ್ತು ಎಚ್‌.ವಿ. ಸ್ವರೂಪ್‌ ನಡುವೆ ಹುಟ್ಟಿಕೊಂಡಿರುವ ಟಿಕೆಟ್‌ ವಿವಾದವನ್ನು ತಣ್ಣಗೆ ಮಾಡಲು ಪ್ರಯತ್ನಿಸುತ್ತಿರುವ ಜೆಡಿಎಸ್‌ ನಾಯಕ ಎಚ್‌.ಡಿ. ರೇವಣ್ಣ ಅವರು ʻʻಪಕ್ಷ ಹೇಳಿದ್ರೆ ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡೋಕೆ ನಾನ್ ರೆಡಿʼʼ ಎಂದು ಹೇಳಿದ್ದಾರೆ.

ಹಾಸನ ಕ್ಷೇತ್ರದಿಂದ ಸ್ಪರ್ಧೆ ಮಾಡೋ ಇಂಗಿತ ಹೊರ ಹಾಕಿದ ರೇವಣ್ಣ ಅವರು ಹೊಳೆನರಸೀಪುರ ಹಾಸನ ಎರಡೂ ಕಡೆಯಿಂದ ಸ್ಪರ್ಧೆ ಮಾಡಿ ಗೊಂದಲ ನಿವಾರಣೆಗೆ ತಂತ್ರ ಹೂಡಿದಂತೆ ಕಾಣುತ್ತಿದೆ. ರೇವಣ್ಣ ಅವರು ಎರಡು ಕಡೆ ಸ್ಪರ್ಧೆಗೆ ಪ್ಲ್ಯಾನ್‌ ಮಾಡಿದ್ದಾರೆ ಎಂಬ ಸುದ್ದಿ ಈಗಾಗಲೇ ಹರಡಿತ್ತು. ಆದರೆ, ಹಾಸನದಿಂದ ಸ್ಪರ್ಧೆಗೆ ರೆಡಿ ಎಂದು ಮೊದಲ ಬಾರಿ ಹೇಳಿದ್ದಾರೆ ರೇವಣ್ಣ.

ಹಾಸನದ ಸಂಸದರ ನಿವಾಸದಲ್ಲಿ ಮಾತನಾಡಿದ ರೇವಣ್ಣ ಅವರು, ಶಾಸಕ ಪ್ರೀತಂ ಗೌಡ ವಿರುದ್ಧ ಸ್ಪರ್ಧೆಗೆ ನಾನು ಸಿದ್ಧ ಎಂದರು. ʻʻತಮ್ಮ ವಿರುದ್ಧ ರೇವಣ್ಣ ಸ್ಪರ್ಧೆ ಮಾಡಿದ್ರೆ ಐವತ್ತು ಸಾವಿರಕ್ಕಿಂತ ಒಂದು ಮತಗಳ ಅಂತರ ಕಡಿಮೆಯಾದ್ರು ರಾಜಿನಾಮೆ ನೀಡಿ ಚುನಾವಣೆಗೆ ಹೋಗ್ತೀನಿʼʼ ಎಂದು ಶಾಸಕ ಪ್ರೀತಂ ಗೌಡ ಸವಾಲು ಹಾಕಿದ್ದರು.

ʻʻನೋಡೋಣ ಪಕ್ಷ ಏನ್ ಹೇಳುತ್ತೆ ಕೇಳೋಣ. ನನಗೇನು? ನಾನು ಎಲ್ಲಿ ಟಿಕೆಟ್ ಕೊಟ್ರೂ ಸ್ಪರ್ಧಿಸಲು ರೆಡಿ. ಕೆಲವರು ಹೇಳೋ ಚಾಲೆಂಜ್ ಸ್ವೀಕಾರ ಮಾಡಬೇಕು ಅಲ್ವಾ? ಕುಮಾರಸ್ವಾಮಿ ಅವರೇ ನಮ್ಮ ನಾಯಕರು, ಅವರು ಹೇಳಿದಂತೆ ಕೇಳ್ತೀನಿʼʼ ಎಂದರು ರೇವಣ್ಣ.

ʻʻಬಿಜೆಪಿ ಮತ್ತು ಕಾಂಗ್ರೆಸ್‌ನವರು ಕುಮಾರಸ್ವಾಮಿ ಮತ್ತು ರೇವಣ್ಣ ಹೊಡೆದಾಡ್ತಾರೆ ಅಂದುಕೊಂಡಿದ್ದರೆ ಅದು ಭ್ರಮೆ. ಕುಮಾರಸ್ವಾಮಿ ಆರೋಗ್ಯ ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾರೆ. ಕೊಟ್ಟ ಮಾತಿನಂತೆ ನಡೆಯೋ ವ್ಯಕ್ತಿ ಕುಮಾರಸ್ವಾಮಿʼʼ ಎಂದರು.

ʻʻಕೆಲವರು ಬಟ್ಟೆ ಇಸ್ತ್ರಿ ಮಾಡಿಕೊಂಡು ಓಡಾಡುತ್ತಿದ್ದಾರೆ. ನಮ್ ಬಸ್ ಹತ್ತಿ ಅಂತಿದಾರೆ, ಆದ್ರೆ ಅದು ಡಕೋಟಾ ಬಸ್. ಅದಕ್ಕೆ 70 ವರ್ಷ ಆಗಿದೆ, ಮೋದಿಯವರು ಈ ಬಸ್ಸನ್ನು ಯಾವಾಗ ಗ್ಯಾರೇಜ್ ಗೆ ಕಳಿಸ್ತಾರೊ ಎನ್ನೋ ಭಯ ಕೂಡ ಇದೆ ಬಸ್ ಹತ್ತೋರಿಗೆʼʼ ಎಂದು ಕಾಂಗ್ರೆಸ್ ವಿರುದ್ಧ ರೇವಣ್ಣ ಲೇವಡಿ ಮಾಡಿದರು.

ʻʻಅದು ಅರವತ್ತು ವರ್ಷದ ಬಸ್, ನಮ್ಮದು ಹೊಸಾದು ಲೈಲ್ಯಾಂಡ್ ಬಸ್. ಆರ್ಡಿನರಿ ಬಸ್‌ ಆದ್ರೂ ಸರಿಯಾಗಿ ತಲುಪುತ್ತೆʼʼ ಎಂದು ಹೇಳಿದರು.

ಇದನ್ನೂ ಓದಿ : JDS Politics: ಎಚ್‌.ಡಿ. ಕುಮಾರಸ್ವಾಮಿ ತಂತ್ರವನ್ನೇ ಬಳಸಿ ಹಾಸನ ಟಿಕೆಟ್‌ ಕೇಳಿದ ಎಚ್‌.ಡಿ. ರೇವಣ್ಣ: ಬಿಗ್‌ ಬ್ರದರ್‌ ಹೊಸ ವರಸೆ

Exit mobile version