Site icon Vistara News

KM Shivalingegowda : ಕಾಂಗ್ರೆಸ್‌ ಸೇರುವ ದಾರಿಯಲ್ಲಿರುವ ಶಿವಲಿಂಗೇ ಗೌಡರಿಗೆ ನಂಬಿದವರೇ ಕೈಕೊಡುತ್ತಿದ್ದಾರಾ?: ಸ್ಫೋಟಕ ಆಡಿಯೋದಲ್ಲಿ ಏನಿದೆ?

Vasu-Shivalinge gowda

ಹಾಸನ: ಚುನಾವಣೆ ಸಮೀಪಿಸುತ್ತಿದ್ದಂತೆಯೇ ಹಾಸನ ಜಿಲ್ಲೆಯಲ್ಲಿ ರಾಜಕೀಯ ಜೋರಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರುವ ದಾರಿಯಲ್ಲಿರುವ ಅರಸೀಕೆರೆ ಶಾಸಕ ಕೆ.ಎಂ. ಶಿವಲಿಂಗೇ ಗೌಡರು (KM Shivalingegowda) ಮುಂದೆ ಹೇಗೆ ಎನ್ನುವ ವಿಚಾರದಲ್ಲಿ ಭಾರಿ ಸಮಾಲೋಚನೆಗಳನ್ನು ನಡೆಸುತ್ತಿದ್ದಾರೆ. ಜೆಡಿಎಸ್‌ನಲ್ಲಿದ್ದಾಗ ಜತೆಗಿದ್ದ ಎಲ್ಲರೂ ತಮ್ಮ ಜತೆಗೆ ಬರುವುದಿಲ್ಲ ಎನ್ನುವುದು ಅವರಿಗೆ ಗೊತ್ತು. ಆದರೆ, ನಂಬಿದವರೇ ಕೈ ಕೊಡುತ್ತಿದ್ದಾರಾ ಎನ್ನುವ ಪ್ರಶ್ನೆಯೊಂದು ಅವರನ್ನು ಕಾಡುತ್ತಿದೆ.

ಶಿವಲಿಂಗೇಗೌಡರು ಈ ಹಿಂದೆ ತಮಗೆ ತುಂಬಾ ಆತ್ಮೀಯರಾಗಿದ್ದ ವಾಸು ಎಂಬವರಿಗೆ ಮಾಡಿರುವ ಕರೆಯೊಂದು ವೈರಲ್‌ ಆಗಿದೆ. ವಾಸು ಅವರು ಜಕ್ಕನಹಳ್ಳಿ ಗ್ರಾ.ಪಂ ಸದಸ್ಯೆ ಸೌಮ್ಯ ಪತಿ. ವಾಸು ಅವರಿಗೆ ಶಿವಲಿಂಗೇ ಗೌಡರು ಈ ಹಿಂದೆ ಐವತ್ತು ಸಾವಿರ ರೂ. ಸಹಾಯ ಮಾಡಿದ್ದರು. ಅಂದರೆ ಈ ಮನುಷ್ಯ ಯಾವತ್ತೂ ತನ್ನ ಜತೆಗೆ ಇರುತ್ತಾನೆ ಎಂಬ ನಂಬಿಕೆಯಿಂದ. ಆದರೆ, ಈಗ ವಾಸು ತಮ್ಮ ಕೈ ಬಿಡುತ್ತಿರುವ ಬಗ್ಗೆ ಶಿವಲಿಂಗೇ ಗೌಡರಿಗೆ ಸೂಚನೆ ಸಿಗುತ್ತಿದ್ದಂತೆಯೇ ಅವರು ವಾಸು ಅವರನ್ನು ಮಾತನಾಡಿಸಿದ್ದಾರೆ. ತಾನು ಹಿಂದೆ ಕೊಟ್ಟಿರುವ ಹಣವನ್ನು ವಾಪಸು ಕೊಡುವಂತೆ ಕೇಳಿದ್ದಾರೆ. ಆದರೆ ವಾಸು ತಾನೇನೂ ನಿಮ್ಮ ಬಳಿ ಹಣ ಕೇಳಿರಲಿಲ್ಲ ಎನ್ನುತ್ತಾರೆ. ಆಗ ಶಿವಲಿಂಗೇ ಗೌಡರು ಇದನ್ನು ಒಪ್ಪಿಕೊಳ್ಳುತ್ತಾರೆ. ಆತ್ಮೀಯ ಎಂಬ ಕಾರಣಕ್ಕೆ ಸಹಾಯದ ರೂಪದಲ್ಲಿ ನೀಡಿದ್ದೆ ಎಂದು ಒಪ್ಪಿಕೊಳ್ಳುತ್ತಾರೆ. ಈ ಬಗ್ಗೆ ಪೊಲೀಸ್‌ ಕಂಪ್ಲೇಂಟ್‌ ಕೊಡುತ್ತೀರಾ? ಕೊಲೆ ಮಾಡಿಸುತ್ತೀರಾ ಎಂದೆಲ್ಲ ವಾಸು ಕೇಳಿದರು ಶಿವಲಿಂಗೇ ಗೌಡರು ಮಾತ್ರ ತಣ್ಣಗೆ ಉತ್ತರ ನೀಡುತ್ತಾರೆ. ಈ ಆಡಿಯೊ ಶಿವಲಿಂಗೇ ಗೌಡರಿಗೆ ಜೆಡಿಎಸ್‌ ನಾಯಕರು ಕೈಕೊಡುತ್ತಿರುವುದರ ಸೂಚನೆಯಾಗಿದೆ. ಹಾಗಂತ ಅವರು ನಂಬಿಕೊಂಡಿರುವುದು ಜೆಡಿಎಸ್‌ನ್ನು ಅಲ್ಲ, ಕಾಂಗ್ರೆಸ್‌ನ್ನು!

ಹಾಗಿದ್ದರೆ ಆಡಿಯೊದಲ್ಲಿ ಏನಿದೆ? ಮುಂದೆ ಓದಿ ಮತ್ತು ಕೇಳಿ..

https://vistaranews.com/wp-content/uploads/2023/01/WhatsApp-Audio-2023-01-24-at-08.24.02.mp3
ಶಿವಲಿಂಗೇಗೌಡ ಮತ್ತು ವಾಸು ಅವರ ನಡುವಿನ ಸಂಭಾಷಣೆಯ ಆಡಿಯೊ

ಶಾಸಕ ಶಿವಲಿಂಗೇಗೌಡ: ಹೇ ವಾಸು ನೀನು ಆ ಕಡೆ ಪೂರ್ತಿ ನಿಂತಿದ್ದೀಯಾ, ಹೋಗು ನೀನು ಆಕಡಿಕೆಯಾ, ನನ್ನ ಹತ್ರ ಅವತ್ತು ಐವತ್ತು ಸಾವಿರ ದುಡ್ಡು ಇಸ್ಕಂಡು ಹೋದಲ್ಲ.. ಅದನ್ನ ತಂದು ಕೊಡು.

ವಾಸು: ನಿಮ್ಮ ಹತ್ರ ದುಡ್ಡು ಕೇಳಲು ಬಂದಿದ್ನಾ ಅಣ್ಣಾ ನಾನು..

ಶಾಸಕ ಶಿವಲಿಂಗೇಗೌಡ: ನೀನು ಬಂದಿರಲಿಲ್ಲಾ, ನಾನೇ ನಿನಗೆ ಸಹಾಯ ಮಾಡಕೆ ಅಂತಾ ಕೊಟ್ಟಿದ್ದೆ.. ನೀನು ಆ ಕಡೆ ಹೋದ ಮೇಲೆ ನಮ್ಮ ದುಡ್ಡು ಕೊಟ್ಟು ಹೋಗು..

ವಾಸು: ನಮ್ಮನ್ನ ಲೆಕ್ಕಕ್ಕೆ ಇಟ್ಕಳ್ದಿರಾ ಮೇಲೆ ನಾನೇಕೆ ಇರಬೇಕಣ್ಣ..

ಶಾಸಕ ಶಿವಲಿಂಗೇಗೌಡ: ಆಯ್ತು ನಿನ್ನನ್ನ ಲೆಕ್ಕಕ್ಕೂ ಇಟ್ಕಂಡಿಲ್ಲಾ, ಇದಕ್ಕೂ ಇಟ್ಕಂಡಿಲ್ಲ, ಪ್ರಶ್ನೆ ಬೇಡವಲ್ಲಪ್ಪ, ನಾನೇದ್ರು ನಿನ್ನ ಯಾಕೆ ಹೋಗಿದಿಯಾ ಅಂತ ಕೇಳಿದ್ನಾ..

ವಾಸು: ನಾನೇನಾದ್ರು ದುಡ್ಡು ಕೇಳಕೆ ಬಂದಿದ್ನ ಅಣ್ಣಾ..

ಶಾಸಕ ಶಿವಲಿಂಗೇಗೌಡ: ನೀನು ಕೇಳಕೆ ಬಂದಿದ್ದೀಯಾ, ಬಂದಿರಲಿಲ್ಲಾ ಅಂತ ಅಲ್ಲಾ.. ನಾನು ಏನು ಹೇಳಿದ್ದೆ, ನೀನು ನನಗೆ ಮುಂದಿನ ಸಾರಿ ಎಲೆಕ್ಷನ್‌ನಲ್ಲಿ ಸಹಾಯ ಮಾಡು ಅಂತಾ ನಾನು ನಿನಗೆ ಕೊಟ್ಟಿದ್ದೆ, ನೀನು ಏನು ಹೇಳಿದ್ದೆ, ನೀವೇನು ಏನ್ ತೀರ್ಮಾನ ತಗೋತಿರೋ ಎಂಎಲ್‌ಎ ಎಲೆಕ್ಷನ್‌ಗೆ ನಿಮಗೆ ಮಾಡ್ತಿವಿ, ಪಾರ್ಲಿಮೆಂಟ್‌ಗೆ ಆ ಕಡೆ ಮಾಡ್ತೀವಿ ಅಂತಾ ಹೇಳಿದ್ದೆ..

ವಾಸು: ಒಂದು ಉಪಾಧ್ಯಕ್ಷ ಕೊಡ್ಸಿ ಅನ್ನುವತ್ತಿಗೆ..

ಶಾಸಕ ಶಿವಲಿಂಗೇಗೌಡ: ನಾನು ಯಾವ ಉಪಾಧ್ಯಕ್ಷ ಕೊಡ್ಸಕು, ನಿಮ್ಮ ಗ್ರಾ.ಪಂ.ಗೂ ಸಂಬಂಧವಿಲ್ಲ, ಒಂದೊಂದು ಊರಿಗೂ ಅಧ್ಯಕ್ಷನು ಕೊಡಲ್ಲ.. ಉಪಾಧ್ಯಕ್ಷನೂ ಕೊಡಲ್ಲ, ಅದೆಲ್ಲಾ ಮಾತುಕತೆ ಆಗೋಗಿದೆ, ಯಾವತ್ತು ನೀನೇನ್ ಉಪಾಧ್ಯಕ್ಷನು ನೀನು ಕೇಳಿಲ್ಲ, ಅದು ಪ್ರಶ್ನೆ ಬೇಡ

ವಾಸು: ಕೇಳಿ ಕೊಟ್ಟಿಲ್ಲ, ಕೇಳಿ ನಿಮ್ಮ ಜಟ್ಟಿಯವರನ್ನೇ, ಕೇಳಿ ಕೊಡದ್ದಕ್ಕೆ ಹೋಗಿದ್ಕೆ ವಿರುದ್ಧ ಮಾಡಿದ್ದು.

ಶಾಸಕ ಶಿವಲಿಂಗೇಗೌಡ: ನೀನು ಯಾವಾಗ್ಲಾದ್ರು ವಿರುದ್ಧ ಹೋಗು, ನೀನು ಹೋಗು, ನಾನೇನ್ ಬೇಡ ಅಂದಿದ್ದೀನಾ, ನಿನ್ನಿಷ್ಟ ಅದು ನಾನೇನ್ ಇದ್ ಮಾಡಿದಿನಾ, ನೀನು ನನ್ನ ಹತ್ರ ಇಸ್ಕಂಡಿದ್ದು ಕೊಡು, ಅದನ್ನು ಇನ್ನೊಬ್ಬನಿಗೆ ಕೊಟ್ಟು ಕರ್ಕತೀನಿ.. ಎಲೆಕ್ಷನ್ ಇದು.

ವಾಸು: ನಾನೇನಾದ್ರು ದುಡ್ಡು ಕೊಡಿ ಅಂತ ನಿಮ್ಮ ಹತ್ರ ಕೇಳಲು ಬಂದಿದ್ದೀನಾ?

ಶಾಸಕ ಶಿವಲಿಂಗೇಗೌಡ: ಲೇ ನಾನೇನಾದ್ರು ನೀನ್ ಕೇಳ್ದೆ ಅಂತಾ ಹೇಳಿದ್ನಾ ಇಲ್ಲಾ, ನಾನು ನಿನಗೆ ನನ್ನ ಹತ್ತಿರ ಇರು ಅಂತ ಕೊಟ್ಟಿದ್ದೆ, ನೀನು ನನ್ನ ಹತ್ರ ಇರು ಅಂತ ಕೊಟ್ಟಿದ್ದೆ, ನೀನು ನನ್ನ ಹತ್ರ ಇಲ್ಲಾ, ನನ್ನ ದುಡ್ಡು ಕೊಡು ಅಷ್ಟೇ..

ವಾಸು: ನಾನು ಎಲ್ಲಿದ್ದೀನಿ ಅಲ್ಲೇ ಇದಿನಿ ಕಣಣ್ಣಾ, ನಾನು ಎಲ್ಲೂ ಹೋಗಿಲ್ಲ ಕಣಣ್ಣಾ, ಇರತಲೇ ಇರೋದು

ಶಾಸಕ ಶಿವಲಿಂಗೇಗೌಡ: ನೀನು ಎಲ್ಲಾದರೂ ಹೋಗು, ನೀನು ತಿರುಪತಿಗೆ ಹೋಗು ನಾನು ಇದ್ದಿತ್ತಾ ಇರ್ತಿನಿ ಅಂಥಾ ಹೇಳಿದ್ದು ನೀನು, ನನಗೆ ಗೊತ್ತಿಲ್ಲ ನಾಳೆ ಬೆಳಿಗ್ಗೆ, ನನಗೆ ಕ್ಯಾನ್‌ವಸ್ ಮಾಡ್ಬೇಕು

ವಾಸು: ಕ್ಯಾನ್ವಾಸ್‌ ಮಾಡಲು ಆಗಲ್ಲ ಅಂತ ನಾನು ಹೇಳಿದ್ದು, ನಿಮಗೆ ಒಂದು ಓಟು ಮಾಡಬೇಕು ಮಾಡ್ರೀನಿ ಅಂತ ಹೇಳಿದ್ದು..

ಶಾಸಕ ಶಿವಲಿಂಗೇಗೌಡ: ಒಂದು ಓಟಿಗೆ ಯಾವನು ಕೊಡಲ್ಲ ನಿನಗೆ..

ವಾಸು: ನಾನೇದ್ರು ದುಡ್ಡು ಕೇಳಲು ಬಂದಿದ್ನಾ ನಿಮ್ಮ ಹತ್ರವಾ

ಶಾಸಕ ಶಿವಲಿಂಗೇಗೌಡ: ಏಯ್ ನೀನು ಕೇಳ್ಳಿಲ್ಲಾ ಅಂತ ಹೇಳ್ಲಿಲ್ವಾ ನಾನು, ನಾನೇ ಕೊಟ್ಟಿದಿನಿ ಈಗ ಕೊಡು

ವಾಸು: ನನ್ನ ಹತ್ರ ದುಡ್ಡಿಲ್ಲ ಕಣಣ್ಣೋ..

ಶಾಸಕ ಶಿವಲಿಂಗೇಗೌಡ: ದುಡ್ಡು ಇಲ್ಲಾ ಅಂದ್ರೆ ಹರಾಜ್ ಆಯ್ತಿಯಾ..

ವಾಸು: ಏನುಕ್ಕೆ ಹರಾಜ್ ಹಾಕ್ತೀರಾ? ನಾನೇನ್ ನಿಮ್ಮ‌ ಹತ್ರ ದುಡ್ಡು ಕೇಳಲು ಬಂದಿದ್ನಾ?

ಶಾಸಕ ಶಿವಲಿಂಗೇಗೌಡ: ನಾನು ಸಾಲ ಕೊಟ್ಟಿರೋದು ಕೊಡು ದುಡ್ಡು..

ವಾಸು: ಸಾಲ ಯಾರಿಗೆ ಕೊಟ್ಟಿದ್ದೀರಾ ಅಣ್ಣಾ..

ಶಾಸಕ ಶಿವಲಿಂಗೇಗೌಡ: ನಿನಗೆ ಕೊಟ್ಟಿದ್ದೀನಿ, ಯಾರು ಕೊಟ್ಟಿದ್ರು ಅವರತ್ರ ಕೇಳು..

ವಾಸು: ನಮಗೆ ಸಾಲ ಅಂತೇನು ಕೊಟ್ಟಿಲ್ಲ..

ಶಾಸಕ ಶಿವಲಿಂಗೇಗೌಡ: ಯಾರ ಹತ್ರ ಕೊಡ್ಸಿದೀನಿ ಅವರ ಸಾಕ್ಷಿ ಇಟ್ಕಂಡು ಕೊಡ್ಸಿದಿನಿ

ವಾಸು: ಕಂಪ್ಲೆಂಟ್ ಕೊಡ್ತೀರಾ.. ಕೊಡಿ ಅಣ್ಣಾ..

ಶಾಸಕ ಶಿವಲಿಂಗೇಗೌಡ: ನಿನ್ ಮೇಲೆ ಕಂಪ್ಲೆಂಟ್ ಯಾಕ್ ಕೋಡಕೋಗ್ಲಿ, ನಿನು ದೊಡ್ಡ ಮನುಷ್ಯ, ಲೇ ದೊಡ್ಡ ಮನುಷ್ಯ ನೀನು ಅಂತಾ ಕಂಪ್ಲೆಂಟ್ ಕೊಡ್ತಾರೆ

ವಾಸು: ದೊಡ್ಡ ಮನುಷ್ಯ ಅಲ್ಲಾ ಕಣಣ್ಣಾ, ನಾನು ಇರೋದೆ ಹೇಳ್ತಿರೋದು, ನಾನೇನ್ ನಿಮ್ಮ ಹತ್ರ ದುಡ್ಡು ಕೊಡಿ ಅಂತಾ ಕೇಳಕೆ ಬಂದಿದ್ನಾ?

ಶಾಸಕ ಶಿವಲಿಂಗೇಗೌಡ: ಈಗ ನೀನು ಏನಾದ್ರು ಹೇಳು, ಗೌರವದಿಂದ ತಂದು ನೀನ್ ಹೆಂಗೆ ಇಸ್ಕಂಡು ಹೋದೆ ಹಂಗೆ ಕೊಟ್ಟು ಹೋಗು..

ವಾಸು: ನಾನು ಹೇಳ್ತೀನಿ.. ಕೇಳಣ್ಣ..

ಶಾಸಕ ಶಿವಲಿಂಗೇಗೌಡ: ನೀನು ಕೊಡ್ದಲೆ ಹೋದ ಮೇಲೆ ಮಾತು, ಈಗ ಯಾಕೆ ಸುಮ್ನೆ ತಂದು ಕೊಡು ದುಡ್ಡಾ, ನಾಲ್ಕು ಜನಕ್ಕೆ ಗೊತ್ತಾಗೋ‌ ಮೊದ್ಲು ದುಡ್ಡು ತಂದು ಕೊಟ್ಟೋಗು..

ವಾಸು: ಏನಾದ್ರೂ ಕೊಲೆ ಮಾಡುಸ್ತೀರಾ ಈಗ..

ಶಾಸಕ ಶಿವಲಿಂಗೇಗೌಡ: ನಿನ್ ಕೊಲೆ ಮಾಡಿ ಜೈಲಿಗೆ ಹೋಗೋನಾ ಅಂತಾ ಇದ್ದೀನಿ ಈಗ..

ವಾಸು: ಕೊಲೆ ಮಾಡುಸ್ತಿರಾ?

ಶಾಸಕ ಶಿವಲಿಂಗೇಗೌಡ: ನಾನು ಏನು ಮಾಡಲ್ಲ..

ವಾಸು: ನಾನು ದುಡ್ಡು ಕೇಳಲು ಬಂದಿದ್ನ ಅಣ್ಣಾ..

ಶಾಸಕ ಶಿವಲಿಂಗೇಗೌಡ: ನೀನು ಕೇಳಲು ಬಂದಿರಲಿಲ್ಲ, ನಾನೇ ಕೊಟ್ಟಿದ್ದೇ, ಏತಕ್ಕೆ ಕೊಟ್ಟಿದ್ದೆ ನಿನಗೆ?

ವಾಸು: ನನ್ನ ಹತ್ರ ದುಡ್ಡು ಇಲ್ಲಾ ಈಗ..

ಶಾಸಕ ಶಿವಲಿಂಗೇಗೌಡ: ಲೇ ಯಕ್ಲಾ ಕೊಟ್ಟಿದ್ದೆ ನಿನಗೆ ದುಡ್ಡು, ನಿನಗೆ ಯಾಕೋ ಕೊಟ್ಟಿದ್ದೆ ದುಡ್ಡು, ನಾನು ಇದ್ದಿತ್ತಾ ನೀನು ಇರಬೇಕು, ನನಗೆ ಎಂಎಲ್‌ಎ ಎಲೆಕ್ಷನ್‌ಗೆ ಸಹಾಯ ಮಾಡಬೇಕು ಅಂತ, ನನಗೆ ಸಹಾಯ ಮಾಡು..

ವಾಸು: ಸಹಾಯ ಮಾಡಲ್ಲ.. ನಾನು ಇರೋದು ಒರಿಜಿನಲ್ ಜೆಡಿಎಸ್, ಜೆಡಿಎಸ್‌ನಲ್ಲೇ ಇರೋದು..

ಶಾಸಕ ಶಿವಲಿಂಗೇಗೌಡ: ಆಯ್ತು ನೀನು ಜೆಡಿಎಸ್ ಇದ್ಕೋ‌, ನೀನು ಏನ್ ಅಂದೆ ಎಂಎಲ್‌ಎ ಎಲೆಕ್ಷನ್‌ಗೆ ನಿಮಗೆ, ಪಾರ್ಲಿಮೆಂಟ್ ಎಲೆಕ್ಷನ್‌ಗೆ ಅವರಿಗೆ ಮಾಡ್ತಿನಿ ಅಂತ ಹೇಳ್ಲಿಲ್ಲಾ..

ವಾಸು: ಮಾಡ್ತೀನಿ ಅಂತಾ ಹೇಳಿದ್ದೆ, ನನಗೂ ಒಂದು ಸಹಾಯ ಮಾಡ್ತಿರಾ ಅಂತ, ಸಹಾಯ ಮಾಡ್ಲಿಲ್ವಾ ನೀವು?

ಶಾಸಕ ಶಿವಲಿಂಗೇಗೌಡ: ಏನ್ ಸಹಾಯ, ನಿನಗೆಂತಾ ಸಹಾಯ ಮಾಡಣ ನಾನು, ಯಾವ ಸಹಾಯನೂ ನೀನು ಕೇಳಿಲ್ಲ

ವಾಸು: ಯಾಕೆ ಕೇಳಿಲ್ಲಾ, ಎಷ್ಟು ಸಾರಿ ಬಂದು ಕೇಳಿದೀನಿ?

ಶಾಸಕ ಶಿವಲಿಂಗೇಗೌಡ: ಅವೆಲ್ಲಾ ಈಗ ಮಾತು ಬೇಡ, ಮರ್ಯಾದೆಯಿಂದ ದುಡ್ಡು ಕೊಡು, ನನ್ನ ಋಣದಲ್ಲಿ ಬಿದ್ದು ಸಾಯಿ, ಇಲ್ಲಾ ಅಂದ್ರೆ ದುಡ್ಡು ತಂದು ಕೊಡು

ವಾಸು: ನನ್ನ ಹತ್ತಿರ ದುಡ್ಡು ಇಲ್ಲಾ, ಕೊಲೆ ಮಾಡುಸ್ತಿರಾ…

ಶಾಸಕ ಶಿವಲಿಂಗೇಗೌಡ: ಕೊಲೆ, ಹೋಹೋ ಲೇ, ನಾಚಿಕೆ ಆಗಲ್ವಾ ನಿನಗೆ, ಕೊಲೆ ಮಾಡಕೆ ಬರ್ತರೆ ಇವ್ನಾ

ವಾಸು: ನನೇಗೆಕೆ ನಾಚಿಕೆ ಆಗಬೇಕು, ನಾನು ಗೆದ್ದಿದೀನಿ., ನಮ್ಮ ಅಪ್ಪನು ಗೆದ್ದಿದ್ದಾನೆ, ಯಾರ ಋಣದಲ್ಲೂ ಇಲ್ಲಾ ಅಣ್ಣಾ, ನಾನು ನಿಮ್ಮ ಹತ್ರ ಬಂದು ದುಡ್ಡು ಕೇಳಿಲ್ಲ, ನಾವು ಯಾರ ಋಣಾನೂ ತಿಂದಿಲ್ಲ..

ಶಾಸಕ ಶಿವಲಿಂಗೇಗೌಡ: ನೀನು ಯಾವನಿಗೆ ಗೆದ್ದಿದೀಲಾ.. ನಿಮ್ಮ ಅಪ್ಪ ಗೆದ್ರೆ ನಿಮ್ಮ ಅಪ್ಪ ತಗೊಂಡು ಹೋಗವ್ನೆ, ನೀನು ಗೆದ್ದಿದ್ರೆ ನೀನ್ ತಗೊಂಡು ಹೋಗಿದಿಯಾ?

ವಾಸು: ಏನು ಮಾಡಿಲ್ಲ ನಮಗೆ, ಏನ ಮಾಡಿಲ್ಲ..

ಶಾಸಕ ಶಿವಲಿಂಗೇಗೌಡ: ನಿನಗೆ ಏನ್ ನನ್ ತಡ್ಲು ಮಾಡ್ತಾರೆ, ಏನ್ ಮಾಡ್ತಾರೆ ನಿನಗೆ ಹುಣಸೆಕಾಯಾ?

ವಾಸು: ಏನು ಮಾಡಿಲ್ಲ ನಮಗೆ?

ಶಾಸಕ ಶಿವಲಿಂಗೇಗೌಡ: ಏನ್ ಮಾಡ್ತಾರೆ ನಿನಗೆ, ಏನ್ಗೆ ಗೇದಿದ್ದಿಯಾ, ಎಂತಹದ್ದೂ ಗೇದ್ದಿದಿಲಾ ನೀನು

ವಾಸು: ಏನ್ ಗೇದಿಲ್ವಾ?

ಶಾಸಕ ಶಿವಲಿಂಗೇಗೌಡ: ಏನ್ ಗೇದಿದ್ದಾ ನೀನು ನನಗೆ?

ವಾಸು: ಗೇದಿರದ್ದಕ್ಕೆ ಹೇಳ್ತಿರೋದು..

ಶಾಸಕ ಶಿವಲಿಂಗೇಗೌಡ: ಏನ್ ಗೇದಿದಿಯಾ ಲೇ ನೀನು, ಮಾನ ಮರ್ಯಾದೆ ಇಲ್ಲಾ?

ವಾಸು: ನಾನೇದ್ರು ನಿಮ್ಮ‌ ಮನೆ ಬಾಗಿಲಿಗೆ ದುಡ್ಡು ಕೇಳಲು ಬಂದಿದ್ದೀನಾ ನಾನು..

ಶಾಸಕ ಶಿವಲಿಂಗೇಗೌಡ: ನೀನು ಕೇಳಲು ಬಂದಿರಲಿಲ್ಲ, ನಾನೇ ಕೊಟ್ಟೆ ಕರೆದು

ವಾಸು: ನನ್ನ ಹತ್ರ ಈಗ ಇಲ್ಲಾ

ಶಾಸಕ ಶಿವಲಿಂಗೇಗೌಡ: ಇದ್ದಾಗಲೇ ತಂದು ಕೊಡು

ವಾಸು: ಹೂ ಸರಿ ಬಿಡಿ, ನಿಮ್ಮ ಇದು ಮಾಡ್ಕಳಕೆ ನಮ್ಮನ್ನು ಯಾಕೆ ಬಲಿಪಶು ಮಾಡ್ತೀರಾ?

ಫೋನ್ ಕಟ್…ಆಯ್ತು..

ಇದನ್ನೂ ಓದಿ | Karnataka Election: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳದಲ್ಲಿ ಸ್ಪರ್ಧೆ: ಪ್ರಮೋದ್‌ ಮುತಾಲಿಕ್‌

Exit mobile version