Site icon Vistara News

Karnataka Election | 93 ಜೆಡಿಎಸ್‌ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ; ನಿಖಿಲ್‌ಗೆ ರಾಮನಗರ, ಇಬ್ರಾಹಿಂ ಪುತ್ರನಿಗೆ ಟಿಕೆಟ್‌

We have already decided with whom we are going to form the government says jds

ಬೆಂಗಳೂರು: ಅನೇಕ ದಿನಗಳಿಂದಲೂ ಮುಂದೂಡಿಕೆಯಾಗುತ್ತಲೇ ಬಂದಿದ್ದ ಜನತಾದಳ ಜಾತ್ಯತೀತ ಪಕ್ಷದ 93 ಅಭ್ಯರ್ಥಿಗಳ ಪಟ್ಟಿಯನ್ನು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಒಪ್ಪಿಗೆಯ ಮೇರೆಗೆ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಬಿಡುಗಡೆ ಮಾಡಿದ್ದಾರೆ.

ಮುಖ್ಯವಾಗಿ ಎಚ್‌.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರಿಗೆ ರಾಮನಗರದಲ್ಲಿ ಟಿಕೆಟ್‌ ನೀಡಲಾಗಿದ್ದರೆ, ಸ್ವತಃ ಕುಮಾರಸ್ವಾಮಿ ಚನ್ನಪಟ್ಟಣವನ್ನು ಉಳಿಸಿಕೊಂಡಿದ್ದಾರೆ. ಈ ಹಿಂದೆ ಪಕ್ಷ ಬಿಡುವ ತೀರ್ಮಾನ ಮಾಡಿ ನಂತರ ಮನವೊಲಿಕೆ ಮಾಡಲಾಗಿದ್ದ ಜಿ.ಟಿ. ದೇವೇಗೌಡ ಅವರಿಗೆ ಚಾಮುಂಡೇಶ್ವರಿಯಿಂದ, ಪುತ್ರ ಜಿ.ಡಿ. ಹರೀಶ್‌ ಗೌಡಗೆ ಹುಣಸೂರಿನಿಂದ ಟಿಕೆಟ್‌ ನೀಡಲಾಗಿದೆ.

ಮಾಜಿ ಶಾಸಕ ಅಪ್ಪಾಜಿಗೌಡ ಅವರ ಪತ್ನಿ ಶಾರದಾ ಅಪ್ಪಾಜಿ ಗೌಡ ಅವರಿಗೆ ಭದ್ರಾವತಿಯಿಂದ, ಸಿ.ಎಂ. ಇಬ್ರಾಹಿಂ ಪುತ್ರ ಸಿ.ಎಂ. ಫಯಾಜ್‌ಗೆ ಹುಮನಾಬಾದ್‌ನಿಂದ ಟಿಕೆಟ್‌ ಘೋಷಣೆ ಮಾಡಲಾಗಿದೆ.

ಪಕ್ಷದ ವಿರುದ್ಧ ಮತ ಚಲಾಯಿಸಿ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಕೆ. ಶ್ರೀನಿವಾಸಗೌಡ ಪ್ರತಿನಿಧಿಸುವ ಕೋಲಾರಕ್ಕೆ ಸಿ.ಎಂ.ಆರ್‌. ಶ್ರೀನಾಥ್‌, ಗುಬ್ಬಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ವಿರುದ್ಧ ಮಾತನಾಡಿದ್ದ ಶ್ರೀನಿವಾಸ್‌ ಬದಲಿಗೆ ನಾಗರಾಜ್‌ ಹೆಸರನ್ನು ಘೋಷಣೆ ಮಾಡಲಾಗಿದೆ.

ಹಾಲಿ ಶಾಸಕರು ಪ್ರತಿನಿಧಿಸುವ ಅರಕಲಗೂಡು(ಎ.ಟಿ. ರಾಮಸ್ವಾಮಿ), ಅರಸೀಕೆರೆ (ಶಿವಲಿಂಗೇಗೌಡ) ಕ್ಷೇತ್ರವೂ ಸೇರಿ ಹಾಸನ ಜಿಲ್ಲೆಯ ಯಾವುದೇ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಲಾಗಿಲ್ಲ. ಜಿಲ್ಲೆಯ ಸಂಪೂರ್ಣ ಹಿಡಿತವನ್ನು ಎಚ್‌.ಡಿ. ರೇವಣ್ಣ ಹೊಂದಿದ್ದು, ಇನ್ನೂ ಹಾಸನ ವಿಧಾನಸಭೆ ಕ್ಷೇತ್ರಕ್ಕೆ ಯಾರು ಅಭ್ಯರ್ಥಿ ಎನ್ನುವುದು ಅಂತಿಮವಾಗಿಲ್ಲ. ರೇವಣ್ಣ ಒಪ್ಪಿಗೆ ನೀಡಿದ ನಂತರ ಟಿಕೆಟ್‌ ಘೋಷಣೆ ಆಗಲಿದೆ.

ಪಟ್ಟಿ ಬಿಡುಗಡೆ ನಂತರ ಪ್ರತಿಕ್ರಿಯೆ ನೀಡಿದ ಎಚ್‌.ಡಿ. ಕುಮಾರಸ್ವಾಮಿ, ಪಟ್ಟಿ ಬಿಡುಗಡೆ ಮಾಡಲಾಗಿದೆ. ಚುನಾವಣೆಯನ್ನು ಸರಿಯಾಗಿ ಎದುರಿಸದೇ ನಿರ್ಲಕ್ಷ್ಯ ಕಂಡರೆ ಅಭ್ಯರ್ಥಿ ಬದಲಾವಣೆ ಅಗಬಹುದು. ಈ ಬಗ್ಗೆ ಅಭ್ಯರ್ಥಿಗಳು ಎಚ್ಚರವಾಗಿ ಕೆಲಸ ಮಾಡಬೇಕು. ನಮಗೆ ಸಮಾಧಾನ ಅದ ಬಳಿಕ ನಾವು ಪಟ್ಟಿ ಬಿಡುಗಡೆ ಮಾಡಿದ್ದೇವೆ ಎಂದರು.

ಪಂಚರತ್ನ ರಥಯಾತ್ರೆ ಇಂದಿಗೆ ರಾಮನಗರದಲ್ಲಿ ಕೊನೆ ಅಗಲಿದೆ ಎಂದ ಕುಮಾರಸ್ವಾಮಿ, ಮಂಗಳವಾರದಿಂದ ಮಂಡ್ಯದ ಏಳು ಕ್ಷೇತ್ರ ಮತ್ತು ತುಮಕೂರಿನ ಚಿಕ್ಕನಾಯಕನಹಳ್ಳಿ, ಕುಣಿಗಲ್‌ನಲ್ಲಿ ನಡೆಯಲಿದೆ. ಬೀದರ್‌ನ ಬಸವಕಲ್ಯಾಣದಿಂದ ರಥಯಾತ್ರೆ ಜನವರಿಯಲ್ಲಿ ಆರಂಭ ಆಗಿದೆ. ಮಾರ್ಚ್ 20ರ ತನಕ ರಥಯಾತ್ರೆ ಮಾಡುತ್ತೇವೆ. ಚುನಾವಣೆ ದಿನಾಂಕ ಘೊಷಣೆ ಆದರೆ ಸ್ವಲ್ಪ ಬದಲಾವಣೆ ಆಗುತ್ತದೆ.

ಆರ್‌. ಅಶೋಕ್‌ ಸೇರಿ ಬಿಜೆಪಿ ನಾಯಕರ ಮಾತಿಗೆ ತಿರುಗೇಟು ನೀಡಿದ ಕುಮಾರಸ್ವಾಮಿ, ಕನಕಪುರ ಗಡಿ ಭಾಗದಲ್ಲಿ ಒಳ್ಳೆಯ ಅಭ್ಯರ್ಥಿ ನೀಡುವಂತೆ ಮನವಿ ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲ ಎಂದಿದ್ದಾರೆ. ಜನರ ಮುಂದೆ ಸುಳ್ಳು ಹೇಳಿಕೊಂಡು ಓಡಾಡಿದವರು ನೀವು ಎಂದರು.

ಅಧಿವೇಶನದಲ್ಲಿ ಭಾಗವಹಿಸುವ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬೆಳಗಾವಿ ಅಧಿವೇಶನ ನಡೆಸುತ್ತಿರುವುದು, ಐದಾರು ಬಿಲ್ ಪಾಸ್ ಮಾಡಲು. ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಲು ನಿರ್ಧಾರ ತೆಗೆದುಕೊಂಡಿದ್ದು ನಾನು ಸಿಎಂ ಅಗಿದ್ದಾಗ. ನೀವ್ಯಾರು ಕೂಡ ಸಚಿವ ಸಂಪುಟದಲ್ಲಿ ಮಾಡಲಿಲ್ಲ.
ಅದಿವೇಶನದ ಹೆಸರಿನಲ್ಲಿ ಬಿಜೆಪಿ, ಕಾಂಗ್ರೆಸ್‌ ನಾಯಕರ ಡ್ರಾಮ ನೋಡಲು ನಾನು ಅಧಿವೇಶನಕ್ಕೆ ಬರಬೇಕಾ? ನಾವು ತಳಮಟ್ಟದಿಂದ ಜನರ ಮದ್ಯ ಬೆಳೆದು ‌ಬಂದವರು. ರೈತರನ್ನು ಕರೆದು ಸಮಸ್ಯೆ ಬಗೆ ಹರಿಸದ ನಾಯಕರು ನೀವು. ಬರುವ ಚುನಾವಣೆಯಲ್ಲಿ‌ ಎರಡೂ ರಾಷ್ಟ್ರೀಯ ಪಕ್ಷಗಳನ್ನು ಹೊರಗಿಡಲು ಜನರು ನಿರ್ಧಾರ ಮಾಡಿದ್ದಾರೆ. ತಿನ್ನುವ ಅನ್ನ, ಹಾಕುವ ಬಟ್ಟೆ ಎಲ್ಲದಕ್ಕೂ ಧರ್ಮ ಹುಡುಕುತ್ತೀರ. ದರೋಡೆಕೋರರು, ಕೊಳ್ಳೆ, ಲೂಟಿ ಹೊಡೆಯುತ್ತಿರುವ ಜತೆ ನಾನು ಸರ್ಕಾರ ಮಾಡುವುದಿಲ್ಲ ಎಂದರು.

ಜೆಡಿಎಸ್‌ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, 12 ಜನ ಮಂತ್ರಿಗಳು ವಿಡಿಯೊ ಸ್ಟೇ ತಂದು ಮಂತ್ರಿ ಅಗಿದ್ದಾರೆ. ಅವರ ವಿಡಿಯೊ ನೋಡಿದ್ದರ? ಆ ವಿಡಿಯೊ ನೋಡಿ ಖುಷಿ ಅಗಿದ್ದರ? ಎಂದರು. ಏಯ್‌ ಪಂಚೇ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶೀ ಸಂತೋಷ್‌ ಕುರಿತು ಹೇಳಿದ ಇಬ್ರಾಹಿಂ, ಕೀಳಾಗಿ ಮಾತನಾಡುವುದು ನಮ್ಮ ಸಂಸ್ಕೃತಿ ಅಲ್ಲ. ಬಡವರ ಕಷ್ಟಕ್ಕೆ ಕಣ್ಣೀರು ಹಾಕುವುದು ನಮ್ಮ ಸಂಸ್ಕೃತಿ. ಇಂದು ಪಟ್ಟಿ ಬಿಡುಗಡೆ ಮಾಡುವ ಮೂಲಕ ಅಶ್ವಮೇದ ಯಾಗ ಶುರುವಾಗಿದೆ ಎಂದರು.

ಅಭ್ಯರ್ಥಿಗಳ ಪಟ್ಟಿ:

ಇದನ್ನೂ ಓದಿ | JDS Pancharatna | ನಿರಂತರ ಮಳೆಯಿಂದ ಜೆಡಿಎಸ್‌ ಪಂಚರತ್ನ ರಥಯಾತ್ರೆ ಮುಂದೂಡಿಕೆ; ಡಿ.15ರಿಂದ ಮತ್ತೆ ಆರಂಭ

Exit mobile version