ಗದಗ: ʻʻಕಾಂಗ್ರೆಸ್ ಮತ್ತು ಜೆಡಿಎಸ್‌ನಿಂದ ವಲಸೆ ಬಂದಿರುವ 17 ಮಂದಿ ವಲಸಿಗ ಶಾಸಕರು ಯಾರೂ ಕಾಂಗ್ರೆಸ್‌ಗೆ ಹೋಗಲ್ಲʼʼʼ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಸ್ಪಷ್ಟವಾಗಿ ಹೇಳಿದ್ದಾರೆ.
ಗದಗದಲ್ಲಿ ಮಾತನಾಡಿದ ಅವರು, ʻʻಕ್ರೀಡಾ ಸಚಿವ ನಾರಾಯಣ ಗೌಡ ಅವರು ಹೋದರೂ ಹೋಗಬಹುದು. ಅದು ಅವರ ವೈಯಕ್ತಿಕ ವಿಚಾರ. ಅದೇ ಹೊತ್ತಿಗೆ ಕಾಂಗ್ರೆಸ್, ಜೆಡಿಎಸ್ ನಿಂದ ಬಹಳ ಜನ ಬರೋರು ಇದ್ದಾರೆ. ಇಬ್ಬರು ಹೋದ್ರೆ 20 ಜನ ಬಿಜೆಪಿಗೆ ಬರ್ತಾರೆ. ಅದರೆ, ಸಿದ್ದರಾಮಯ್ಯ ಒಂದು ವೇಳೆ ಬಿಜೆಪಿಗೆ ಬಂದರೂ ಕರೆದುಕೊಳ್ಳುವುದಿಲ್ಲʼʼ ಎಂದರು.
ʻʻಕಾಂಗ್ರೆಸ್‌ನವರದ್ದು ಬೇರೆ ಜನಾಂಗವನ್ನು ಓಲೈಕೆ ಮಾಡುವ ಪದ್ಧತಿ. ನಾನು ಅಧಿಕಾರಕ್ಕೆ ಬಂದರೆ ಹತ್ತು ಸಾವಿರ ಕೋಟಿ ಮುಸ್ಲಿಮರಿಗೆ ಇಡುತ್ತೇನೆ ಅಂತ ಹೇಳಿದರು. ಆದರೆ ಇದು ಹಿಂದೂ ರಾಷ್ಟ್ರ. ಹಿಂದೂಳಿಗೆ ಇಷ್ಟು ಇಡ್ತೇನೆ ಅಂತ ಹೇಳ್ಳಿಲ್ಲ ಯಾಕೆ? ಇದರಲ್ಲೇ ಅರ್ಥ ಆಗುತ್ತದೆ, ಹಿಂದೂಗಳ ಬಗ್ಗೆ ಅವರಲ್ಲಿ ಯಾವ ರೀತಿ ವಿರೋಧ ಇದೆ ಅಂತʼʼ ಎಂದು ಹೇಳಿದರು ಬಿ.ಸಿ. ಪಾಟೀಲ್.
ʻʻಸಂವಿಧಾನವನನ್ನು ಕಾಂಗ್ರೆಸ್‌ನವರೇ ರೂಪಿಸಿರುವ ರೀತಿ ಮಾತಾಡಿದರೆ ಆಗುವುದಿಲ್ಲ. ಸಂವಿಧಾನವನ್ನು ಪ್ರೀತಿ ಮಾಡಿದ್ದರಿಂದಲೇ ಜನರು ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆʼʼ ಎಂದು ಹೇಳಿದರು.
ʻಶಾಸಕ ವಿರೂಪಾಕ್ಷಪ್ಪ ಮಾಡಾಳುಗೆ ಬಿಜೆಪಿ ರಕ್ಷಣೆ ನೀಡಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ʻʻಯಾವ ರಕ್ಷಣೆಯೂ ಇಲ್ಲ. .ಏನೂ ಇಲ್ಲ.. ಹಾಗಿದ್ದರೆ ಲೋಕಾಯುಕ್ತ ಸಂಸ್ಥೆಯಿಂದ ನಾವು ರಕ್ಷಣೆ ಕೊಡಬಹುದಿತ್ತು. ಲೋಕಾಯುಕ್ತ ಸಂಸ್ಥೆ ಇಂದು ನಿಷ್ಪಕ್ಷಪಾತವಾಗಿ ಕೆಲಸ ಮಾಡ್ತಿದೆ. ಹಿಂದೆ ಸಿದ್ಧರಾಮಯ್ಯ ಸಿಎಂ ಇದ್ದಾಗ ಲೋಕಾಯುಕ್ತವನ್ನು ಹಲ್ಲು ಕಿತ್ತ ಹಾವಿನಂತೆ ಮಾಡಿದ್ದರು. ಈಗ ನಾವು ರಕ್ಷಣೆ ಮಾಡೋ ಹಾಗಿದ್ರೆ ಅದೇನು ದೊಡ್ಡ ವಿಷಯವಲ್ಲ.. ಆದ್ರೆ ನಾವು ಮಾಡೋದಿಲ್ಲʼʼ ಎಂದರು.
ಇದನ್ನೂ ಓದಿ : ಮಂಡ್ಯದಲ್ಲಿ ಭುಗಿಲೆದ್ದ ʻಕೈʼ ಭಿನ್ನಮತ: ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆಗೆ ತೀವ್ರ ವಿರೋಧ; ಜಿಲ್ಲಾಧ್ಯಕ್ಷರ ಕಾರಿಗೆ ಮೊಟ್ಟೆ ಎಸೆತ