Site icon Vistara News

Karnataka Election : ತುಮಕೂರಲ್ಲಿ ಹೊಸ ಟ್ರೆಂಡ್;‌ ರಾಜಕೀಯ ನಾಯಕರ ಫೋಟೊ ಹಿಡಿದು ಶಬರಿಮಲೆಯತ್ತ ಕಾರ್ಯಕರ್ತರು

tumkur hasana shabarimale ರಾಜಕೀಯ ನಾಯಕ ಫೋಟೊ ಶಬರಿಮಲೆ ಅಯ್ಯಪ್ಪ ಮಾಲೆಧಾರಿ

ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Election) ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಕಾವು ಸಹ ಏರತೊಡಗಿದೆ. ಎಲ್ಲ ಕಡೆ ಪ್ರಚಾರ ಕಾರ್ಯ ಆರಂಭವಾಗಿದೆ. ಈಗ ಜಿಲ್ಲೆಯ ಆಯಾ ಪಕ್ಷದ ಕಾರ್ಯಕರ್ತರಿಂದ ಹೊಸ ಟ್ರೆಂಡ್‌ ಆರಂಭವಾಗಿದೆ. ಅಯ್ಯಪ್ಪ ಮಾಲೆ ಹಾಕಿಕೊಂಡಿರುವ ರಾಜಕೀಯ ನಾಯಕರ ಅನುಯಾಯಿಗಳು, ತಮ್ಮ ತಮ್ಮ ನಾಯಕರ ಫೋಟೊ ಹಿಡಿದು ಶಬರಿಮಲೆಗೆ ತೆರಳುತ್ತಿದ್ದಾರೆ. ಈಗ ಅಯ್ಯಪ್ಪ ಸ್ವಾಮಿ ಭಕ್ತರಲ್ಲಿ ಹೊಸದೊಂದು ಟ್ರೆಂಡ್‌ ಆರಂಭವಾಗಿದೆ.

ತಮ್ಮ ತಮ್ಮ‌ ನಾಯಕರ ಫೋಟೊ ಹಿಡಿದು ಶಬರಿಮಲೆಗೆ ತೆರಳುತ್ತಿರುವ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು, ತಮ್ಮ ನಾಯಕರು 2023ರ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲಿ ಎಂಬ ಹರಕೆ ಹೊತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಫೋಟೊಗಳನ್ನು ಹಿಡಿದು ಹೊರಟಿದ್ದಾರೆ.

ಸಚಿವ ಮಾಧುಸ್ವಾಮಿ, ಮಾಜಿ ಶಾಸಕ ಕೆ.ಎನ್ ರಾಜಣ್ಣ, ತುಮಕೂರು ಗ್ರಾಮಾಂತರ ಶಾಸಕ ಗೌರಿಶಂಕರ್, ಚಿಕ್ಕನಾಯಕನಹಳ್ಳಿ ಮಾಜಿ‌ ಶಾಸಕ ಸುರೇಶ್ ಬಾಬು ಬೆಂಬಲಿಗರು ಅಯ್ಯಪ್ಪ ಸ್ವಾಮಿಗೆ ಹರಕೆ ಹೊತ್ತುಕೊಂಡಿದ್ದು, ಫೋಟೊಗಳನ್ನು ಹಿಡಿದು ಹೊರಟಿದ್ದಾರೆ.

ಇದನ್ನೂ ಓದಿ | Forest Officer : ಆನೆ-ಮಾನವ ಸಂಘರ್ಷ ತಡೆ ವಿಫಲ ಸೇರಿ ಕರ್ತವ್ಯಲೋಪಕ್ಕೆ ವಲಯ ಅರಣ್ಯಾಧಿಕಾರಿ ಅಮಾನತು

Exit mobile version