Site icon Vistara News

Karnataka Election : ಈ ಸಂಕ್ರಾಂತಿ ನಂತರ ಜೆಡಿಎಸ್‌ ಮೇಲೆ ಆಪರೇಷನ್‌ ಕಾಂಗ್ರೆಸ್‌; ಯಾರು ಎಂದೂ ಗೊತ್ತು: ಎಚ್‌ಡಿಕೆ

ಎಚ್.ಡಿ. ಕುಮಾರಸ್ವಾಮಿ ಆಪರೇಷನ್‌ ಕಾಂಗ್ರೆಸ್‌ ಆಪರೇಷನ್‌ ಕಮಲ ಜೆಡಿಎಸ್

ಬೀದರ್: ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ (Karnataka Election) ರಾಜಕೀಯ ಅಖಾಡ ಸಿದ್ಧಗೊಳ್ಳುತ್ತಿದೆ. ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ವಲಸೆ ಹೋಗುವ ಸರದಿಯೂ ಶುರುವಾಗಲಿದೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್‌ ನಾಯಕ ಎಚ್.ಡಿ. ಕುಮಾರಸ್ವಾಮಿ ಮಾತನಾಡಿದ್ದು, ಈ ಸಂಕ್ರಾಂತಿ ನಂತರ ಆಪರೇಷನ್‌ ಕಾಂಗ್ರೆಸ್‌ ಶುರುವಾಗಲಿದ್ದು, ಜೆಡಿಎಸ್‌ನ ಯಾರೆಲ್ಲ ಹೋಗುತ್ತಾರೆ ಎಂಬುದು ನನಗೆ ೨ ವರ್ಷದ ಮೊದಲೇ ಗೊತ್ತಿದೆ ಎಂದು ಹೇಳಿದ್ದಾರೆ.

ಬೀದರ್ ತಾಲೂಕಿನ ಜನವಾಡ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್‌ ಮತ್ತು ಬಿಜೆಪಿಯವರು ಆಪರೇಷನ್‌ ಮಾಡಲು ಹೊರಟಿದ್ದಾರೆ. ಇನ್ನು ಕಾಂಗ್ರೆಸ್‌ನವರು ಸಂಕ್ರಾಂತಿ ನಂತರ ಆಪರೇಷನ್‌ ಮಾಡುವುದಾಗಿ ಬಹಿರಂಗವಾಗಿಯೇ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಯಾರು ಆಪರೇಷನ್‌ಗೆ ಒಳಗಾಗುತ್ತಾರೆ ಎಂಬ ವಿಷಯವು ನನಗೆ ಎರಡು ವರ್ಷದ ಹಿಂದೆಯೇ ಗೊತ್ತಿದೆ ಎಂದು ಹೇಳಿದರು.

ಕೇಂದ್ರ ಗೃಹ ಮಂತ್ರಿ ಅಮಿತ್ ಶಾಗೂ ಕರ್ನಾಟಕಕ್ಕೂ ಏನೂ ಸಂಬಂಧವಿದೆ? ಕರ್ನಾಟಕಕ್ಕೆ ಅವರ ಕೊಡುಗೆ ಏನು‌? ಆಪರೇಶನ್ ಕಮಲದ‌ ಹೆಸರಿನಲ್ಲಿ ಹಲವಾರು ರೀತಿಯ ದಂಧೆಗೆ ಸಾಥ್ ಕೊಟ್ಟಿದ್ದಾರೆ. ಭ್ರಷ್ಟ ಸರ್ಕಾರ ರಚನೆಯೇ ಅವರ ಕೊಡುಗೆಯಾಗಿದೆ. ಅಮಿತ್ ಶಾ ಆಗಲಿ, ಕಾಂಗ್ರೆಸ್‌ನ ಯಾವ ನಾಯಕರೂ ನನ್ನ ಕಣ್ಣಿಗೆ‌ ಕಾಣುತ್ತಿಲ್ಲ. ನನಗೆ ಕಾಣುತ್ತಿರುವುದು ಜನ ಮಾತ್ರ. ಎರಡೂ ರಾಷ್ಟ್ರೀಯ ಪಕ್ಷದ ಬಗ್ಗೆ ‌ರಾಜ್ಯದ ಜನ ಎಚ್ಚರದಿಂದ ಇರಬೇಕು ಎಂದು ಕುಮಾರಸ್ವಾಮಿ ಹೇಳಿದರು.

ಸ್ಯಾಂಟ್ರೋ ರವಿಗೆ ಮುಖ್ಯಮಂತ್ರಿಯಿಂದ ಮೆಸೇಜ್ ಹೋಗಿದೆ. ಮುಖ್ಯಮಂತ್ರಿಯಿಂದ ಕೂಡಾ ಮೆಸೇಜ್ ಹೋಗಿದೆ. ಕುಮಾರ ಕೃಪಾದಲ್ಲಿ ಏನು ನಡೆಯುತ್ತದೆ? ಅಲ್ಲಿ‌ ನಡೆಯುತ್ತಿರುವ ದಂಧೆ ಏನು? ಈ ವಿಚಾರ ಮುಖ್ಯಮಂತ್ರಿಗೆ ಗೊತ್ತೇ ಆಗುವುದಿಲ್ಲವೇ? ಎಂದು ಪ್ರಶ್ನೆ ಮಾಡಿರುವ ಕುಮಾರಸ್ವಾಮಿ, ವಿಧಾನಸೌಧ ಗೇಟ್‌ ಬಳಿ ೧೦.೫ ಕೋಟಿ ರೂಪಾಯಿ ತೆಗೆದುಕೊಂಡು ಹೋಗಿದ್ದ ಸಹಾಯಕ ಎಂಜಿನಿಯರ್‌ ಎಲ್ಲ ಮಾಹಿತಿಯನ್ನು ಸಮರ್ಪಕವಾಗಿ ಕೊಟ್ಟರೂ ಬಂಧಿಸಲಾಗಿದೆ. ಆತ ಯಾರ ಬಳಿಯಿಂದ ಹಣ‌ ತಂದಿದ್ದೇನೆ? ಯಾರು ಹಣ ಕೊಟ್ಟರು‌ ಎಂಬೆಲ್ಲ ವಿಚಾರವನ್ನು ಹೇಳಿದ್ದರೂ ಸಹ ಆತನನ್ನು ಬಂಧಿಸಲಾಗಿದೆ. ಇನ್ನೆರಡು ದಿನದಲ್ಲಿ ಬೇಲ್ ಸಿಗುತ್ತದೆ, ಮುಂದೇನು ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಶೀಘ್ರದಲ್ಲೇ ಕನ್ನಡ ಸಮಗ್ರ ಭಾಷಾ ಕಾಯ್ದೆ ಅನುಷ್ಠಾನ: ಸಿಎಂ ಬಸವರಾಜ ಬೊಮ್ಮಾಯಿ

Exit mobile version