ಬೆಂಗಳೂರು: ಸಮಾಜವನ್ನು, ಸಮುದಾಯವನ್ನು ಒಡೆಯುವ ಕಾಂಗ್ರೆಸ್‌ನಿಂದ ಸಮಾಜವನ್ನು ಕಾಪಾಡುವುದೇ ದೊಡ್ಡ ಕೆಲಸ ಆಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದ ಬಿಜೆಪಿ ಇದೀಗ ಚುನಾವಣೆ ಸಮಯದಲ್ಲಿ ( Karnataka Election) ಮನವೊಲಿಸಲು ಮುಂದಾಗಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತಿಗೆ ಪ್ರತಿಕ್ರಿಯಿಸಿದ್ದಾರೆ.
ಕಾಂಗ್ರೆಸ್‌ನವರಿಗೆ ಲೈನು ಲೆಂತ್ ಎರಡೂ ಇಲ್ಲ. ಯಾಕೆ ರಾಜಕಾರಣ ಮಾಡ್ತಿದೀವಿ ಅನ್ನೋದೇ ಅವರಿಗೆ ಗೊತ್ತಿಲ್ಲ. ಸಮಾಜವನ್ನು ಕಾಂಗ್ರೆಸ್ ನಿಂದ ಕಾಪಾಡೋದೇ ನಮಗೆ ದೊಡ್ಡ ಕೆಲಸ ಆಗಿದೆ. ಸಮಾಜಕ್ಕೆ ಪೂರಕವಾಗಿ ಕಾಂಗ್ರೆಸ್‌ನವರು ಕೆಲಸ ಮಾಡ್ತಿಲ್ಲ. ಧರ್ಮ, ಜಾತಿ ಆಧರಿಸಿ ಸಮಾಜ ಒಡೆದವರೇ ಕಾಂಗ್ರೆಸ್‌ನವರು.
ಕಾಂಗ್ರೆಸ್‌ನವರಿಗೆ ಮಾನವೀಯತೆ ಇಲ್ಲ. ನಮ್ಮ ಮೋದಿ, ಯಡಿಯೂರಪ್ಪ ಬಗ್ಗೆ ಮಾತಾಡೋದನ್ನು ನಿಲ್ಲಿಸಲಿ ಡಿಕೆಶಿ. ಡಿಕೆಶಿ ಹಗಲು ಕನಸು ಕಾಣ್ತಿದಾರೆ. ನಿಮ್ಮ ಪಕ್ಷದ ಕಡೆ ನೋಡಿ ಸ್ವಾಮಿ, ನಮ್ಮ ಕಡೆ ಬೇಡ. ಸಿಎಂ ಚೇರ್ ಗಾಗಿ ಗುಂಪು ಗಲಾಟೆ ನಡೀತಿದೆ ಅವರಲ್ಲಿ ಎಂದರು.
ಚನ್ನಪಟ್ಟಣದಲ್ಲಿ ಇದು ಕೊನೆಯ ಚುನಾವಣೆ ಎಂಬ ಎಚ್ಡಿಕೆ ಹೇಳಿಕೆ ವಿಚಾರದಲ್ಲಿ ಪ್ರತಿಕ್ರಿಯಿಸಿ, ಯಾವುದೋ ಸಂದರ್ಭದಲ್ಲಿ ಏನೋ ಹೇಳ್ತಾ ಇರ್ತಾರೆ. ಸಾಂದರ್ಭಿಕವಾಗಿ ಮಾತಾಡ್ತಾರೆ, ಎಚ್ಡಿಕೆಯವರ ಈ ಹೇಳಿಕೆಗೆ ಪ್ರಾಮುಖ್ಯತೆ ಇಲ್ಲ. ಅದಕ್ಕೆ ಪ್ರಾಮುಖ್ಯತೆ ಕೊಡುವ ಅಗತ್ಯ ಇಲ್ಲ. ಭಾವನಾತ್ಮಕವಾಗಿ ಹೇಳಿದಾರೆ, ಪ್ರಾಮುಖ್ಯತೆ ಕೊಡುವ ಅಗತ್ಯ ಇಲ್ಲ ಎಂದರು.
ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ವಿಚಾರಕ್ಕೆ ಪ್ರತಿಕ್ರಿಯಿಸಿ, ಆದಷ್ಟು ಬೇಗ ರಾಮಮಂದಿರ ನಿರ್ಮಾಣ ಮಾಡಬೇಕು ಅಂತ ಆಸೆ ಇದೆ. ಈ ದಿಕ್ಕಿನಲ್ಲಿ ತಯಾರಿಗಳು ಇನ್ನೂ ನಡೀತಿವೆ. ಬೇಗ ಶಿಲಾನ್ಯಾಸ ಮಾಡಬೇಕು ಅಂತ ಆಸಕ್ತಿ ಇದೆ. ನನಗೆ ನಾಳೆನೇ ಶಿಲಾನ್ಯಾಸ ಮಾಡಬೇಕು ಅಂತ ಆಸೆ ಇದೆ. ಆದರೆ, ಕಾಲ ಕೂಡಿ ಬರಬೇಕಲ್ಲ, ತಯಾರಿ ಇನ್ನೂ ನಡೀತಿದೆ. ರಾಮನ ನಗರ ರಾಮನಗರದಲ್ಲಿ ದಕ್ಷಿಣ ಅಯೋಧ್ಯೆಯ ಅಭಿವೃದ್ಧಿಗೆ ನಾವು ಬದ್ಧವಾಗಿದೀವಿ.
ಮೈಸೂರು – ಬೆಂಗಳೂರು ಎಕ್ಸ್ಪ್ರೆಸ್ ವೇ ಉದ್ಘಾಟನೆಗೆ ಮೋದಿಯವರು ಬರ್ತಿದಾರೆ. ಮೋದಿಯವರ ರೋಡ್ ಶೋ ಗೆ ಇನ್ನೂ ತಯಾರಿ ಆಗಿಲ್ಲ. ರೋಡ್ ಶೋ ಬಗ್ಗೆ ಇನ್ನೂ ಮಾಹಿತಿಗಳು ಬರಬೇಕಿದೆ. ಮುಂದಿನ ದಿನಗಳಲ್ಲಿ ಮೋದಿಯವರ ಕಾರ್ಯಕ್ರಮಗಳು ನಿಶ್ಚಯ ಆಗಲಿವೆ ಎಂದರು.
ಇದನ್ನೂ ಓದಿ: Karnataka Election: ಸುಮಲತಾ ತಾಯಿ ಬಗ್ಗೆ ನಾನು ಮಾತನಾಡಲ್ಲ; ಮಂಡ್ಯದಿಂದ ಎಚ್‌ಡಿಕೆ ಸ್ಪರ್ಧೆ ಮಾಡಲ್ಲ: ನಿಖಿಲ್ ಕುಮಾರಸ್ವಾಮಿ
ಬಿಜೆಪಿಗೆ ಸಂಸದೆ ಸುಮಲತಾ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸುಮಲತಾ ಸೇರ್ಪಡೆ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ನಮ್ಮ ಪಕ್ಷದಿಂದ ಸುಮಲತಾ ಅವರಿಗೆ ಮುಕ್ತ ಆಹ್ವಾನ ಇದೆ. ಅವರು ಬಿಜೆಪಿ ಸೇರ್ಪಡೆ ಆಗಬಹುದು. ನಮ್ಮ ಪಕ್ಷ ಮುಕ್ತವಾಗಿದೆ. ಬೆಂಗಳೂರಿನಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲೂ ಗೆಲ್ತೇವೆ. ನಾವು ಇರುವ ಸ್ಥಾನಗಳಿಗಿಂತ ಹೆಚ್ಚಿಗೆ ಪಡ್ಕೋತೇವೆ. ಪಡೆದುಕೊಳ್ಳೋದೆಲ್ಲ ಬಿಜೆಪಿ, ಕಳೆದುಕೊಳ್ಳೋದೆಲ್ಲ ಕಾಂಗ್ರೆಸ್.
ಬೆಂಗಳೂರಿನಲ್ಲಿ ಇನ್ನಷ್ಟು ಹೆಚ್ಚಿನ ಸ್ಥಾನ ಗೆಲ್ತೇವೆ. ಹೊಂದಾಣಿಕೆ ರಾಜಕಾರಣ ಬಿಜೆಪಿಯ ಡಿಕ್ಷನರಿಯಲ್ಲೇ ಇಲ್ಲ. ಹೊಂದಾಣಿಕೆ ಜನರ ಜತೆ, ಸಮಾಜದ ಜತೆ ಮಾತ್ರ. ಪ್ರತಿಪಕ್ಷಗಳ ಜತೆ ಹೊಂದಾಣಿಕೆ ಇಲ್ಲ, ಸ್ಪರ್ಧೆ ಮಾತ್ರ ಎಂದರು.