ಬಳ್ಳಾರಿ: ವಿಧಾನಸಭಾ ಚುನಾವಣೆ (Karnataka Election) ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕೀಯ ರಂಗೇರಿದೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ಅವರು ತಮ್ಮ ಪಕ್ಷದ ಮೊದಲ ಜಿಲ್ಲಾಧ್ಯಕ್ಷರನ್ನು ಘೋಷಿಸಿದ್ದಾರೆ. ಕೆಆರ್ಪಿಪಿ ಬಳ್ಳಾರಿ ಜಿಲ್ಲಾಧ್ಯಕ್ಷರಾಗಿ ಗೋನಾಳ್ ರಾಜಶೇಖರ ಗೌಡ ಅವರನ್ನು ನೇಮಕ ಮಾಡಲಾಗಿದೆ. ಬೆಂಗಳೂರಿನಲ್ಲಿ ಜನಾರ್ದನ ರೆಡ್ಡಿ ಅವರು ಮಂಗಳವಾರ (ಜ.೧೭) ಅಧ್ಯಕ್ಷ ನೇಮಕ ಪತ್ರವನ್ನು ವಿತರಣೆ ಮಾಡಿದ್ದಾರೆ.
ಬಿಜೆಪಿಯಲ್ಲಿ ಜಿಪಂ ಸದಸ್ಯರಾಗಿ ಕಾರ್ಯನಿರ್ವಹಣೆ ಮಾಡಿದ್ದ ರಾಜಶೇಖರ ಗೌಡ ಅವರು ರೆಡ್ಡಿ ಮತ್ತು ಸಚಿವ ಶ್ರೀರಾಮುಲು ಅವರಿಬ್ಬರ ಆಪ್ತರೂ ಆಗಿದ್ದರು. ಶ್ರೀರಾಮುಲು ಬಿಎಸ್ಆರ್ ಕಾಂಗ್ರೆಸ್ ಸ್ಥಾಪನೆ ಮಾಡಿದಾಗಲೂ ಅವರೊಂದಿಗೆ ಇವರು ಗುರುತಿಸಿಕೊಂಡಿದ್ದರು.
2013ರಲ್ಲಿ ಬಿಎಸ್ಆರ್ ಕಾಂಗ್ರೆಸ್ನಿಂದ ಕುಷ್ಟಗಿ ಕ್ಷೇತ್ರದಿಂದ ರಾಜಶೇಖರ ಗೌಡ ಸ್ಪರ್ಧೆ ಮಾಡಿ ಸೋಲನುಭವಿಸಿದ್ದರು. ಮೈನಿಂಗ್ ಟ್ರೇಡಿಂಗ್ ಅನ್ನು ಸಹ ರಾಜಶೇಖರ ಗೌಡ ಮಾಡುತ್ತಿದ್ದರು. ಪ್ರಸ್ತುತವಾಗಿ ಬಳ್ಳಾರಿ ವಿವಿ ಸಂಘದ ಖಜಾಂಚಿಯಾಗಿ ಕೆಲಸ ಮಾಡಿರುವ ಇವರು, ಬಿಜೆಪಿಯಲ್ಲಿ ಬಿಎಸ್ಆರ್ ವಿಲೀನವಾದಾಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು.
ಇದನ್ನೂ ಓದಿ | Koppal Police : ನಿರಪರಾಧಿ ಮೂರು ಕೋಳಿಗಳ ಬಂಧಿಸಿದ ಪೊಲೀಸರು