Site icon Vistara News

Karnataka Election Results : ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ ಮುಖಭಂಗ; 41 ಕ್ಷೇತ್ರದಲ್ಲಿ ಬಿಜೆಪಿ‌ 10, ಕಾಂಗ್ರೆಸ್‌ಗೆ 26, ಜೆಡಿಎಸ್‌ಗೆ 3

Kalyana karnataka election results

ಶಶಿಧರ್ ಮೇಟಿ, ವಿಸ್ತಾರ ನ್ಯೂಸ್, ಬಳ್ಳಾರಿ

ಬಳ್ಳಾರಿ ವಿಸ್ತಾರ ಬ್ಯೂರೋ ನ್ಯೂಸ್: ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ (Karnataka Election Results) ಕಲ್ಯಾಣ ಕರ್ನಾಟಕದಲ್ಲಿ ಬಿಜೆಪಿಗೆ‌ ದೊಡ್ಡ ಮಟ್ಟದ ಹಿನ್ನಡೆಯಾಗಿದೆ. ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸುವ ಮೂಲಕ ತನ್ನ ಪ್ರಾಬಲ್ಯವನ್ನು ಮೆರೆದಿದೆ. ಜೆಡಿಎಸ್ ಕೊಂಚ ಪ್ರಾಬಲ್ಯ ಕಳೆದುಕೊಂಡಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಯನ್ನು ಕೈ ಹಿಡಿಯದಿರುವುದು ಬಿಜೆಪಿಯ ಆತಂಕಕ್ಕೆ ಕಾರಣವಾಗಿದೆ.

2018ರ ಚುನಾವಣೆಯಲ್ಲಿ ಏಳು ಜಿಲ್ಲೆಯ 41 ಕ್ಷೇತ್ರಗಳ ಪೈಕಿ ಬಿಜೆಪಿ ಪಕ್ಷವು 19 ಕ್ಷೇತ್ರದಲ್ಲಿ ಗೆಲುವು‌‌ ಸಾಧಿಸಿದ್ದರೆ, 18 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು 4 ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು‌ ಸಾಧಿಸಿತ್ತು. ಈ ಬಾರಿ ಕಾಂಗ್ರೆಸ್ ಬಿಜೆಪಿಯನ್ನು ಹಿಂದಿಕ್ಕಿದೆ.

ಇದನ್ನೂ ಓದಿ: 26 ಬಾರಿ ಮೌಂಟ್​ ಎವರೆಸ್ಟ್​ ಏರಿ ದಾಖಲೆ ಬರೆದ ನೇಪಾಳಿ ಶೆರ್ಪಾ; ಇವರ ಕುಲಕಸುಬೇ ಪರ್ವತಾರೋಹಣ!

ಬಿಜೆಪಿಗೆ ಬಲ ತಂದುಕೊಟ್ಟ ಬೀದರ್

ಕಳೆದ ಚುನಾವಣೆಯಲ್ಲಿ ಬೀದರ್ ಜಿಲ್ಲೆಯ 6 ಕ್ಷೇತ್ರಗಳ ಪೈಕಿ ಬಿಜೆಪಿ ಎರಡು ಸ್ಥಾನದಲ್ಲಿ ಗೆಲುವು‌ ಸಾಧಿಸಿದ್ದರೆ, ಕಾಂಗ್ರೆಸ್ ಮೂರು ಸ್ಥಾನದಲ್ಲಿ ಜೆಡಿಎಸ್ ಒಂದು ಸ್ಥಾನ ದಲ್ಲಿ ಗೆಲುವು‌ ಸಾಧಿಸಿತ್ತು. ಆದರೆ ಈ ಬಾರಿ ಬೀದರ್ ನಲ್ಲಿ ಬಿಜೆಪಿ 4 ಕ್ಷೇತ್ರದಲ್ಲಿ ಗೆಲುವು‌ ಸಾಧಿಸಿದೆ, ಕಾಂಗ್ರೆಸ್ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಬಿಜೆಪಿ ಉತ್ತಮ ಸಾಧನೆ ತೋರಿದೆ. ಇಡೀ ಏಳು ಜಿಲ್ಲೆಗಳಲ್ಲಿ ಬೀದರ್ ಬಿಜೆಪಿಯನ್ನು ಕೈ ಹಿಡಿದಿದೆ.

ಕಲ್ಬುರ್ಗಿಯಲ್ಲಿ ಕಾಂಗ್ರೆಸ್ ಮೇಲುಗೈ

ಕಲ್ಬುರ್ಗಿಯಲ್ಲಿ ಬಿಜೆಪಿಗೆ ಕೇವಲ 2 ಸ್ಥಾನಕ್ಕೆ‌ ತೃಪ್ತಿ ಪಟ್ಟು ಕೊಳ್ಳುವಂತಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 5 ಕ್ಷೇತ್ರದಲ್ಲಿ ಗೆಲವು ಸಾಧಿಸಿದರೆ, 4 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು‌ ಸಾಧಿಸಿತ್ತು. ಆದರೆ ಈ ಬಾರಿ ಜಿಲ್ಲೆಯ‌ 9 ಕ್ಷೇತ್ರದಲ್ಲಿ ಏಳು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ, ಕೇವಲ 2 ಸ್ಥಾನದಲ್ಲಿ ಬಿಜೆಪಿ ಗೆಲವು ಸಾಧಿಸಿದೆ.

ಯಾದಗಿರಿಯಲ್ಲಿ ಬಿಜೆಪಿ ಶೂನ್ಯ ಸಾಧನೆ

ಯಾದಗಿರಿಯಲ್ಲಿ ಬಿಜೆಪಿ ಶೂನ್ಯ ಸಾಧನೆ ಮಾಡಿದೆ. ಕಳೆದ ಬಾರಿ ಜಿಲ್ಲೆಯ ನಾಲ್ಕು ಕ್ಷೇತ್ರದ ಪೈಕಿ 2 ಕ್ಷೇತ್ರದಲ್ಲಿ ಬಿಜೆಪಿ, ಒಂದು ಕ್ಷೇತ್ರದಲ್ಲಿ ಜೆಡಿಎಸ್, ಒಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು‌ ಸಾಧಿಸಿತ್ತು. ಆದರೆ ಈ ಬಾರಿ ಕಾಂಗ್ರೆಸ್ 3 ಸ್ಥಾನದಲ್ಲಿ ಗೆಲುವು‌ ಸಾಧಿಸಿದೆ, ಒಂದು ಸ್ಥಾನದಲ್ಲಿ ಜೆಡಿಎಸ್ ಗೆಲುವು ಸಾಧಿಸಿದೆ.

ಇದನ್ನೂ ಓದಿ: Karnataka Election 2023 : ಸಿಎಲ್‌ಪಿಗೆ ವೀಕ್ಷಕರಾಗಿ ಸುಶೀಲ್‌ ಕುಮಾರ್‌ ಶಿಂಧೆ, ಜಿತೆಂದ್ರ ಸಿಂಗ್‌, ದೀಪಕ್‌ ನೇಮಕ

ಬಿಜೆಪಿ ತೆಕ್ಕೆಯಿಂದ ಕಾಂಗ್ರೆಸ್

ಕೊಪ್ಪಳದಲ್ಲಿ ಬಿಜೆಪಿ ಸಂಖ್ಯೆಯನ್ನು ಕಾಂಗ್ರೆಸ್ ಕಸಿದುಕೊಂಡಿದೆ. ಕಳೆದ ಬಾರಿ ಐದು ಕ್ಷೇತ್ರದಲ್ಲಿ 3 ರಲ್ಲಿ ಬಿಜೆಪಿ ಗೆದ್ದಿದ್ದರೆ, 2 ರಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿತ್ತು. ಆದರೆ ಈ ಬಾರಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದ್ದರೆ, ಬಿಜೆಪಿ‌ ಮತ್ತು ಕೆಆರ್ ಪಿಪಿ ತಲಾವೊಂದು ಕ್ಷೇತ್ರದಲ್ಲಿ ಗೆಲವು‌ ಸಾಧಿಸಿದೆ.

ರಾಯಚೂರಿನಲ್ಲಿನ ಸ್ಥಾನ ಹೆಚ್ಚಿಸಿಕೊಂಡ‌ ಕಾಂಗ್ರೆಸ್

ರಾಯಚೂರಿನಲ್ಲಿ ಜೆಡಿಎಸ್ ಒಂದು ಕ್ಷೇತ್ರ ಕಳೆದುಕೊಂಡಿದ್ದು ಬಿಟ್ಟರೆ, ಬಿಜೆಪಿ ತನ್ನ ಸ್ಥಾನ ಉಳಿಸಿಕೊಂಡಿದೆ. ಆದರೆ ಕಾಂಗ್ರೆಸ್ ಒಂದು ಸ್ಥಾನ ಹೆಚ್ಚಿಸಿಕೊಂಡಿದೆ. ಈ ಬಾರಿ ಕಾಂಗ್ರೆಸ್ 4 ಸ್ಥಾನದಲ್ಲಿ ಬಿಜೆಪಿ 2 ಸ್ಥಾನ ಮತ್ತು ಜೆಡಿಎಸ್ 1 ಸ್ಥಾನದಲ್ಲಿ ಗೆಲುವು‌ ಸಾಧಿಸಿದೆ.

ಇದನ್ನೂ ಓದಿ: Traffic Violation: ಎಲೆಕ್ಷನ್‌ ಟೈಂನಲ್ಲಿ ಟ್ರಾಫಿಕ್‌ ರೂಲ್ಸ್‌ ಬ್ರೇಕ್‌; 25 ದಿನದಲ್ಲಿ 4 ಲಕ್ಷ ಕೇಸ್‌, 20 ಕೋಟಿ ರೂ. ದಂಡ

ಬಳ್ಳಾರಿ ಕ್ಲೀನ್ ಸ್ವೀಪ್

ಬಳ್ಳಾರಿ‌ ಜಿಲ್ಲೆಯಲ್ಲಿ ಕಳೆದ ಬಾರಿ 2 ರಲ್ಲಿ ಬಿಜೆಪಿ, 2 ರಲ್ಲಿ ಜೆಡಿಎಸ್, 3 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾದಿಸಿತ್ತು. ಈ ಬಾರಿ‌ ಐದಕ್ಕೆ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲವು ಸಾಧಿಸಿದೆ. ಇನ್ನು ವಿಜಯನಗರದಲ್ಲಿ ಕಳೆದ ಬಾರಿ ಬಿಜೆಪಿ 3 ಕ್ಷೇತ್ರದಲ್ಲಿ, ಕಾಂಗ್ರೆಸ್ 2 ಕ್ಷೇತ್ರದಲ್ಲಿ‌ ಗೆಲುವು‌‌ ಸಾಧಿಸಿತ್ತು. ಈ ಬಾರಿ ಕಾಂಗ್ರೆಸ್ 2 ಕ್ಷೇತ್ರದಲ್ಲಿ ಬಿಜೆಪಿ, ಜೆಡಿಎಸ್, ಪಕ್ಷೇತರ ತಲಾ ಒಂದು ಸ್ಥಾನದಲ್ಲಿ ಗೆಲುವು‌ ಸಾಧಿಸಿದೆ.

Exit mobile version