Site icon Vistara News

Karnataka Election : ಟಿಪ್ಪುವನ್ನು ಹೊಗಳಿದ ಮಾಜಿ ರಾಷ್ಟ್ರಪತಿ ಕೋವಿಂದ್‌ ಅವರನ್ನೂ ಹೊಡೆದು ಹಾಕ್ತೀರಾ?; ಸಿ.ಎಂ ಇಬ್ರಾಹಿಂ ಪ್ರಶ್ನೆ

jds-politics-CM Ibrahim reaction about BJP and Hassan ticket

ವಿಧಾನಸೌಧ (ಬೆಂಗಳೂರು): ರಾಷ್ಟ್ರಪತಿಗಳಾಗಿದ್ದ ರಾಮನಾಥ್‌ ಕೋವಿಂದ್‌ ಅವರು ವಿಧಾನಸಭೆಯಲ್ಲೇ ಟಿಪ್ಪು ಸುಲ್ತಾನ್‌ ಅವರ ಗುಣಗಾನ ಮಾಡಿದ್ರಲ್ಲ.. ನೀವು ಅವರನ್ನೂ ಹಿಡ್ಕೊಂಡು ಹೊಡಿತೀರಾ?: ಹೀಗೊಂದು ಪ್ರಶ್ನೆಯನ್ನು ಕೇಳಿದ್ದಾರೆ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ (Karnataka Election).

ಸಿದ್ದರಾಮಯ್ಯ ಅವರನ್ನು ಟಿಪ್ಪು ಸುಲ್ತಾನ್‌ ಅವರನ್ನು ಹೊಡೆದು ಹಾಕಬೇಕು ಎಂಬ ಸಚಿವ ಅಶ್ವತ್ಥ ನಾರಾಯಣ್‌ ಅವರ ಹೇಳಿಕೆಯನ್ನು ಅವರು ಖಂಡಿಸಿದರು. ʻʻಮಲ್ಲೇಶ್ವರಂ ಗಿರಾಕಿ ಚಿಲ್ಲರೆ ಮುಂಡೇವ್ರು.. ಇವ್ರಿಗೆ ಬುದ್ಧಿ ಹೇಳೋಕೆ ಯಾರಾದ್ರೂ ಇದ್ದೀರಾ?ʼʼ ಎಂದು ಕೇಳಿದರು ಇಬ್ರಾಹಿಂ.

ʻʻಚುನಾವಣೆ ಬಗ್ಗೆ ಮಾತನಾಡೋಕೆ ಎಷ್ಟು ವಿಷಯಗಳಿವೆ? ರೈತರ ಸಮಸ್ಯೆ, ನೀರಾವರಿ ಯೋಜನೆ, ವಿದ್ಯೆ ಬಗ್ಗೆ ಅನೇಕ ವಿಚಾರಗಳಿವೆ. ಅದನ್ನು ಬಿಟ್ಟು ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಸಿದ್ದರಾಮಯ್ಯ ಅವರು ಬೇರೆ ಪಾರ್ಟಿ ಇರಬಹುದು. ಆದರೆ ವಿಪಕ್ಷ ನಾಯಕ ಅವರುʼʼ ಎಂದು ಹೇಳಿದ ಇಬ್ರಾಃಇಂ ʻʻರಾಜ್ಯದ ಪೊಲೀಸ್‌ ಮಹಾನಿರ್ದೇಶಕರು ಸ್ವಯಂಪ್ರೇರಿತ ಕೇಸ್ ದಾಖಲಿಸಿದರೆ ಒಂದು ತೂಕ ಬರುತ್ತದೆʼʼ ಎಂದರು.

ʻʻಇಂದು ವಿಧಾನಸೌಧ ಯಾವ ಸ್ಥಿತಿಗೆ ಬಂದಿದೆ ಅನ್ನೋದನ್ನ ನೋಡ್ತಿದ್ದೇವೆ. ಎಂಥ ಮಹನೀಯರು ವಿಧಾನಸಭೆಯಲ್ಲಿ ಎಂತಹ ವಿಚಾರ ಚರ್ಚೆಯಾಗ್ತಿತ್ತು. ಇಂದು ಏನು ಚರ್ಚೆಯಾಗುತ್ತಿದೆ” ಎಂದು ಅವರು ಪ್ರಶ್ನಿಸಿದರು.

ವಿಧಾನಸೌಧದಲ್ಲೇ ನವಗ್ರಹ ಪೂಜೆ ಮಾಡ್ತೀವಿ!
ʻʻನವಗ್ರಹ ಯಾತ್ರೆ ಮಾಡಬೇಕು ಅಂತ ಕೇಂದ್ರ ಸಚಿವ ಪ್ರಲ್ಹಾದ್‌ ಜೋಷಿ ಹೇಳಿದರು. ಹೌದು ಮಾಡ್ತೀವಿ. 80 ದಿನ ಆದ್ಮೇಲೆ ಇದೇ ವಿಧಾನಸೌಧದಲ್ಲಿ ನವಗ್ರಹ ಪೂಜೆ ಮಾಡ್ತೀವಿʼʼ ಎಂದು ಹೇಳಿದರು.

ʻʻನೀವು ಮಂಚ ಮುರಿದಿದ್ದು, ಸಿಡಿ ಕೇಸ್ ಎಲ್ಲವನ್ನೂ ತೊಳೆದು ನವಗ್ರಹ ಪೂಜೆ ಮಾಡಿಸ್ತೀವಿ. ಆ ಸಿಡಿ ಕೇಸ್‌ನವರು ನಿಮ್ಮ ಪಕ್ಕ ಕೂತಿದ್ರಲ್ಲ ಯಡಿಯೂರಪ್ಪನವರೇ.. ಆಗ ನಿಮ್ಮ ಪಾವಿತ್ರ್ಯ ಎಲ್ಲಿ ಹೋಯ್ತು? ಪೊಲೀಸರು ಅಶ್ವಥ್ ನಾರಾಯಣ್‌ ಹೇಳಿಕೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಟಿಪ್ಪು, ಜಾತಿ, ಹಿಜಾಬ್, ಹಲಾಲ್ ಬಗ್ಗೆ ಮಾತನಾಡೋದನ್ನು ಬಿಡಬೇಕುʼʼ ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.

ಇದನ್ನೂ ಓದಿ : Karnataka Election: ಟಿಪ್ಪುನನ್ನು ಹೊಡೆದು ಹಾಕಿದಂತೆಯೇ ಸಿದ್ದರಾಮಯ್ಯರನ್ನೂ ಹೊಡೆದು ಹಾಕಬೇಕು: ಅಶ್ವತ್ಥನಾರಾಯಣ

Exit mobile version