Site icon Vistara News

Karnataka Election : ಕಾಂಗ್ರೆಸ್‌ನಿಂದ ಮಹಿಳಾ ಪ್ರಣಾಳಿಕೆ; ಸಲಹೆ ಕೊಡಿ ಎಂದು ನಂಬರ್‌ ಕೊಟ್ಟ ಕೆಪಿಸಿಸಿ

women manifesto ಡಿ.ಕೆ. ಶಿವಕುಮಾರ್‌ ಕೆಪಿಸಿಸಿ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ (Karnataka Election) ಸಂಬಂಧಪಟ್ಟಂತೆ ಕಾಂಗ್ರೆಸ್‌ ಹಲವು ರೀತಿಯ ತಂತ್ರಗಳನ್ನು ಹೆಣೆಯುತ್ತಿದೆ. ಜಾತಿ, ಸಮುದಾಯ ಆಧಾರಿತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಕೈ ನಾಯಕರು, ಈಗ ಮಹಿಳಾ ಮತದಾರರನ್ನು ತಮ್ಮತ್ತ ಸೆಳೆಯಲು “ಮಹಿಳಾ ಪ್ರಣಾಳಿಕೆ”ಯನ್ನು ಹೊರತರುವ ಮಾಸ್ಟರ್‌ ಪ್ಲ್ಯಾನ್‌ ಮಾಡಿದ್ದಾರೆ.

ಈ ಮೂಲಕ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡುತ್ತಿರುವುದಾಗಿ ಕೆಪಿಸಿಸಿ ಹೇಳಿಕೊಂಡಿದೆ. ಮಹಿಳಾ ಸಬಲೀಕರಣದಿಂದ ನಾಡಿನ ಉನ್ನತಿ ಸಾಧ್ಯವಿದೆ ಎಂದು ಕಾಂಗ್ರೆಸ್‌ ನಂಬಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆಯನ್ನು ನೀಡಲಾಗುತ್ತಿದೆ. ನಿಮ್ಮ ಸಲಹೆಯನ್ನು congresswomenmanifesto@gmail.com ಗೆ ಅಥವಾ ೭೯೯೬೫೫೧೯೯೯ ವಾಟ್ಸ್‌ಆ್ಯಪ್ ನಂಬರ್‌ಗೆ ಕರೆ ಮಾಡಿ ಎಂದು ವಿಡಿಯೊವೊಂದನ್ನು ಕಾಂಗ್ರೆಸ್‌ ಹರಿಬಿಟ್ಟಿದೆ.

ಹೆಣ್ಣು ಸಮಾಜದ ಕಣ್ಣು ಎಂಬುದನ್ನು ಕಾಂಗ್ರೆಸ್‌ ನಂಬುತ್ತದೆ. ಮಹಿಳೆಯರ ಕಾಯಕದ ಬಗ್ಗೆ ನಮಗೆ ನಂಬಿಕೆ, ವಿಶ್ವಾಸವಿದೆ. “ನಾ ನಾಯಕಿ” ಎಂಬ ಹೆಸರನ್ನು ಕೂಡಾ ನಾವು ಪಕ್ಷದ ಕಾರ್ಯಕ್ರಮದಲ್ಲಿ ಕೊಟ್ಟಿದ್ದೇವೆ. ಕಾಂಗ್ರೆಸ್‌ ಪಕ್ಷವು ಹೆಣ್ಣು ಮಕ್ಕಳಿಗೋಸ್ಕರ ಪ್ರತ್ಯೇಕವಾದ ಪ್ರಣಾಳಿಕೆಯನ್ನು ಹೊರಡಿಸುತ್ತಿದೆ. ನಿಮ್ಮ ಮುಂದೆ ನಾವೆಲ್ಲರೂ ನಿಂತಿದ್ದೇವೆ. ನೀವೆಲ್ಲರೂ ನಮಗೆ ಸಲಹೆ ಕೊಡಿ ಎಂದು ವಿಡಿಯೊದಲ್ಲಿ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮನವಿ ಮಾಡಿದ್ದಾರೆ. ಅಲ್ಲದೆ, ಜನವರಿ ೧೫ರೊಳಗೆ ಸಲಹೆಗಳನ್ನು ಕೊಡಲು ತಿಳಿಸಲಾಗಿದೆ. ಜತೆಗೆ ಜನವರಿ ೧೬ರಂದು ಬೆಂಗಳೂರಿನಲ್ಲಿ “ನಾ ನಾಯಕಿ” ಸಮಾವೇಶ ನಡೆಯಲಿದ್ದು, ಅದರಲ್ಲಿ ಪಾಲ್ಗೊಳ್ಳುವಂತೆ ಮಹಿಳೆಯರಿಗೆ ಮನವಿ ಮಾಡಲಾಗಿದೆ.

ಇದನ್ನೂ ಓದಿ | Woman Set On Fire | 7 ತಿಂಗಳ ಗರ್ಭಿಣಿಗೆ ಬೆಂಕಿ ಹಚ್ಚಿದ ಗಂಡ, ಅತ್ತೆ, ವರದಕ್ಷಿಣೆಗಾಗಿ ಕೃತ್ಯ ಎಸಗಿದ ಶಂಕೆ

Exit mobile version