Site icon Vistara News

Karnataka Elections 2023 : ಚುನಾವಣಾ ಅಫಿಡವಿಟ್‌ನಲ್ಲಿ ಇಬ್ಬರು ಪತ್ನಿಯರು ಇರುವುದನ್ನು ದೃಢಪಡಿಸಿದ ಆಮ್‌ ಆದ್ಮಿ!

AAP candidate Shankardas

#image_title

ವಿಜಯನಗರ: ವಿಜಯನಗರ ವಿಧಾನಸಭಾ ಕ್ಷೇತ್ರದ (Karnataka Elections 2023) ಆಮ್‌ ಆದ್ಮಿ ಪಾರ್ಟಿ ಅಭ್ಯರ್ಥಿ ದಾಸರ ಶಂಕರ್ ಅವರು ನಾಮಪತ್ರದ ಜತೆ ಸಲ್ಲಿಸುವ ಅಫಿಡವಿಟ್‌ನಲ್ಲಿ ತಮಗೆ ಇಬ್ಬರು ಪತ್ನಿಯರು ಇರುವುದನ್ನು ದೃಢಪಡಿಸಿದ್ದಾರೆ. ಹಿಂದು ಧಾರ್ಮಿಕ ಕಾಯಿದೆಯಂತೆ ಎರಡು ಹೆಂಡಿರು ಇರುವಂತಿಲ್ಲ. ಆದರೆ, ಕೆಲವೊಂದು ಸಕಾರಣಗಳಿಗಾಗಿ ಅವಕಾಶವೂ ಇದೆ. ಶಂಕರ್‌ ದಾಸ್‌ ಅವರ ಅನಿವಾರ್ಯತೆಗಳು ಏನಿತ್ತೋ ಗೊತ್ತಿಲ್ಲ. ಅವರು ತಮಗೆ ಇಬ್ಬರು ಮಡದಿಯರು ಎನ್ನುವುದನ್ನು ದೃಢಪಡಿಸಿದ್ದಾರೆ.

ಶಂಕರ್‌ ದಾಸ್‌ ಅವರಿಗೆ ಇಬ್ಬರು ಪತ್ನಿಯರು ಮತ್ತು ನಾಲ್ಕು ಮಕ್ಕಳು ಎನ್ನುವ ವಿವರ ಇದರಲ್ಲಿದೆ. ನೋಟರಿ ದೃಢೀಕೃತ ಅಫಿಡವಿಟ್‌ ಇದಾಗಿದೆ.

ಕುಣಿಗಲ್‌ನಲ್ಲಿ ಒಂದೇ ಪಕ್ಷದಿಂದ ಅಪ್ಪ-ಮಗ ಕಣಕ್ಕೆ! ಇಬ್ಬರಿಗೂ ಬಿ ಫಾರಂ ಇಲ್ಲ!

ಕುಣಿಗಲ್‌ ವಿಧಾನಸಭಾ ಕ್ಷೇತ್ರದಲ್ಲಿ ಅಪ್ಪ ಮತ್ತು ಮಗ ಇಬ್ಬರೂ ನಾಮಪತ್ರ ಸಲ್ಲಿಸಿದ್ದಾರೆ. ಇಬ್ಬರೂ ಜೆಡಿಎಸ್‌ ಪಕ್ಷದಿಂದಲೇ ನಾಮಪತ್ರ ಸಲ್ಲಿಸಿದ್ದಾರೆ. ಆದರೆ, ಇಬ್ಬರಲ್ಲಿ ಒಬ್ಬರಿಗೂ ಬಿ ಫಾರಂ ಸಿಕ್ಕಿಲ್ಲ. ಮಾಜಿ ಶಾಸಕ ಡಿ‌.ನಾಗರಾಜಯ್ಯ, ಪುತ್ರ ಡಾ.ರವಿ ನಾಮಪತ್ರ ಸಲ್ಲಿಸಿದ ತಂದೆ ಮಗ.

ಹಾಸನದಲ್ಲಿ ಪ್ರೀತಮ್‌ ಗೌಡ ಪತ್ನಿಯಿಂದ ನಾಮಪತ್ರ

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕಡೆ ಸ್ವರೂಪ್‌ ಅವರು ಹೇಗೋ ಮಾಡಿ ರೇವಣ್ಣ ಫ್ಯಾಮಿಲಿಯನ್ನು ಮನವೊಲಿಸಿ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಲು ರೆಡಿಯಾಗಿದ್ದಾರೆ. ಇದರ ನಡುವೆ ಹಾಲಿ ಶಾಸಕ ಪ್ರೀತಮ್‌ ಗೌಡ ಅವರ ಪತ್ನಿ ಕೂಡಾ ನಾಮಪತ್ರ ಸಲ್ಲಿಸಿದ್ದಾರೆ!

ಇದೇನಾಯ್ತು? ಪ್ರೀತಂ-ರೇವಣ್ಣ ಕುಟುಂಬದ ಜಗಳ ಸರಿಯಾದ ಕೂಡಲೇ ಇವರ ಮನೆಯಲ್ಲೇನಾದರೂ ಸಮಸ್ಯೆ ಆಯಿತಾ ಅಂದುಕೊಳ್ಳಬೇಡಿ. ಪ್ರೀತಂ ಗೌಡರ ಪತ್ನಿ ಕಾವ್ಯ ಎಚ್‌.ಜಿ ಅವರು ನಾಮಪತ್ರ ಸಲ್ಲಿಸಿದ್ದು ಗಂಡ ಪ್ರೀತಂ ಗೌಡರನ್ನು ಸೋಲಿಬೇಕು ಎನ್ನುವ ಉದ್ದೇಶದಿಂದ ಅಲ್ಲ, ಅವರ ವಿರುದ್ಧವೂ ಅಲ್ಲ.

ಕಾವ್ಯ ಎಚ್.ಜಿ ಅವರು ಕೂಡಾ ನಾಮಪತ್ರ ಸಲ್ಲಿಸಿದ್ದು ಬಿಜೆಪಿ ಅಭ್ಯರ್ಥಿಯಾಗಿಯೇ. ಒಂದು ವೇಳೆ ಗಂಡ ಸಲ್ಲಿಸಿದ ನಾಮಪತ್ರದಲ್ಲಿ ಏನಾದರೂ ಸಮಸ್ಯೆ ಆಗಿದ್ದರೆ ಇರಲಿ ಎಂಬ ಕಾರಣಕ್ಕೆ ಅವರು ಡಮ್ಮಿಯಾಗಿ ಕಣಕ್ಕೆ ಇಳಿದಿದ್ದಾರೆ. ಪ್ರೀತಂ ಗೌಡ ಅವರು ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.

ಒಟ್ಟಾರೆಯಾಗಿ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಇಂದು ಅಮಾವಾಸ್ಯೆ ಆಗಿರುವುದರಿಂದ ಅನಿವಾರ್ಯ ಕಾರಣಗಳಿದ್ದರೆ ಮಾತ್ರ ಅಭ್ಯರ್ಥಿಗಳು ಕಣಕ್ಕೆ ಇಳಿಯಲಿದ್ದಾರೆ. ಬಹುತೇಕರು ಅಮಾವಾಸ್ಯೆ ಭಯದಿಂದ ಆಗಲೇ ನಾಮಪತ್ರ ಹಾಕಿ ಆಗಿದೆ.

ಇದನ್ನೂ ಓದಿ : Karnataka Election: ಇಂದು ನಾಮಪತ್ರ ಸಲ್ಲಿಸಲು ಕಡೆಯ ದಿನ, ಇನ್ನೂ ಬಿ ಫಾರಂ ಸಿಗದ ಅಭ್ಯರ್ಥಿಗಳಿಗೆ ಟೆನ್ಷನ್!

Exit mobile version