Site icon Vistara News

Karnataka elections 2023: ಮಾಹಿತಿ ಮರೆಮಾಚಿದ ಆರೋಪ; ರೆಡ್ಡಿ ನಾಮಪತ್ರ ತಿರಸ್ಕರಿಸಲು ಆಪ್‌ ಪಟ್ಟು, ಒಪ್ಪದ ಅಧಿಕಾರಿಗಳು

Karnataka elections 2023 Accused of hiding information in the affidavit Gali Janardhanareddy AAP candidate insists on rejecting nomination

ಗಂಗಾವತಿ: ಗಾಲಿ ಜನಾರ್ದನರೆಡ್ಡಿ ಸಲ್ಲಿಸಿರುವ ಅಫಿಡವಿಟ್ ನಲ್ಲಿ ಮಾಹಿತಿಗಳನ್ನು ಮರೆಮಾಚಲಾಗಿದ್ದು ಅವರ ನಾಮಪತ್ರ ತಿರಸ್ಕರಿಸುವಂತೆ ಎಎಪಿ ಅಭ್ಯರ್ಥಿಯೂ ಆಗಿರುವ ನ್ಯಾಯವಾದಿ ಶರಣಪ್ಪ ಸಜ್ಜಿಹೊಲ ಪಟ್ಟು ಹಿಡಿದ ಘಟನೆ ಶುಕ್ರವಾರ ನಡೆಯಿತು.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಮ್ಮ ಮೇಲೆ ದಾಖಲಾಗಿರುವ ಪ್ರಕರಣಗಳ ಪೂರ್ಣ ಮಾಹಿತಿ ನೀಡಿಲ್ಲ. ಹೀಗಾಗಿ ನಾಮಪತ್ರ ತಿರಸ್ಕಾರ ಮಾಡುವಂತೆ ನ್ಯಾಯವಾದಿ ಹಾಗೂ ಎಎಪಿ ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಶರಣಪ್ಪ ಸಜ್ಜಿಹೊಲ ದೂರು ನೀಡಿದರು.

2010ರಲ್ಲಿ ಬಳ್ಳಾರಿಯಲ್ಲಿ ನಡೆದ ಬಳ್ಳಾರಿ ಮಹಾನಗರ ಪಾಲಿಕೆಯ ಸದಸ್ಯೆ ಪದ್ಮಾವತಿ ಕೊಲೆ ಪ್ರಕರಣದಲ್ಲಿ ರೆಡ್ಡಿ ಆರೋಪಿ ಸ್ಥಾನದಲ್ಲಿದ್ದಾರೆ. ಆದರೆ ಪ್ರಮಾಣದಲ್ಲಿ ಈ ಬಗ್ಗೆ ಉಲ್ಲೇಖಿಸಿಲ್ಲ ಎಂದು ಶರಣಪ್ಪ ತರಕಾರು ಅರ್ಜಿ ಸಲ್ಲಿಸಿದರು.

ಇದನ್ನೂ ಓದಿ:WhatsApp New Feature: ವಾಟ್ಸಾಪ್‌ನಿಂದ ಕೀಪ್ ಇನ್ ಚಾಟ್ ಹೊಸ ಫೀಚರ್; ಬಳಕೆದಾರರಿಗೆ ಏನು ಲಾಭ?

ಈ ಸಂದರ್ಭದಲ್ಲಿ ಬಳ್ಳಾರಿಯಿಂದ ಆಗಮಿಸಿದ್ದ ರೆಡ್ಡಿ ಪರ ವಕೀಲರು, ಪದ್ಮಾವತಿ ಕೊಲೆ ಪ್ರಕರಣದಲ್ಲಿ ಜನಾರ್ದನರೆಡ್ಡಿ ಅವರ ಪ್ರಮೇಯವಿಲ್ಲ. ಅವರ ಮೇಲೆ ಎಫ್ಐಆರ್ ದಾಖಲಾಗಿಲ್ಲ. ಬದಲಿಗೆ ಸೋಮಶೇಖರ ರೆಡ್ಡಿ ಅವರ ಹೆಸರು ಪ್ರಸ್ತಾವಾಗಿದೆ ಎಂದು ಸ್ಪಷ್ಟಿಕರಣ ನೀಡಿದರು.

ಈ ಬಗ್ಗೆ ವಾದ-ವಿವಾದ ಆಲಿಸಿದ ಚುನಾವಣಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ ಹಾಗೂ ಸಹಾಯಕ ಚುನಾವಣಾಧಿಕಾರಿ ಮಂಜುನಾಥ ಹಿರೇಮಠ ಮಾತನಾಡಿ, ನಾಮಪತ್ರ ಕ್ರಮಬದ್ಧವಾಗಿದೆಯೋ ಇಲ್ಲವೋ ಎಂಬುವುದಷ್ಟು ಇಲ್ಲಿ ಪರಿಶೀಲನೆ ಮಾಡಲಾಗುತ್ತಿದೆ. ಉಳಿದಂತೆ ಏನಾದರೂ ತರಕಾರು ಇದ್ದರೆ ಸೂಕ್ತ ದಾಖಲೆ ನೀಡಬೇಕು ಇಲ್ಲವೇ ನೇರವಾಗಿ ನ್ಯಾಯಾಲದ ಮೊರೆ ಹೋಗಬಹುದು ಎಂದು ತಿಳಿಸಿದರು. ಗಂಗಾವತಿಯಲ್ಲಿ ಸಲ್ಲಿಕೆಯಾಗಿರುವ ಇಬ್ಬರು ಪಕ್ಷೇತರರ ಎರಡು ನಾಮಪತ್ರ ಬಿಟ್ಟು ಎಲ್ಲವೂ ಕ್ರಮಬದ್ಧವಾಗಿವೆ ಎಂದು ತಿಳಿಸಿದರು.

ಈ ಬಗ್ಗೆ ಮಾತನಾಡಿದ ದೂರುದಾರ ಶರಣಪ್ಪ ಸಜ್ಜಿಹೊಲ, ಜನಾರ್ದನರೆಡ್ಡಿ ಅವರ ಮೇಲೆ ಚುನಾಯಿತ ಪ್ರತಿನಿಧಿಗಳ ವಿಶೇಷ ತನಿಖಾ ನ್ಯಾಧೀಕರಣವು (ಎಸ್ಐಟಿ) 27/2015 ಮತ್ತು 28/2015 ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿವೆ. ಆದರೆ ಜನಾರ್ದನರೆಡ್ಡಿ ತಮ್ಮ ನಾಮಪತ್ರ ಸಲ್ಲಿಸುವ ವೇಳೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಈ ಎರಡು ಪ್ರಕರಣಗಳನ್ನು ತೋರಿಸಿಲ್ಲ. ಹೀಗಾಗಿ ಈ ಅಂಶಗಳ ಆಧಾರದ ಮೇಲೆ ಸೂಕ್ತ ಕಾನೂನು ಸಲಹೆ ಪಡೆದು ನ್ಯಾಯಾಲಯದ ಮೊರೆ ಹೋಗುವುದಾಗಿ ಇದೇ ಸಂದರ್ಭದಲ್ಲಿ ಅವರು ತಿಳಿಸಿದರು.

Exit mobile version