Site icon Vistara News

Karnataka elections 2023: ಬಳ್ಳಾರಿ ನಗರದಲ್ಲಿ ಮೂವರು ರೆಡ್ಡಿಗಳ ನಡುವೆ ನಾನೊಬ್ಬ ಲಾಡ್: ಅನಿಲ್ ಲಾಡ್

Karnataka elections 2023 Among the three Reddys I am one Lad- Former MLA Anil Lad

ಬಳ್ಳಾರಿ: ನಗರ ವಿಧಾನಸಭಾ ಕ್ಷೇತ್ರದಿಂದ (Karnataka elections) ಮೂವರು ಆರ್‌ಆರ್‌ಆರ್‌ಗಳ‌ ನಡುವೆ ನಾನು ಒಬ್ಬ ಲಾಡ್ ಎಂದು ಜೆಡಿಎಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಅನಿಲ್ ಲಾಡ್ ಹೇಳಿದರು.

ನಾರಾ ಭರತ್ ರೆಡ್ಡಿ ಕೊಡುಗೆ ಏನು?

ನಗರದ ಮಹಾನಗರ ಪಾಲಿಕೆ ಕಚೇರಿಯಲ್ಲಿ ಗುರುವಾರ ಜೆಡಿಎಸ್ ಪಕ್ಷದಿಂದ ನಗರ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ನಾರಾ ಭರತ್ ರೆಡ್ಡಿ ಏನು ಕೊಡುಗೆ ಕೊಟ್ಟಿದ್ದಾರೆ? ಅವರಿಗೆ ಯಾವ ಆಧಾರದ ಮೇಲೆ ಟಿಕೆಟ್ ನೀಡಿದ್ದಾರೆ ಎಂಬುದು ತಿಳಿಯದಾಗಿದೆ ಎಂದರು.

ಯಾರೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವ ವ್ಯಕ್ತಿಯಲ್ಲ

ನಾನು ಶಾಸಕನಾದ ವೇಳೆ ನಗರದಲ್ಲಿ ಅನೇಕ ಅಭಿವೃದ್ಧಿಯನ್ನು ಕೈಗೊಂಡಿದ್ದೆ. ನಾನು 2008 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ವೇಳೆ ಕೂಡ ಒಬ್ಬಂಟಿಯಾಗಿ ಗೆದ್ದಿದ್ದೆ. ಕಾಂಗ್ರೆಸ್ ಪಕ್ಷದವರು ಸಾಥ್‌ ನೀಡಲಿಲ್ಲ. ಭರತ್ ರೆಡ್ಡಿ ‌ಕುಕ್ಕರ್ ಹಂಚಿದ ವೇಳೆಯೇ ನನಗೆ ಅನುಮಾನ ಬಂತು, ಇದರ ಹಿಂದೆ ಯಾರು ಇದ್ದಾರೆ ಎಂಬುದು ನನಗೆ ಗೊತ್ತು. ನಾನು ಕ್ಷತ್ರಿಯ ಸಮಾಜದವನು, ಹುಟ್ಟು ಹೋರಾಟಗಾರ ಶಿವಾಜಿ ಪರಂಪರೆಯನ್ನು ಹೊಂದಿದವನು. ಯಾರ ಜತೆಯೂ ಹೊಂದಾಣಿಕೆ ಮಾಡಿಕೊಳ್ಳುವ ವ್ಯಕ್ತಿ ಅಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: Karnataka Elections 2023 : ಕಾಂಗ್ರೆಸ್‌ನಲ್ಲಿ ಮತ್ತೆ ಮುಂದಿನ ಸಿಎಂ ಚರ್ಚೆ; ಡಿ.ಕೆ ಶಿವಕುಮಾರ್‌ರನ್ನು 2ನೇ ಸಾಲಿಗೆ ತಳ್ಳಿದ ಎಂ.ಬಿ ಪಾಟೀಲ್‌!

ಜೆಡಿಎಸ್‌ ಎರಡು ಕ್ಷೇತ್ರದಲ್ಲಿ ಗೆಲುವು

ಅಖಂಡ ‌ಬಳ್ಳಾರಿ ಜಿಲ್ಲೆಯಲ್ಲಿ ಜೆಡಿಎಸ್ ಎರಡು ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಜೆಡಿಎಸ್ ಕಾರ್ಯಕರ್ತರ ಮನವೊಲಿಸಿ‌ ಮುಂದಿನ ದಿನಗಳಲ್ಲಿ ಪ್ರಚಾರ ಮಾಡಲಾಗುವುದು. ‌ಕಾಂಗ್ರೆಸ್ ರಾಜ್ಯಸಭಾ ಸಂಸದ ನಾಸಿರ್ ಹುಸೇನ್ ಮೊದಲು ಬಳ್ಳಾರಿಯಲ್ಲಿ ‌ ಒಂದು ಮಹಾನಗರ ಪಾಲಿಕೆಯ ಚುನಾವಣೆ ಗೆಲ್ಲಲಿ ಎಂದು ಸವಾಲು ಹಾಕಿದರು. ನಾಸಿರ್ ಹುಸೇನ್ ಏನು ಅಂತ ಎಲ್ಲರಿಗೂ ಗೊತ್ತು ಎಂದು ಟೀಕಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಸೊಮಲಿಂಗನಗೌಡ, ಮುಖಂಡ ಮೀನಹಳ್ಳಿ‌‌ ತಾಯಣ್ಣ ಹಾಗೂ ಇತರರಿದ್ದರು.

Exit mobile version