ಕೊಪ್ಪಳ: ರಾಜ್ಯ ವಿಧಾನಸಭೆ ಚುನಾವಣೆಗೆ ಜಿಲ್ಲೆಯ ಐದೂ ವಿಧಾನಸಭೆ ಕ್ಷೇತ್ರಗಳಲ್ಲಿ ಈವರೆಗೆ ಒಟ್ಟು 95 ಅಭ್ಯರ್ಥಿಗಳಿಂದ 149 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.
ಕೊಪ್ಪಳ ವಿಧಾನಸಭಾ ಕ್ಷೇತ್ರ
ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ ಓರ್ವ ಮಹಿಳೆ ಹಾಗೂ 14 ಪುರುಷರು ಸೇರಿದಂತೆ ಒಟ್ಟು 15 ಅಭ್ಯರ್ಥಿಗಳಿಂದ 22 ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿಜೆಪಿ ಅಭ್ಯರ್ಥಿಯಿಂದ 2, ಕಾಂಗ್ರೆಸ್ ಅಭ್ಯರ್ಥಿಯಿಂದ 3, ಜೆಡಿಎಸ್‌ನಿಂದ 2, ಎಎಪಿಯಿಂದ 2, ಬಿಎಸ್ಪಿಯಿಂದ 2, ಆರ್‌ಯುಪಿಪಿಯಿಂದ 2, ಪಕ್ಷೇತರ ಒಂಭತ್ತು ನಾಮಪತ್ರಗಳು ಸಲ್ಲಿಕೆಯಾಗಿವೆ.
ಕುಷ್ಟಗಿ ವಿಧಾನಸಭಾ ಕ್ಷೇತ್ರ
ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 18 ಜನರಿಂದ 37 ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿಜೆಪಿ-3, ಕಾಂಗ್ರೆಸ್-5, ಎಎಪಿ-2, ಬಿಎಸ್ಪಿ 1, ಜೆಡಿಎಸ್-5, ಆರ್‌ಯುಪಿಪಿ-7, ಪಕ್ಷೇತರ -14 ನಾಮಪತ್ರಗಳು ಸಲ್ಲಿಕೆಯಾಗಿವೆ.
ಇದನ್ನೂ ಓದಿ: Karnataka Elections : ಯಾರೋ ಒಬ್ಬರು ಬಿಜೆಪಿ ಬಿಟ್ಟು ಹೋದರೆ ಲಿಂಗಾಯತರು ಮೂಲೆಗುಂಪು ಅಂತಾಗುತ್ತಾ?; ಬಿ.ವೈ ವಿಜಯೇಂದ್ರ
ಕನಕಗಿರಿ ವಿಧಾನಸಭಾ ಕ್ಷೇತ್ರ
ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿ 24 ರಿಂದ 32 ನಾಮಪತ್ರ ಸಲ್ಲಿಕೆಯಾಗಿವೆ. ಈ ಪೈಕಿ 22 ಪುರುಷ ಅಭ್ಯರ್ಥಿಗಳು ಹಾಗೂ 2 ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಸಲ್ಲಿಕೆಯಾಗಿರುವ 32 ನಾಮಪತ್ರಗಳ ಪೈಕಿ ಬಿಜೆಪಿ-4, ಕಾಂಗ್ರೆಸ್-4, ಎಎಪಿ-2, ಬಿಎಸ್ಪಿ-1, ಜೆಡಿಎಸ್-2, ಆರ್‌ಯುಪಿಪಿ-10, ಪಕ್ಷೇತರವಾಗಿ 9 ನಾಮಪತ್ರಗಳು ಸಲ್ಲಿಕೆಯಾಗಿವೆ.
ಗಂಗಾವತಿ ವಿಧಾನಸಭಾ ಕ್ಷೇತ್ರ
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ೨೩ ಅಭ್ಯರ್ಥಿಗಳಿಂದ ೩೩ ನಾಮಪತ್ರಗಳು ಸಲ್ಲಿಕೆಯಾಗಿವೆ. ೨೧ ಪುರುಷರು ಹಾಗೂ ಇಬ್ಬರು ಮಹಿಳೆಯರಿಂದ ನಾಮಪತ್ರ ಸಲ್ಲಿಕೆಯಾಗಿವೆ. ಬಿಜೆಪಿ-೦೪, ಕಾಂಗ್ರೆಸ್-೦೨, ಎಎಪಿ-೦೨, ಬಿಎಸ್ಪಿ-೦೧, ಜೆಡಿಎಸ್-೦೧, ಆರ್‌ಯುಪಿಪಿ-೧೩ ಹಾಗೂ ಪಕ್ಷೇತರ ೧೦ ನಾಮಪತ್ರಗಳು ಸೇರಿ ಒಟ್ಟು ೩೩ ನಾಮಪತ್ರಗಳು ಸಲ್ಲಿಕೆಯಾಗಿವೆ.
ಇದನ್ನೂ ಓದಿ: IPL 2023: ರಾಜಕೀಯದಲ್ಲಿ ದ್ವಿತೀಯ ಇನಿಂಗ್ಸ್ ಆರಂಭಿಸಲಿದ್ದಾರಾ ಅಂಬಾಟಿ ರಾಯುಡು!
ಯಲಬುರ್ಗಾ ವಿಧಾನಸಭಾ ಕ್ಷೇತ್ರ
ಯಲಬುರ್ಗಾ ವಿಧಾನಸಭಾ ಕ್ಷೇತ್ರದಲ್ಲಿ 15 ಅಭ್ಯರ್ಥಿಗಳಿಂದ 25 ನಾಮಪತ್ರಗಳು ಸಲ್ಲಿಕೆಯಾಗಿವೆ. ಈ ಪೈಕಿ 14 ಪುರುಷ ಅಭ್ಯರ್ಥಿಗಳಿಂದ 23 ನಾಮಪತ್ರಗಳು ಹಾಗೂ ಓರ್ವ ಮಹಿಳಾ ಅಭ್ಯರ್ಥಿಯಿಂದ 2 ನಾಮಪತ್ರಗಳು ಸಲ್ಲಿಕೆಯಾಗಿವೆ. ಬಿಜೆಪಿ-3, ಕಾಂಗ್ರೆಸ್-4, ಎಎಪಿ-2, ಬಿಎಸ್ಪಿ-1, ಜೆಡಿಎಸ್-1, ಆರ್‌ಯಪಿಪಿ-3, ಪಕ್ಷೇತರ 11 ನಾಮಪತ್ರಗಳು ಸಲ್ಲಿಕೆಯಾಗಿವೆ. ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ 89 ಪುರುಷ ಅಭ್ಯರ್ಥಿಗಳಿಂದ 142 ನಾಮಪತ್ರಗಳು ಹಾಗೂ 6 ಜನ ಮಹಿಳಾ ಅಭ್ಯರ್ಥಿಗಳಿಂದ 7 ನಾಮಪತ್ರಗಳು ಸೇರಿ ಒಟ್ಟು 95 ಅಭ್ಯರ್ಥಿಗಳಿಂದ 149 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ. ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿಯಿಂದ 16 ನಾಮಪತ್ರಗಳು ಸಲ್ಲಿಕೆಯಾಗಿದ್ದರೆ ಕಾಂಗ್ರೆಸ್‌ನಿಂದ 18 ನಾಮಪತ್ರಗಳು ಸಲ್ಲಿಕೆಯಾಗಿವೆ.
ಇನ್ನುಳಿದಂತೆ ಎಎಪಿಯಿಂದ 10, ಬಿಎಸ್ಪಿಯಿಂದ 6, ಜೆಡಿಎಸ್‌ನಿಂದ 11, ಆರ್‌ಯುಪಿಪಿಯಿಂದ 35 ಹಾಗೂ ಪಕ್ಷೇತರವಾಗಿ 53 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.