Site icon Vistara News

Karnataka elections 2023: ತಪ್ಪಿದ ಕೈ ಟಿಕೆಟ್; ಮಾದಿಗ ಸಮಾಜದಿಂದ ಪ್ರತಿಭಟನೆ

Karnataka elections 2023: Missed ticket- Protest from Madiga community

#image_title

ಲಿಂಗಸುಗೂರು: ಸ್ಥಳೀಯ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ (Karnataka elections 2023) ಮಾದಿಗ ಸಮಾಜಕ್ಕೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂಬ ಆಗ್ರಹ ಬಹುದಿನಗಳಿಂದ ಇತ್ತು. ಆದರೆ, ಈ ಬೇಡಿಕೆಯನ್ನು ಈಡೇರಿಸುವಲ್ಲಿ ವಿಫಲರಾದ ಕಾಂಗ್ರೆಸ್ ನಾಯಕರ ವಿರುದ್ಧ ಮಾದಿಗ ಸಮಾಜದ ಮುಖಂಡರು ಪಟ್ಟಣದಲ್ಲಿ ಕಾಂಗ್ರೆಸ್‌ (Congress) ನಾಯಕರ ಪೋಟೊಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಬಸ್ ನಿಲ್ದಾಣ ವೃತ್ತದಲ್ಲಿ ಪ್ರತಿಭಟನೆ ನಡಿಸಿದ ಮಾದಿಗ ಸಮಾಜದ ಮುಖಂಡರು, ಕ್ಷೇತ್ರದಲ್ಲಿ ಮೂಲ ಅಸ್ಪೃಶ್ಯ ಸಮುದಾಯಕ್ಕೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಈಗಾಗಲೇ ಹೈಕಮಾಂಡ್‌ಗೆ ಸಾಕಷ್ಟು ಭಾರಿ ಮನವರಿಕೆ ಮಾಡಲಾಗಿದೆ. ಸಾಮಾಜಿಕ ನ್ಯಾಯದ ತಳಹದಿಯಲ್ಲಿರುವ ಪಕ್ಷವಾದ ಕಾಂಗ್ರೆಸ್‌ನಿಂದ ಮಾದಿಗ ಸಮಾಜಕ್ಕೆ ರಾಜಕೀಯ ನ್ಯಾಯ ಸಿಗುತ್ತದೆ ಎಂಬ ಆಶಾಭಾವನೆ ಇತ್ತು. ಅದರಲ್ಲೂ ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಮಾದಿಗರಿಗೆ ನ್ಯಾಯ ಸಿಕ್ಕೇ ಸಿಗುತ್ತದೆ ಎಂದು ಭರವಸೆ ಹೆಚ್ಚಾಗಿತ್ತು. ಆದರೆ ಮೂಲ ಅಸ್ಪೃಶ್ಯರಿಗೆ ಕಾಂಗ್ರೆಸ್ ಟಿಕೆಟ್ ನೀಡದೇ ಸ್ಪೃಶ್ಯ ಜಾತಿಯವರಿಗೆ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್‌ನಿಂದ ಅನ್ಯಾಯ

ಮಾದಿಗರನ್ನು ರಾಜಕೀಯವಾಗಿ ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ. ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ಮೂಲ ಅಸ್ಪೃಶ್ಯರು ಕಾಂಗ್ರೆಸ್‌ಗೆ ಓಟು ಹಾಕುತ್ತಾ ಬರುತ್ತಿದ್ದಾರೆ. ಆದರೆ, ಅದೇ ಪಕ್ಷದಿಂದ ಅನ್ಯಾಯವಾಗಿದೆ ಎಂದು ಆರೋಪಿಸಿ, ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್‌, ಎ. ವಸಂತಕುಮಾರ ಅವರ ಭಾವಚಿತ್ರಗಳಿಗೆ ಚಪ್ಪಲಿ ಹಾರ ಹಾಕಲಾಗಿದ್ದು, ನಂತರ ಭಾವಚಿತ್ರಗಳನ್ನು ಸುಟ್ಟು ಆಕ್ರೋಶವನ್ನು ವ್ಯಕ್ತಪಡಿಸಿದರು.

ಇದನ್ನೂ ಓದಿ: Karnataka Election 2023: ಮೊಮ್ಮಗನನ್ನು ಪ್ರಚಾರಕ್ಕೆ ಕರೆ ತಂದ ಸಿದ್ದರಾಮಯ್ಯಗೆ ಪುಕ್ಕಲುತನ ಕಾಡುತ್ತಿದೆ: ಪ್ರತಾಪ್ ಸಿಂಹ

ಪ್ರತಿಭಟನೆಯಲ್ಲಿ ಮುಖಂಡರಾದ ವಿಜಯಕುಮಾರ, ಅಮರಪ್ಪ ಕುಂಬಾರ, ಬಸವರಾಜ ಹಟ್ಟಿ, ನಾಗರಾಜ ಅಸ್ಕಿಹಾಳ, ನೀತಿರಾಜ ಮಳ್ಳಿ, ಯಲ್ಲಪ್ಪ, ವಿನೋಧ ಹಟ್ಟಿ, ಯಲ್ಲಪ್ಪ ದೇವರಭೂಪುರ, ಹನುಮಂತ ಜಾಲಿಬೆಂಚಿ, ಬಸಲಿಂಗಪ್ಪ ಐದನಾಳ, ಹನುಮಂತ ಬೊಮ್ಮನಾಳ ಹಾಗೂ ಇನ್ನಿತರು ಪಾಲ್ಗೊಂಡಿದ್ದರು.

Exit mobile version