Site icon Vistara News

Karnataka elections 2023: 5 ಕ್ಷೇತ್ರಗಳ 27 ಜನ ಅಭ್ಯರ್ಥಿಗಳಿಂದ ಒಟ್ಟು 35 ನಾಮಪತ್ರ ಸಲ್ಲಿಕೆ

Karnataka elections 2023 Total 35 nominations filed by 27 candidates from 5 constituencies

ಹೊಸಪೇಟೆ: ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ವಿಜಯನಗರ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಗುರುವಾರ 27 ಜನ ಅಭ್ಯರ್ಥಿಗಳಿಂದ ಒಟ್ಟು 35 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ವೆಂಕಟೇಶ್ ಟಿ. ತಿಳಿಸಿದ್ದಾರೆ.

88-ಹೂವಿನಹಡಗಲಿ ವಿಧಾನಸಭಾ ಕ್ಷೇತ್ರ

ಹೂವಿನಹಡಗಲಿ(ಪರಿಶಿಷ್ಟ ಜಾತಿ) ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಕೃಷ್ಣನಾಯ್ಕ್ 2 ನಾಮಪತ್ರ ಸಲ್ಲಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾಗಿ ಕೆ.ಉಚ್ಚಂಗೆಪ್ಪ ಮತ್ತು ಎಸ್.ಮಲ್ಲೇಶ್ ನಾಯ್ಕ ನಾಮಪತ್ರ ಸಲ್ಲಿಸಿದ್ದಾರೆ.

89-ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ

ಹಗರಿಬೊಮ್ಮನಹಳ್ಳಿ(ಪರಿಶಿಷ್ಟ ಜಾತಿ) ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ರಾಮಣ್ಣ ಬಿ., ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ ಭೀಮಾ ನಾಯ್ಕ, ಜೆಡಿಎಸ್ ಪಕ್ಷದಿಂದ ಪರಮೇಶ್ವರ ಎಲ್. ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಆದರ್ಶ ಎಲ್., ವಿ.ಎಚ್.ಹನುಮಂತಪ್ಪ ಹಾಗೂ ಗೀತಾ ಬಿ. ಅವರು ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: ChatGPT : ಚಾಟ್‌ಜಿಪಿಟಿ ಮನುಷ್ಯರಿಗೆ ಪರ್ಯಾಯವೇ? ನಾರಾಯಣ ಮೂರ್ತಿ ಹೇಳಿದ್ದೇನು?

90-ವಿಜಯನಗರ ವಿಧಾನಸಭಾ ಕ್ಷೇತ್ರ

ವಿಜಯನಗರ(ಸಾಮಾನ್ಯ) ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸಿದ್ದಾರ್ಥ ಸಿಂಗ್ ಎ. ಠಾಕೂರ್ ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಪಕ್ಷ ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಕಾರ್ತಿಕ್ ಆರ್.ಎಸ್., ಎಸ್.ಕೆ.ಚೌಡಪ್ಪ ಹಾಗೂ ಪಿಂಜಾರ್ ಮಾಬುಸಾಬ್, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ದಾಸರ ಶಂಕರ್, ಸ್ವತಂತ್ರ ಅಭ್ಯರ್ಥಿಯಾಗಿ ಪಾ.ಯ.ಗಣೇಶ್ ತಮ್ಮ ನಾಮಪತ್ರಗಳನ್ನು ಸಲ್ಲಿಸಿದ್ದಾರೆ.

96-ಕೂಡ್ಲಿಗಿ ವಿಧಾನಸಭಾ ಕ್ಷೇತ್ರ

ಕೂಡ್ಲಿಗಿ(ಪರಿಶಿಷ್ಟ ಪಂಗಡ) ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಾಗಿ ಲೋಕೇಶ ವಿ. ನಾಯಕ ಹಾಗೂ ಬಂಗಾರಿ ಹನುಮಂತು ನಾಮಪತ್ರ ಸಲ್ಲಿಸಿದ್ದಾರೆ. ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಪೂಜಾರ್ ಭೀಮಪ್ಪ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳಾಗಿ ಶ್ರೀನಿವಾಸ ಎನ್., ಶ್ರೀದೇವಿ ವಿ. ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

104-ಹರಪನಹಳ್ಳಿ ವಿಧಾನಸಭಾ ಕ್ಷೇತ್ರ

ಹರಪನಹಳ್ಳಿ(ಸಾಮಾನ್ಯ) ವಿಧಾನಸಭಾ ಕ್ಷೇತ್ರದಿಂದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎನ್.ಕೊಟ್ರೇಶಿ 2 ನಾಮಪತ್ರ ಸಲ್ಲಿಸಿದ್ದಾರೆ. ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳಾಗಿ ನಾಗರಾಜ್ ಎಚ್. ಮತ್ತು ಸುಜಾತಾ ನಾಗರಾಜ ನಾಮಪತ್ರ ಸಲ್ಲಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಗಳಾಗಿ ಎ.ಟಿ.ದಾದಾ ಖಲಂದರ್, ರವಿನಾಯ್ಕ ಬಿ. ಹಾಗೂ ಬಿ.ಆರ್.ಕೃಷ್ಣನಾಯ್ಕ ಮತ್ತು ಪ್ರಭಾಕರ ಎಸ್. ಅವರು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.

ಇದನ್ನೂ ಓದಿ: Inside Story: ಬಿಜೆಪಿ ಅಧಿಕಾರಕ್ಕೆ ಬಂದರೆ ಲಿಂಗಾಯತ ಸಿಎಂ ಎಂಬ ವಾಗ್ದಾನ: ಹಾಗಾದರೆ ಮುಖ್ಯಮಂತ್ರಿ ಆಗುವವರು ಯಾರು?

ಕ್ಷೇತ್ರವಾರು ಚುನಾವಣಾ ವೀಕ್ಷಕರ ವಿವರ

ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ 5 ಕ್ಷೇತ್ರಗಳಿಗೆ ಮೂವರು ಐಎಎಸ್ ಅಧಿಕಾರಿಗಳನ್ನು ಚುನಾವಣಾ ಸಾಮಾನ್ಯ ವೀಕ್ಷಕರನ್ನಾಗಿ ನೇಮಿಸಲಾಗಿದ್ದು, 88-ಹಡಗಲಿ ಮತ್ತು 89-ಹಗರಿಬೊಮ್ಮನಹಳ್ಳಿ ಗೆ ಸೋನಿಯಾ ಮೀನಾ ದೂ.6360160377, 90-ವಿಜಯನಗರ(ಹೊಸಪೇಟೆ)-ಮದವಂತು ಎಂ. ನಾಯಕ್ ದೂ.6360187500, 96-ಕೂಡ್ಲಿಗಿ, 104-ಹರಪನಹಳ್ಳಿ ಗೆ- ಶಿವಜ್ಞಾನಂ ದೂ.9110260136.

Exit mobile version