ಬಳ್ಳಾರಿ: ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023ರ ನೀತಿ ಸಂಹಿತೆಯಡಿ ಚೆಕ್‍ಪೋಸ್ಟ್‌ಗಳಲ್ಲಿ (Check Post) ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದ್ದು, ಬುಧವಾರ ಅಕ್ರಮವಾಗಿ ಸಾಗಿಸುತ್ತಿದ್ದ 20,46,698 ರೂ. ಮೌಲ್ಯದ 9088.71 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ತಿಳಿಸಿದ್ದಾರೆ.
ಅಬಕಾರಿ ಇಲಾಖೆಯಿಂದ 20,41,931 ರೂ. ಬೆಲೆಯ 9078.54 ಲೀಟರ್ ಮದ್ಯ ಮತ್ತು ಪೊಲೀಸ್ ಇಲಾಖೆಯಿಂದ 4,767 ರೂ. ಬೆಲೆಯ 10.17 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: SpaceX Starship: ಜಗತ್ತಿನ ಅತಿದೊಡ್ಡ, ಪವರ್‌ಫುಲ್ ಸ್ಪೇಸ್‌ಎಕ್ಸ್‌ನ ಸ್ಟಾರ್‌ಶಿಪ್ ರಾಕೆಟ್ ಸ್ಫೋಟ! ಇಲ್ಲಿದೆ ನೋಡಿ ವಿಡಿಯೋ
ಈಗಾಗಲೇ ವಶಪಡಿಸಿಕೊಂಡಿದ್ದ 2,83,500 ರೂ. ಹಣವನ್ನು ಫ್ಲೈಯಿಂಗ್ ಸ್ಕ್ವಾಡ್, ಎಸ್‍ಎಸ್‍ಟಿ ಹಾಗೂ ಪೊಲೀಸ್ ತಂಡಗಳ ಪರಿಶೀಲನೆ ನಡೆಸಿ, ಜಿಲ್ಲಾ ಹಣ ಬಿಡುಗಡೆ ಸಮಿತಿಯಿಂದ ಸಂಬಂಧಪಟ್ಟವರಿಗೆ ಬಿಡುಗಡೆ ಮಾಡಲಾಗಿದೆ.