Site icon Vistara News

Karnataka Elections : ಗದಗದಲ್ಲಿ ಮತ್ತೆ ಕಂತೆ ಕಂತೆ ಹಣ ಪತ್ತೆ; 6.4 ಲಕ್ಷ ರೂ. ನಗದು, 5 ಲಕ್ಷ ಮೌಲ್ಯದ ಬಟ್ಟೆ ಸೀಜ್‌

Gadaga monney siezed

#image_title

ಗದಗ: ಸದ್ಯವೇ ಘೋಷಣೆಯಾಗಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ (Karnataka Elections) ಎಲ್ಲಾ ಜಿಲ್ಲೆಗಳಲ್ಲಿ ವಾಹನ ಸಂಚಾರ ಮತ್ತು ಸರಕು ಸಾಗಣೆಯ ಮೇಲೆ ಭಾರಿ ನಿಗಾ ಇಡಲಾಗಿದೆ. ಹೀಗಾಗಿ ಹಣ ಮತ್ತು ವಸ್ತುಗಳ ಸಾಗಾಟದ ಮೇಲೆ ಬಾರಿ ಕಣ್ಗಾವಲಿದೆ. ಇದರ ನಡುವೆ ಗದಗ ಜಿಲ್ಲೆಯಲ್ಲಿ ಭಾರಿ ಪ್ರಮಾಣದಲ್ಲಿ ಹಣ ಸಾಗಣೆ ಪ್ರಕರಣಗಳು ಪತ್ತೆಯಾಗುತ್ತಿವೆ.

ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಇಲಕಲ್ ನಾಕಾದಲ್ಲಿ ಪೊಲೀಸರು ವಾಹನವನ್ನು ತಡೆಗಟ್ಟಿ ಪರಿಶೀಲಿಸಿದಾಗ ಯಾವುದೇ ದಾಖಲೆಗಳಿಲ್ಲದ 6 ಲಕ್ಷ 40 ಸಾವಿರ ರೂ. ಪತ್ತೆಯಾಗಿದೆ. ಕೊಪ್ಪಳದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರಿನಲ್ಲಿ ಹಣ ಪತ್ತೆಯಾಗಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡು ಇದೀಗ ಕಾರಿನಲ್ಲಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ನಡುವೆ ಮುಳಗುಂಡ ಮುಳಗುಂದ ಚೆಕ್ ಪೋಸ್ಟ್’ನಲ್ಲಿ ಬಟ್ಟೆ ಹೊತ್ತೊಯ್ಯುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದ ಪೊಲೀಸರು ಸೂಕ್ತ ದಾಖಲೆಗಳಿಲ್ಲದ 5 ಲಕ್ಷ ರೂ ಮೌಲ್ಯದ ಬಟ್ಟೆಯನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಿಂದ ಗದಗಕ್ಕೆ ಬರುತ್ತಿದ್ದ ಲಾರಿಯನ್ನು ತಡೆದಾಗ ಇದು ಬೆಳಕಿಗೆ ಬಂತು. ಗದಗ ಎಸ್ಪಿ ಬಿ.ಎಸ್ ನೇಮಗೌಡರು ಈ ಎರಡೂ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನಲ್ಲಿ 1.9 ಲಕ್ಷ ರೂಪಾಯಿ ಸೀಜ್

ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿ ಚೆಕ್ ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ 1.90 ಲಕ್ಷ ರೂ.ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಂಧ್ರಪ್ರದೇಶದ ಅನಂತಪುರದಿಂದ ಧಾರವಾಡ ಜಿಲ್ಲೆಯ ಗುಡಗೇರಿಗೆ ಹೊರಟಿದ್ದ ಕಾರಿನಲ್ಲಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ : Karnataka Elections : ಎಲ್ಲೆಡೆ ಝಣಝಣ ಕಾಂಚಾಣ, ಸೀರೆಗಳ ದರ್ಬಾರ್‌; ಚುನಾವಣೆಗೆ ಮುನ್ನವೇ ಹಣದ ಹರಿವು

Exit mobile version