Site icon Vistara News

Karnataka Elections : ಚುನಾವಣಾ ಕಣದಿಂದ ಹಿಂದೆ ಸರಿದ ದಾವಣಗೆರೆ ಉತ್ತರ ಬಿಜೆಪಿ ಶಾಸಕ ಎಸ್‌.ಎ ರವೀಂದ್ರನಾಥ್‌

SA Ravindranath

#image_title

ದಾವಣಗೆರೆ: ಜನಪ್ರಿಯ ಮತ್ತು ಜನಪರ ಜನಪ್ರತಿನಿಧಿ ಎಂದು ಹೆಸರಾಗಿರುವ ಬಿಜೆಪಿ ಶಾಸಕ ಎಸ್‌.ಎ ರವೀಂದ್ರನಾಥ್‌ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. ಅವರು ಪ್ರಸಕ್ತ ದಾವಣಗೆರೆ ಉತ್ತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಸೋಮವಾರವಷ್ಟೇ ಕುಂದಾಪುರದ ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತಾನು ಸ್ಪರ್ಧಿಸುವುದಿಲ್ಲ ಎಂದು ಘೋಷಿಸಿದ್ದರು.

ʻʻಆರೋಗ್ಯ ಸರಿ ಇಲ್ಲದ ಕಾರಣ ನಾನೇ ಕಣದಿಂದ ಹಿಂದೆ ಸರಿಯುವುದಾಗಿ ಪಕ್ಷದ ವರಿಷ್ಠರಿಗೆ ತಿಳಿಸಿದ್ದೇನೆ. ಈ ಚುನಾವಣೆಗೆ ನಾನು ಸ್ಪರ್ಧಿಸುವುದಿಲ್ಲ. ವಯಸ್ಸಿನ ಕಾರಣಕ್ಕಾಗಿ ಅಲ್ಲʼʼ ಎಂದು ಅವರು ಹೇಳಿದ್ದಾರೆ.

ʻʻವಯಸ್ಸಿನ ಕಾರಣಕ್ಕಾಗಿ ನನಗೆ ಪಕ್ಷ ಟಿಕೆಟ್‌ ನಿರಾಕರಿಸಿಲ್ಲ. ಆರೋಗ್ಯ ಸರಿ ಇಲ್ಲದ ಕಾರಣಕ್ಕೆ ನಾನೇ ಕಣದಿಂದ ಹಿಂದೆ ಸರಿಯುತ್ತಿರುವುದನ್ನು ಬೆಂಗಳೂರಿನಲ್ಲಿ ನಡೆದ ಪಕ್ಷದ ಕೋರ್‌ ಕಮಿಟಿ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿ ಬಂದಿದ್ದೇನೆʼʼ ಎಂದು ನುಡಿದಿದ್ದಾರೆ.

ಉತ್ತರ ಕ್ಷೇತ್ರಕ್ಕೆ ಐವರು ಆಕಾಂಕ್ಷಿಗಳು

ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಐವರು ಆಕಾಂಕ್ಷಿಗಳಿದ್ದಾರೆ. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್‌.ಜಗದೀಶ, ಮಾಜಿ ಮೇಯರ್‌ ಎಸ್‌.ಟಿ.ವೀರೇಶ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ, ಮಾಜಿ ಜಿಲ್ಲಾಧ್ಯಕ್ಷ ಅಣಬೇರು ಜೀವನಮೂರ್ತಿ, ಧನಂಜಯ ಕುಮಾರ ಹೆಸರು ಪ್ರಸ್ತಾಪವಾಗಿದೆ.

ಐದು ಬಾರಿ ಶಾಸಕರಾಗಿದ್ದಾರೆ ರವೀಂದ್ರನಾಥ್‌

ದಾವಣಗೆರೆ ಜಿಲ್ಲೆಯ ಎಸ್.ಎ.ರವೀಂದ್ರನಾಥ್ ಇದುವರೆಗೂ 5 ಬಾರಿ ಶಾಸಕರಾಗಿದ್ದಾರೆ. 1994, 1999, 2004 ರಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಹಿನ್ನೆಲೆ ದಾವಣಗೆರೆ ಉತ್ತರಕ್ಕೆ ಶಿಫ್ಟ್ ಆಗಿದ್ದ ಎಸ್.ಎ.ರವೀಂದ್ರನಾಥ್ 2008, 2018 ರಲ್ಲಿ ದಾವಣಗೆರೆ ಉತ್ತರದಲ್ಲಿ ಗೆಲವು ಸಾಧಿಸಿ 5 ಬಾರಿ ಶಕ್ತಿ ಸೌಧಕ್ಕೆ ಪ್ರವೇಶ ಮಾಡಿದ್ದಾರೆ. 2008 ರಲ್ಲಿ ಕೃಷಿ ಸಚಿವರಾಗಿ, 2010 ರಲ್ಲಿ ತೋಟಗಾರಿಕೆ ಹಾಗೂ ಕಬ್ಬು ಅಭಿವೃದ್ಧಿ ಮತ್ತು ನಿರ್ದೇಶನಾಲಯದ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 2006 ರಲ್ಲೂ ಕಬ್ಬು ಅಭಿವೃದ್ಧಿ ಮತ್ತು ನಿರ್ದೇಶನಾಲಯದ ಸಚಿವರಾಗಿದ್ದರು. 1947ರಲ್ಲಿ ಜನಿಸಿದ್ದ ಎಸ್.ಎ.ರವೀಂದ್ರನಾಥ್ ಅವರಿಗೆ ಈಗ 77 ವರ್ಷ.

ಇದನ್ನು ಓದಿ : Karnataka Elections : ಕುಂದಾಪುರದ ವಾಜಪೇಯಿ, ಬಿಜೆಪಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜಕೀಯ ನಿವೃತ್ತಿ

Exit mobile version