Site icon Vistara News

Karnataka Elections : ನಾಮಪತ್ರ ಸಲ್ಲಿಸಲು ಆನೆ ಮೇಲೆ ಕುಳಿತು ಆಗಮಿಸಿದ ಬಿಎಸ್‌ಪಿ ಅಭ್ಯರ್ಥಿ!

BSP candidate

#image_title

ಆನೇಕಲ್‌: ರಾಜ್ಯದೆಲ್ಲೆಡೆ ನಾಮಪತ್ರ ಸಲ್ಲಿಕೆಯ ಸುಗ್ಗಿ. ಅದರಲ್ಲೂ ಆನೇಕಲ್ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ (Karnataka Elections) ಬಿಎಸ್‌ಪಿ ಅಭ್ಯರ್ಥಿ ಡಿಫರೆಂಟ್‌ ಸ್ಟೈಲಲ್ಲಿ ಬಂದು ನಾಮಪತ್ರ ಸಲ್ಲಿಸಿ ಗಮನ ಸೆಳೆದರು.

ಆನೆ ಮೇಲೆ ಕುಳಿತು ಬಂದ ಬಿಎಸ್‌ಪಿ ಅಭ್ಯರ್ಥಿ

ಆನೇಕಲ್‌ ಕ್ಷೇತ್ರದಿಂದ ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ರಾಷ್ಟ್ರೀಯ ಯುವ ಪ್ರಶಸ್ತಿ ವಿಜೇತ ಡಾ. ಚಿನ್ನಪ್ಪ ವೈ ಚಿಕ್ಕಹಾಗಡೆ ಕಣಕ್ಕಿಳಿದಿದ್ದಾರೆ. ಅವರು ನಾಮಪತ್ರ ಸಲ್ಲಿಸಲು ಆನೆಯ ಮೇಲೆ ಕುಳಿತು ಬಂದಿದ್ದು ವಿಶೇಷವಾಗಿತ್ತು.

ಇದು ನಿಜವಾದ ಆನೆಯಲ್ಲ!

ಆನೆಯ ಕುಳಿತು ಚಿನ್ನಪ್ಪ ಅವರು ರಾಜಗಾಂಭೀರ್ಯದಿಂದ ಸಾಗಿಬರುತ್ತಿದ್ದರೆ ಅಕ್ಕಪಕ್ಕದವರೆಲ್ಲ ಏನಿದು ಅಂತ ಅಚ್ಚರಿಯಿಂದ ನೋಡಿದರು. ಜತೆಗೆ ಪ್ರಮುಖ ಬೀದಿಗಳಲ್ಲಿ ಅಪಾರ ಸಂಖ್ಯೆಯಲ್ಲಿನ‌ ಕಾರ್ಯಕರ್ತರ ಮೆರವಣಿಗೆಯೂ ನಡೆಯಿತು. ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾ ತಂಡಗಳು ಸಾಥ್ ನೀಡಿದ್ದವು.

ಪಟ್ಟಣದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಾವಿರಾರು ಸಂಖ್ಯೆಯ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಮೆರವಣಿಗೆ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸಿ ಚುನಾವಣಾ ಅಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಿದರು. ಬಳಿಕ ಮಾತನಾಡಿದ ಅಭ್ಯರ್ಥಿ ಚಿನ್ನಪ್ಪ, ಆನೇಕಲ್ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಇದ್ದ ಪಕ್ಷಗಳು ಯಾವುದೇ ರೀತಿಯಾದ ಅಭಿವೃದ್ಧಿ ಕೆಲಸಗಳನ್ನ ಮಾಡಿಲ್ಲ. ಹೀಗಾಗಿ ಕ್ಷೇತ್ರದ ಮತದಾರರು ಬಿಎಸ್ಪಿಗೆ ಮತನೀಡುವ ಮೂಲಕ ಬದಲಾವಣೆಯನ್ನ ತರಬೇಕು ಎಂದು ಮನವಿ ಮಾಡಿದರು.

ಅಂದ ಹಾಗೆ, ಚಿನ್ನಪ್ಪ ಅವರು ಸಾಗಿ ಬಂದ ಆನೆ ನಿಜವಾದ ಆನೆಯಲ್ಲ. ಬಿಎಸ್‌ಪಿ ಪಕ್ಷದ ಚಿಹ್ನೆಯಾಗಿರುವ ಆನೆಯನ್ನೇ ಬಳಸಿ ನಾಮಪತ್ರ ಸಲ್ಲಿಸಲು ಹೋಗಬೇಕು ಎನ್ನುವುದು ಚಿನ್ನಪ್ಪ ಅವರ ಆಸೆಯಾಗಿತ್ತು. ಹಾಗಾಗಿ ಅವರು ಕೃತಕ ಆನೆಯೊಂದನ್ನು ನಿರ್ಮಿಸಿ ಅದರಲ್ಲಿ ಸಾಗಿಬಂದಿದ್ದಾರೆ!

ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಯಲ್ಲಿ ಎಂ.ಸತೀಶ್ ರೆಡ್ಡಿ ನಾಮಪತ್ರ

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಶಾಸಕ ಎಂ.ಸತೀಶ್ ರೆಡ್ಡಿ ಸಾವಿರಾರು ಬೆಂಬಲಿಗರ ಜೊತೆ ಮೆರವಣಿಗೆಯಲ್ಲಿ ಆಗಮಿಸಿ, ಬಿಬಿಎಂಪಿ ವಲಯ ಕಚೇರಿಯಲ್ಲಿ ಕುಟುಂಬ ಸಮೇತವಾಗಿ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಹಲವಾರು ವಾರ್ಡ್ ಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಮುಖಂಡರು ಹಾಗೂ ಕಾರ್ಯಕರ್ತರ ಜೊತೆ ಶಾಸಕ ಎಂ.ಸತೀಶ್ ರೆಡ್ಡಿ ಬೊಮ್ಮನಹಳ್ಳಿಯ ಹೊಂಗಸಂದ್ರದ ವೀರಾಂಜನೇಯ ಸ್ವಾಮಿ ದೇವಾಲಯ ಹಾಗೂ ಬೊಮ್ಮನಹಳ್ಳಿಯ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸತೀಶ್ ರೆಡ್ಡಿ ಅವರನ್ನು ಕಾರ್ಯಕರ್ತರು ಹೆಗಲ ಮೇಲೆ ಹೊತ್ತು ಬಿಬಿಎಂಪಿ ಕಚೇರಿವರೆಗೆ ಕರೆತಂದರು.

ಬಳಿಕ ಸತೀಶ್ ರೆಡ್ಡಿ, ಹಾಗೂ ಅವರ ಧರ್ಮಪತ್ನಿ ಸೇರಿದಂತೆ ಕ್ಷೇತ್ರದ ಪ್ರಮುಖ ಮುಖಂಡರ ಜೊತೆ ಜೊತೆ ಚುನಾವಣಾ ಅಧಿಕಾರಿಗಳ ಕಚೇರಿಗೆ ತೆರಳಿ ಸತೀಶ್ ರೆಡ್ಡಿ ನಾಮಪತ್ರ ಸಲ್ಲಿಕೆ ಮಾಡಿದರು.

ಉಮೇದುವಾರಿಕೆ ಸಲ್ಲಿಕೆಯ ಬಳಿಕ ಮಾತನಾಡಿದ ಶಾಸಕ ಎಂ. ಸತೀಶ್ ರೆಡ್ಡಿ, ಬೊಮ್ಮನಹಳ್ಳಿ ಯಿಂದ ‌ನಾಲ್ಕನೇ ಬಾರಿ ಸ್ಪರ್ಧಿಸಿದ್ದೇನೆ 20 ವರ್ಷದಿಂದ ಮಾಡಿದ ‌ಅಭಿವೃದ್ಧಿ ಕೆಲಸಗಳು ನನ್ನ ಬೆನ್ನಿಗಿವೆ. ಅಭಿವೃದ್ಧಿ ಕೆಲಸ ಹಾಗೂ ಪ್ರಧಾನಿ ಮೋದಿ ಮಾಡಿದ ಕೆಲಸದಿಂದ‌ ನಾನು ಮತ ಕೇಳುತ್ತಿದ್ದೇನೆ. ಬಿಜೆಪಿ ಕಾರ್ಯಕರ್ತರು ಹುಮ್ಮಸ್ಸಿನಲ್ಲಿದ್ದು, ಕಳೆದ ಸಲ‌ 59 ಸಾವಿರ ಲೀಡ್ ಕೊಟ್ಟಿದ್ದರು ಮೂರು ಬಾರಿಯೂ ನನ್ನ ಜೊತೆಯಲ್ಲಿ ನಿಂತಿದ್ದು, ನಾಲ್ಕನೇ ಬಾರಿಯೂ ನನ್ನ ಜೊತೆಗಿದ್ದಾರೆ ಹೀಗಾಗಿ ಮತ್ತೊಮ್ಮೆ ಬೊಮ್ಮನಹಳ್ಳಿಯಲ್ಲಿ ನಾನು ಗೆಲ್ಲುವುದರ ಯಾವುದೇ ಅನುಮಾನವಿಲ್ಲ ಎಂದರು.

ಇದನ್ನೂ ಓದಿ : Karnataka Elections : ಸಿದ್ದರಾಮಯ್ಯ ವಿರುದ್ಧ ತೊಡೆತಟ್ಟಿ ವರುಣ ಕಣಕ್ಕಿಳಿದ ವಿ. ಸೋಮಣ್ಣ, ವಿಕ್ಟರಿ ಸೋಮಣ್ಣ ಎಂದ ಬೊಮ್ಮಾಯಿ

Exit mobile version