ಮಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶನಿವಾರ ಟೆಂಪಲ್ ರನ್ ಜತೆಗೆ ಚುನಾವಣಾ ಪ್ರಚಾರದಲ್ಲೂ ಭಾಗಿಯಾದರು. ಬೆಂಗಳೂರಿನಿಂದ ಹೊರಟು ಧರ್ಮಸ್ಥಳಕ್ಕೆ ಹೆಲಿಕಾಪ್ಟರ್‌ನಲ್ಲಿ ತೆರಳಿದ ಅವರು ದೇವರ ದರ್ಶನ ಮಾಡಿದ ಬಳಿಕ ಉಜಿರೆಯಲ್ಲಿ ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ ಶಿವರಾಮ್ ಪರವಾಗಿ ನಡೆದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿದರು. ಈ ನಡುವೆ, ಅವರ ಹೆಲಿಕಾಪ್ಟರ್ ಸಂಚಾರಕ್ಕೆ ಸಂಬಂಧಿಸಿ ಕಿರಿಕ್ ಕೂಡಾ ಉಂಟಾಯಿತು.
ಬೆಳಗ್ಗೆ ಕನಕಪುರ ಮಳಗಾಳು ಈಶ್ವರ ದೇವಸ್ಥಾನದಿಂದ ಡಿಕೆಶಿ ಟೆಂಪಲ್ ರನ್ ಆರಂಭ ಆಗಿತ್ತು. ಕನಕಪುರದಿಂದ ನೇರವಾಗಿ ಧರ್ಮಸ್ಥಳಕ್ಕೆ ಆಗಮಿಸಿದ ಡಿಕೆಶಿ ದೇವರ ದರ್ಶನ ಪಡೆದುಕೊಂಡು ಬಳಿಕ ಸುಮಾರು 15 ನಿಮಿಷ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಜೊತೆ ಮಾತುಕತೆ ನಡೆಸಿದರು.
ಧರ್ಮಸ್ಥಳಕ್ಕೆ ಡಿ.ಕೆ.ಶಿವಕುಮಾರ್‌ಗಿಂ ಮುಂಚಿತವಾಗಿ ಆಗಮಿಸಿದ್ದ ಪತ್ನಿ, ಮಗಳು ಹಾಗೂ ಅಳಿಯ ಹೆಲಿಪ್ಯಾಡ್ ನಲ್ಲಿ ಇಳಿಯುತಿದ್ದಂತೆಯೇ ಚುನಾವಣಾ ಅಧಿಕಾರಿಗಳು ಹೆಲಿಕಾಪ್ಟರ್ ತಪಾಸಣೆಗೆ ಮುಂದಾಗಿದರು.
ಈ ವೇಳೆ ಪೈಲಟ್ ಹಾಗೂ ಚುನಾವಣಾ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಖಾಸಗಿ ಕಾಪ್ಟರ್ ತಪಾಸಣೆ ಮಾಡಬಾರದು ಅಂತ ಪೈಲಟ್ ಆಕ್ಷೇಪ ವ್ಯಕ್ತಪಡಿಸಿದರು. ಆದ್ರೆ ಡಿಕೆಶಿ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡದೆ ಹೆಲಿಪ್ಯಾಡ್ ನಿಂದ ದೇವಸ್ತಾನಕ್ಕೆ ತೆರಳಿತು. ಇವರ ಬಳಿಕ ಆಗಮಿಸಿದ ಡಿಕೆಶಿ ಪ್ರಯಾಣಿಸಿದ್ದ ಹೆಲಿಕಾಪ್ಟರ್ ಕೂಡಾ ತಪಾಸಣೆ ಮಾಡಲಾಯಿತು. ಬಳಿಕ ಕುಟುಂಬ ಸಮೇತ ದೇವರ ದರ್ಶನ ಪಡೆದ ಬಳಿಕ ಮಾತನಾಡಿದ ಡಿಕೆಶಿ ದೇವಸ್ಥಾನದಲ್ಲಿ ರಾಜಕೀಯ ಮಾತಾಡೋದಿಲ್ಲ. ಮಂಜುನಾಥ ಮಾತು ಬಿಡಲ್ಲ ಅನ್ನೋ ಮಾತಿದೆ ಎಂದರು.
ಮಂಜುನಾಥನ ದರ್ಶನದ ಬಳಿಕ ಉಜಜಿರೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಡಿಕೆಶಿ ಭಾಗವಹಿಸಿದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಿತ್ ಶಿವರಾಂ ಪರ ಪ್ರಚಾರ ನಡೆಸಿದರು. ಸಭೆಯಲ್ಲಿ ಮಾತನಾಡಿದ ಡಿಕೆಶಿ ಬಿಜೆಪಿ ಸರ್ಕಾರದ ಬೆಲೆ ಏರಿಕೆ ಹಾಗೂ ಕಮಿಷನ್ ವಿಚಾರವಾಗಿ ಬಿಜೆಪಿ ಆಡಳಿತವನ್ನು ಟೀಕಿಸಿದ್ರು. ಚುನಾವಣೆಗೆ ಮತದಾನ ಮಾಡುವಾರ ಬೂತ್ ಹೊರಗೆ ಗ್ಯಾಸ್ ಸಿಲಿಂಡರ್‌ಗೆ ಹೂವು ಹಾಕಿಡಬೇಕು. ಜನರಿಗೆ ಅದನ್ನು ನೋಡಿದರೆ ಯಾರಿಗೆ ಮತ ಹಾಕಬೇಕು ಎನ್ನುವುದು ಗೊತ್ತಾಗುತ್ತದೆ ಎಂದು ಬಿಜೆಪಿ ಸರಕಾರದ ದುರಾಡಳಿತದ ಬಗ್ಗೆ ಮಾತನಾಡಿದರು.
ಬೆಳ್ತಂಗಡಿಯ ಸಮಾವೇಶವಾಗಿದ್ದರೂ ಡಿ.ಕೆ ಶಿವಕುಮಾರ್ ಅವರು ಆಗಮಿಸಿದ ಹಿನ್ನೆಲೆಯಲ್ಲಿ ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ, ಮೂಡಬಿದ್ರೆ ಕೈ ಅಭ್ಯರ್ಥಿ ಮಿಥುನ್ ರೈ ಸಭೆಯಲ್ಲಿ ಭಾಗಿಯಾಗಿದ್ದರು. ಈ ಭಾರಿ ಕಾಂಗ್ರೆಸ್ ಗೆದ್ದೇ ಗೆಲ್ಲೊತ್ತೆ ಅನ್ನೋ ವಿಶ್ವಾಸ ಇರಿಸಿರುವ ಡಿ.ಕೆ ಶಿವಕುಮಾರ್ ಮತ್ತೆ ಟೆಂಪಲ್ ರನ್ ಮುಂದುವರಿಸಿದ್ದಾರೆ. ಶೃಂಗೇರಿ, ಕೊಲ್ಲೂರು, ಉಡುಪಿ ಕ್ಷೇತ್ರಗಳಲ್ಲಿ ಮತ ಯಾಚನೆ ಜೊತೆ ದೇವರ ಆಶೀರ್ವಾದ ಪಡೆಯಲಿದ್ದಾರೆ.
ಇದನ್ನೂ ಓದಿ : DK Shivakumar : ಕಾಂಗ್ರೆಸ್ ಗೆಲುವು, ಸಿಎಂ ಗಾದಿ ಮೇಲೆ ಕಣ್ಣಿಟ್ಟು ಶೃಂಗೇರಿಯಲ್ಲಿ ಚಂಡಿಕಾ ಯಾಗ ಮಾಡ್ತಿದಾರಾ ಡಿಕೆಶಿ?