ಬೆಂಗಳೂರು: ಕಾಂಗ್ರೆಸ್ ಮತ್ತು ಬಿಜೆಪಿಯ ಆಂತರಿಕ ಸಮೀಕ್ಷೆಯಲ್ಲೇ (Karnataka Elections) ಜೆಡಿಎಸ್‌ಗೆ ೫೦ ಸೀಟು ಸಿಗಲಿದೆ ಎಂದು ಹೇಳಲಾಗಿದೆ. ಆದರೆ, ನಮ್ಮ ಶಕ್ತಿ ಅದಕ್ಕಿಂತ ದೊಡ್ಡದು. ನಾವು ೧೨೩ ಸ್ಥಾನ ಗೆಲ್ಲುತ್ತೇವೆ: ಹೀಗೆಂದು ಆತ್ಮವಿಶ್ವಾಸದಿಂದ ಹೇಳಿದರು ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ.
ಮಳೆಯ ಕಾರಣದಿಂದ ಪಂಚರತ್ನ ಯಾತ್ರೆಗೆ ಬ್ರೇಕ್ ನೀಡಿದ ಬೆನ್ನಲ್ಲೇ ಭಾನುವಾರ ಜೆಡಿಎಸ್ ಪ್ರಧಾನ ಕಚೇರಿ ಜೆಪಿ ಭವನದಲ್ಲಿ ಸುಮಾರು ೫೩ಕ್ಕೂ ಅಧಿಕ ಸ್ಥಳೀಯ ಮುಖಂಡರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚಾಮರಾಜ ನಗರದ ಹಾಲಿ ಶಾಸಕ ಜಮೀರ್ ಅಹಮದ್ ಅವರನ್ನು ಗುರಿಯಾಗಿಟ್ಟುಕೊಂಡೇ ಹೆಚ್ಚು ಹೊತ್ತು ಮಾತನಾಡಿದ ಎಚ್.ಡಿ.ಕುಮಾರಸ್ವಾಮಿ. ಈ ಬಾರಿ ಈ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲೇಬೇಕು ಎಂದರು.
ಜಮೀರ್ ಖಾನ್ ಹೆದರಿಸಿದರೆ ನನ್ನ ಗಮನಕ್ಕೆ ತನ್ನಿ, ನಾನು ನೋಡ್ಕೊತೇನೆ
ʻʻಚಾಮರಾಜಪೇಟೆ ಹಿಂದೆ ಯಾವ ತರ ಇತ್ತು? ಬಳಿಕ ದೇವೆಗೌಡರು ಯಾವ ತರ ಶ್ರಮ ಹಾಕಿದ್ರು? ಅದಕ್ಕೆಲ್ಲಾ ಒಂದು ಇತಿಹಾಸವಿದೆ. ಈಗ ಮತ್ತೊಮ್ಮೆ ಜೆಡಿಎಸ್ ಅಲ್ಲಿ ಗೆಲ್ಲಬೇಕುʼʼ ಎಂದ ಅವರು, ʻʻಹಣ ಹಂಚೋದು ದೊಡ್ಡದಲ್ಲ. ಆದರೆ ಆ ಹಣ ಹೇಗೆ ಸಂಗ್ರಹ ಆಗಿದೆ ಅದನ್ನು ಗಮನಿಸಬೇಕುʼʼ ಎಂದು ಜಮೀರ್‌ಗೆ ಪರೋಕ್ಷವಾಗಿ ಕುಟುಕಿದರು.
ʻʻಪಾಪದ ಕೊಡ ತುಂಬಿದಾಗ ಶಕ್ತಿ ಕೊಡೋಕೆ ದೇವರ ಕೃಪೆ ಬೇಕು. ಆಗ ಪಶ್ಚಾತ್ತಾಪ ಪಡೋಕೆ ಸಮಯ ಬೇಕು. ಅವರನ್ನು ಎದುರಿಸೋಕೆ ನಿಮ್ಮ ಶಕ್ತಿ ಸಾಕುʼʼ ಎಂದ ಜಮೀರ್ ಖಾನ್, ʻʻನಿಮಗೆ ಪೊಲೀಸ್ ಬಿಟ್ಟು ಹೆದರಿಸಿದರೆ ನನ್ನ ಗಮನಕ್ಕೆ ತನ್ನಿ.. ನಾನು ನೋಡ್ಕೊತೇನೆʼʼ ಎಂದು ಜಮೀರ್ ಅಹ್ಮದ್ ವಿಚಾರದಲ್ಲಿ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಬೆಂಗಳೂರಿನಲ್ಲಿ ಅತಿ ಹೆಚ್ಚು ಸೀಟು
ʻʻಪಂಚರತ್ನ ರಥಯಾತ್ರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಧ್ಯರಾತ್ರಿ ಎರಡು ಗಂಟೆಗೆ ಜನ ಸೇರಿ ಸ್ವಾಗತ ಕೋರುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಕಾಂಗ್ರೆಸ್, ಬಿಜೆಪಿಗಿಂತ ಅತಿ ಹೆಚ್ಚು ಕ್ಷೇತ್ರ ಗೆಲ್ಲುವ ಭರವಸೆಯಿದೆʼʼ ಎಂದು ಹೇಳಿದರು ಕುಮಾರಸ್ವಾಮಿ.
ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇ ಗೌಡ, ಜೆಡಿಎಸ್ ರಾಜ್ಯಧ್ಯಕ್ಷ ಸಿಎಂ ಇಬ್ರಾಹಿಂ, ಬೆಂಗಳೂರು ಜಿಲ್ಲಾಧ್ಯಕ್ಷ ಪ್ರಕಾಶ್ ಭಾಗಿಯಾಗಿದ್ದರು.
ಇದನ್ನೂ ಓದಿ | Criminal politics | RTI ಕಾರ್ಯಕರ್ತನ ಕೊಲೆ ಕೇಸಲ್ಲಿ ಜೈಲು ಪಾಲಾಗಿದ್ದ ವ್ಯಕ್ತಿ ಜೆಡಿಎಸ್‌ಗೆ ಸೇರ್ಪಡೆ! ಜಮೀರ್ ವಿರುದ್ಧ ಕಣಕ್ಕೆ?