Site icon Vistara News

Karnataka Elections | ಜನಾರ್ದನ ರೆಡ್ಡಿ ಹೊಸ ಪಕ್ಷ ಕಟ್ಟಲ್ಲ, ಕಟ್ಟಿದರೂ ನಾನು ಹೋಗಲ್ಲ ಎಂದ ಸೋಮಶೇಖರ್‌ ರೆಡ್ಡಿ

somashekhar reddy

ಬಳ್ಳಾರಿ: ಒಂದು ಕಾಲದ ಮೈನಿಂಗ್‌ ದೊರೆ, ಈಗ ಬಿಜೆಪಿಯಿಂದ ನಿರ್ಲಕ್ಷಿತರಾಗಿರುವ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಬಿಡುತ್ತಾರೆ, ಹೊಸ ಪಕ್ಷ ಕಟ್ಟುತ್ತಾರೆ (Karnataka Elections) ಸುದ್ದಿಗಳ ನಡುವೆಯೇ ಅವರ ಸೋದರ, ಗಾಲಿ ಸೋಮಶೇಖರ್‌ ರೆಡ್ಡಿ ಇನ್ನೂ ಆಶಾವಾದದ ಮಾತಾಡಿದ್ದಾರೆ, ಜತೆಗೆ ಒಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಜನಾರ್ದನ ರೆಡ್ಡಿ ಅವರು ಪಕ್ಷ ಬಿಟ್ಟು ಎಲ್ಲೂ ಹೋಗಲ್ಲ, ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಡೆದಿದೆ‌‌. ನಾನು ಮತ್ತು ಶ್ರೀ ರಾಮುಲು ಹಾಗೂ ಪಕ್ಷದ ಹೈಕಮಾಂಡ್ ಅವರನ್ನು ಪಕ್ಷಕ್ಕೆ ಮರಳಿ ತರುತ್ತೇವೆ ಎಂದು ಗಾಲಿ ಸೋಮಶೇಖರ್‌ ರೆಡ್ಡಿ ಹೇಳಿದ್ದಾರೆ.…

ʻʻಅವರು ಹೊಸ ಪಕ್ಷ ಕಟ್ಟುವ ವಿಚಾರ ಕೇವಲ ಊಹಾಪೋಹʼʼ ಎಂದು ಹೇಳಿರುವ ಅವರು, ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ನನಗೆ ಇಲ್ಲ. ಅವರು ಒಂದು ವೇಳ ಪಕ್ಷ ಕಟ್ಟಿದರೂ ನಾ ಆ ಪಕ್ಷಕ್ಕೆ ಹೋಗಲ್ಲ. ಶ್ರೀರಾಮುಲು ಬಿಎಸ್‌ಆರ್‌ ಪಕ್ಷ ಕಟ್ಟಿ ಬಳಿ ನಾನು ಸಾಕಷ್ಟು ಅನುಭವಿಸಿದ್ದೇನೆʼʼ ಎಂದು ಹೇಳಿದ್ದಾರೆ.…

ʻʻನಾನು ಇದೇ ಬಿಜೆಪಿ ಪಕ್ಷದಲ್ಲಿ ಇರುವವನು. ರಾಜಕೀಯ ನಿವೃತ್ತಿ ಆದರೆ ಇದೇ ಪಕ್ಷದಿಂದ ನಿವೃತ್ತಿ ಆಗುವೆ. ಯಾವುದೇ ಕಾರಣಕ್ಕೂ ಬೇರೆ ಪಕ್ಷಕ್ಕೆ ಹೋಗಲ್ಲʼʼ ಎಂದು ಸೋಮಶೇಖರ್‌ ರೆಡ್ಡಿ ಹೇಳಿದ್ದಾರೆ.

ಹೊಸ ಪಕ್ಷ ಸ್ಥಾಪಿಸುವ ಚಿಂತನೆಯಲ್ಲಿ ರೆಡ್ಡಿ
ಬಿಜೆಪಿ ಮತ್ತು ಶ್ರೀರಾಮುಲು ಮೇಲೆ ಮುನಿಸಿಕೊಂಡಿರುವ ಜನಾರ್ದನ ರೆಡ್ಡಿ ಅವರು ಕಲ್ಯಾಣ ಕರ್ನಾಟಕ ಪಕ್ಷ ಎಂಬ ಹೊಸ ಪಕ್ಷ ಸ್ಥಾಪನೆ ಮಾಡಲಿದ್ದಾರೆ ಎಂದು ಆಪ್ತ ಮೂಲಗಳು ತಿಳಿಸಿದ್ದವು. ಈ ಬಗ್ಗೆ ಪಕ್ಷ ನೋಂದಣಿ ಮಾಡಿಕೊಳ್ಳುವುದಕ್ಕಾಗಿ ದಿಲ್ಲಿಗೆ ಪ್ರತಿನಿಧಿಗಳನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ | Karnataka Politics | ಜನಾರ್ದನ ರೆಡ್ಡಿ ಹೊಸ ಪಕ್ಷ ಪ್ರಸ್ತಾಪ; ಬಿಜೆಪಿ ಮೇಲೆ ಒತ್ತಡ ತಂತ್ರವೇ?

Exit mobile version