Site icon Vistara News

Karnataka Elections : ಮಾನ್ಯತೆ ಪಡೆಯದ ಪಕ್ಷ, ಪಕ್ಷೇತರರಿಗೂ ಇದೆ ವಾಹನ, ಧ್ವನಿವರ್ಧಕ ಬಳಸುವ ಹಕ್ಕು

high court gives bail to rape accused boy

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಮಾನ್ಯತೆ ಪಡೆಯದ ರಾಜಕೀಯ ಪಕ್ಷ ಮತ್ತು ಪಕ್ಷೇತರ ಅಭ್ಯರ್ಥಿಗಳಿಗೆ ಪ್ರಚಾರಕ್ಕೆ ವಾಹನ ಮತ್ತು ಧ್ವನಿವರ್ಧಕ ಬಳಕೆಗೆ ಅವಕಾಶ ನಿರಾಕರಿಸಿದ್ದನ್ನು ರಾಜ್ಯ ಹೈಕೋರ್ಟ್‌ ತಡೆಹಿಡಿದು ಬಳಸಬಹುದು ಎಂದಿದೆ.

ರಾಜ್ಯದಲ್ಲಿ ಇನ್ನೂ ಮಾನ್ಯತೆ ಪಡೆಯದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್‌ಪಿ) ಪದಾಧಿಕಾರಿಗಳು ಹಾಗೂ ಬೆಂಗಳೂರಿನ ಯಲಹಂಕ ವಿಧಾನಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಜೆ ಪಿ ರಘುನಂದನ ಅವರಿಗೆ ಚುನಾವಣೆಯ ಪ್ರಚಾರದಲ್ಲಿ ವಾಹನ ಮತ್ತು ಧ್ವನಿವರ್ಧಕ ಬಳಸಲು ಅನುಮತಿಸುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿ, ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.

ಗದಗ ಮತ್ತು ವಿಜಯನಗರ ಜಿಲ್ಲಾ ಚುನಾವಣಾಧಿಕಾರಿ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಕೆಆರ್‌ಎಸ್‌ಪಿ ಮತ್ತು ಪಕ್ಷೇತರ ಅಭ್ಯರ್ಥಿಗೆ ವಾಹನ ಮತ್ತು ಧ್ವನಿವರ್ಧಕ ಬಳಸಲು ಅನುಮತಿ ನಿರಾಕರಿಸಿದ್ದರು. ಇದನ್ನು ಪ್ರಶ್ನಿಸಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸಿ ಎನ್ ದೀಪಕ್ ಮತ್ತು ಅಭ್ಯರ್ಥಿ ಜೆಪಿ ರಘುನಂದನ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

“ಚುನಾವಣಾ ಪ್ರಚಾರ ನಡೆಸಲು ಮಾನ್ಯತೆ ಹೊಂದಿದ ಪಕ್ಷಗಳಿಗೆ ನೀಡುವ ರೀತಿಯಲ್ಲಿಯೇ ಗದಗ ಮತ್ತು ಹೊಸಪೇಟೆಯ ಚುನಾವಣಾಧಿಕಾರಿಗಳು ಅರ್ಜಿದಾರ ಪಕ್ಷದ ಪದಾಧಿಕಾರಿಗಳಿಗೆ ವಾಹನ ಮತ್ತು ಧ್ವನಿವರ್ಧಕ ಬಳಕೆಗೆ ಅನುಮತಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಆಕ್ಷೇಪಣೆ ಸಲ್ಲಿಸಬೇಕು” ಎಂದು ನ್ಯಾಯಾಲಯವು ಮಧ್ಯಂತರ ಆದೇಶದಲ್ಲಿ ವಿವರಿಸಿದೆ.

“ಸನ್ನಿವೇಶ ಸೃಷ್ಟಿಯಾದರೆ ಪ್ರಕರಣದ ವಿಚಾರಣೆಗಾಗಿ ರಜಾಕಾಲೀನ ಪೀಠದ ಮುಂದೆ ಅರ್ಜಿದಾರರು ಮನವಿ ಸಲ್ಲಿಸಬಹುದು” ಎಂದು ನ್ಯಾಯಾಲಯದ ಆದೇಶದಲ್ಲಿ ಹೇಳಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಬಿ ಎನ್‌ ಹರೀಶ್‌ ಅವರು “ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 77 ಚುನಾವಣೆಯ ಬಳಿಕ ಚುನಾವಣಾ ವೆಚ್ಚ ಅಥವಾ ಆ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ ಅಭ್ಯರ್ಥಿಗೆ ಸಂಬಂಧಿಸಿದೆ. ಸೆಕ್ಷನ್‌ 52 ಚುನಾವಣೆಗೂ ಮುನ್ನ ಮಾನ್ಯತೆ ಹೊಂದಿದ ಪಕ್ಷದ ಅಭ್ಯರ್ಥಿಗೆ ಸಂಬಂಧಿಸಿದೆ. ಈ ಎರಡೂ ನಿಬಂಧನೆಗಳು ಅಥವಾ ಬೇರಾವುದೇ ನಿಬಂಧನೆಯು ರಾಜಕೀಯ ಪಕ್ಷ ಖಾಸಗಿ ವಾಹನ ಮತ್ತು ಧ್ವನಿವರ್ಧಕ ಬಳಕೆ ನಿರ್ಬಂಧಿಸುವುದಿಲ್ಲ” ಎಂದು ವಾದಿಸಿದ್ದರು.

ಇದನ್ನೂ ಓದಿ : Licence renewal : ರಿವಾಲ್ವರ್‌ ಲೈಸೆನ್ಸ್‌ ನವೀಕರಿಸದ ಪ್ರಕರಣ; ಸೋಮಶೇಖರ ರೆಡ್ಡಿಗೆ ಹೈಕೋರ್ಟ್‌ ಮಧ್ಯಂತರ ರಿಲೀಫ್‌

Exit mobile version