Site icon Vistara News

Karnataka Elections : ಮಂಡ್ಯ ಜೆಡಿಎಸ್‌ನಲ್ಲಿ ಬಂಡಾಯ; ರಾಜ್ಯ ಯುವ ಘಟಕದ ಉಪಾಧ್ಯಕ್ಷ ರಾಜೀನಾಮೆ

Ravindra srikantaiah

#image_title

ಮಂಡ್ಯ: ಈ ಬಾರಿಯ ಚುನಾವಣೆಯಲ್ಲಿ (Karnataka Elections) ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಹೇಗಾದರೂ ಮಾಡಿ ಅಧಿಕಾರ ಹಿಡಿಯಲೇಬೇಕು ಎಂದು ಸರ್ವ ಪ್ರಯತ್ನಗಳನ್ನು ನಡೆಸುತ್ತಿದ್ದರೆ ಜೆಡಿಎಸ್‌ ಗಟ್ಟಿನೆಲದಲ್ಲೇ ಪಕ್ಷಕ್ಕೆ ಆಘಾತ ಎದುರಾಗಿದೆ. ಜೆಡಿಎಸ್ ಪಕ್ಷಕ್ಕೆ ಮೂಲ ಕಾರ್ಯಕರ್ತರಿಂದಲೇ ಶಾಕ್ ಎದುರಾಗಿದೆ.

ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶಶಿಧರ್ ಅವರು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ ನಡೆಗೆ ಬೇಸತ್ತು ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಮತ್ತು ಜೆಡಿಎಸ್ ಪಕ್ಷದ ಸದಸ್ಯತ್ವಕ್ಕೂ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ಈಗಾಗಲೇ ಜೆಡಿಎಸ್‌ನ ಹಲವಾರು ಮೂಲ ಕಾರ್ಯಕರ್ತರು ಕಾಂಗ್ರೆಸ್‌ ಪಕ್ಷವನ್ನು ಸೇರಿದ್ದಾರೆ. ಕೆ.ಆರ್.ಪೇಟೆ, ನಾಗಮಂಗಲ ಕ್ಷೇತ್ರದಲ್ಲೂ ಮೂಲ ಕಾರ್ಯಕರ್ತರು ಪಕ್ಷ ಬಿಡುತ್ತಿದ್ದಾರೆ.

ಕ್ಷೇತ್ರದ ಜೆಡಿಎಸ್ ಶಾಸಕರ ನಿರ್ಲಕ್ಷ್ಯ ಮತ್ತು ಪಕ್ಷದ ವರಿಷ್ಠರ ಧೋರಣೆಗೆ ಮೂಲ ಕಾರ್ಯಕರ್ತರ ಅಸಮಧಾ‌ನ ಜೋರಾಗಿದೆ. ಹೀಗಾಗಿ ಅವರೆಲ್ಲ ಕಾಂಗ್ರೆಸ್‌ನತ್ತ ವಾಲುತ್ತಿದ್ದಾರೆ.

ಅಚ್ಚರಿ ಎಂದರೆ ಇಷ್ಟೆಲ್ಲ ಬೆಳವಣಿಗೆಗಳು ನಡೆಯುತ್ತಿದ್ದರೂ ಮೂಲ ಕಾರ್ಯಕರ್ತರ ಪಕ್ಷಾಂತರ ತಡೆಯಲು ಜೆಡಿಎಸ್ ಶಾಸಕರು ಮುಂದಾಗುತ್ತಿಲ್ಲ ಎನ್ನಲಾಗಿದೆ. ಹೀಗಾಗಿ ಕ್ಷೇತ್ರದ ನಾಯಕರ ನಿರ್ಲಕ್ಷ್ಯಕ್ಕೆ ಬುದ್ದಿ ಕಲಿಸಲು ಮೂಲ ಕಾರ್ಯಕರ್ತರು ಮುಂದಾಗಿದ್ದಾರೆ ಎಂಬ ಮಾತಿದೆ.

ಮೂಲ ಕಾರ್ಯಕರ್ತರು ಯಾವುದೋ ಆಮಿಷಕ್ಕೆ ಒಳಗಾಗಿ ಪಕ್ಷ ಬಿಡುತ್ತಿದ್ದಾರೆ. ಈ ರೀತಿ ಹೋಗುವವರಿಂದ ನಮಗೇನೂ ನಷ್ಟವಿಲ್ಲʼʼ ಎನ್ನುವುದು ಜೆಡಿಎಸ್‌ ನಾಯಕ ಅಭಿಮತ. ಇದು ಕಾರ್ಯಕರ್ತರನ್ನು ಇನ್ನಷ್ಟು ಕೆರಳಿಸಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಕ್ಷೇತ್ರದ ದಳಪತಿಗಳ ನಿರ್ಲಕ್ಷ್ಯದಿಂದಾಗಿ ಜೆಡಿಎಸ್‌ನ ಗಟ್ಟಿ ನೆಲದಲ್ಲೇ ಸಮಸ್ಯೆ ಎದುರಾಗಿದೆ.

ಇದನ್ನೂ ಓದಿ SC ST Reservation: ಮುಸ್ಲಿಮರು ಬೀದಿಗೆ ಇಳಿದಿದ್ದರೆ ಅಮಾಯಕರ ಬಲಿಯಾಗುತ್ತಿತ್ತು: ಬಿಜೆಪಿ ವಿರುದ್ಧ ಎಚ್‌.ಡಿ. ಕುಮಾರಸ್ವಾಮಿ ವಾಗ್ದಾಳಿ

Exit mobile version