Site icon Vistara News

Karnataka Elections : ಮಧುಗಿರಿಯಲ್ಲಿ ಜೆಡಿಎಸ್‌ ಅಭ್ಯರ್ಥಿ ಕಡೆಯಿಂದ ಧರ್ಮಸ್ಥಳ ಪ್ರವಾಸ ಭಾಗ್ಯ! ಹೋಗದಿದ್ದರೆ ಬಲವಂತ!

Dharmastala Election tour

#image_title

ಮಧುಗಿರಿ (ತುಮಕೂರು ಜಿಲ್ಲೆ): ಮಧುಗಿರಿ ತಾಲೂಕಿನಲ್ಲಿ ಚುನಾವಣಾ ಕಾವು (Karnataka Elections) ರಂಗೇರುತ್ತಿದ್ದು, ಮತದಾರರನ್ನು ಸೆಳೆಯಲು ವಿವಿಧ ತಂತ್ರಗಳನ್ನು ಬಳಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ. ಜೆಡಿಎಸ್ ವತಿಯಿಂದ ಮತದಾರರಿಗೆ ಮತ್ತು ಮುಖಂಡರಿಗೆ ಧರ್ಮಸ್ಥಳ ಸೇರಿದಂತೆ ಸುತ್ತಮುತ್ತಲ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಭಾಗ್ಯ ಏರ್ಪಡಿಸಿದ್ದು ಈಗ ಸುದ್ದಿಯಾಗಿದೆ!

ಕಸಬಾ ವ್ಯಾಪ್ತಿಯ ಜೆಡಿಎಸ್ ಗ್ರಾ.ಪಂ ಸದಸ್ಯರೊಬ್ಬರು ಪ್ರವಾಸ ಹೊರಟಿರುವ ತಂಡದ ಬಸ್ ನಲ್ಲಿ ಮಾತನಾಡಿರುವುದು ವೈರಲ್ ಆಗಿದ್ದು, ಜೊತೆಯಲ್ಲಿ ಪ್ರವಾಸ ಹೊರಟಿರುವವರೇ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ.

ʻʻಪ್ರವಾಸಕ್ಕೆ ಹೊರಟಿರುವುದು ಯಾರಲ್ಲಿಯೂ ಹೇಳಿಕೊಳ್ಳಬೇಡಿ ನಾವೇ ವಯಕ್ತಿಕವಾಗಿ ಪ್ರವಾಸಕ್ಕೆ ಹೋಗಿ ಬರುತ್ತಿದ್ದೇವೆ ಎಂದು ಹೇಳಿ. ಕಾಫಿ, ತಿಂಡಿ ಖರ್ಚಿಗೆ ಶಾಸಕರು 20 ಸಾವಿರ ನೀಡಿದ್ದು, ಹುಷಾರಾಗಿ ಹೋಗಿ ಬನ್ನಿ…! ಹೊರನಾಡು, ಧರ್ಮಸ್ಥಳ, ಕುಕ್ಕೆ ಸೌದಡ್ಕ ಗಣಪತಿ ಕ್ಷೇತ್ರಗಳನ್ನು ನೋಡಿಕೊಂಡು ವಾಪಸ್‌ ಬನ್ನಿʼʼ ಎಂದು ಮುಖಂಡರು ಹೇಳಿರುವುದು ವೈರಲ್ ಆಗಿದೆ.

ಈ ಹಿಂದೆ ಯುಗಾದಿ ಹಬ್ಬದ ಸಂದರ್ಭದಲ್ಲೂ ತಾಲೂಕಿನಾದ್ಯಂತ ಕೆಲ ಭಾಗಗಳಲ್ಲಿ ಮನೆ ಮನೆಗೆ ಪಕ್ಷದ ಕರಪತ್ರದೊಂದಿಗೆ 500 ರೂಗಳನ್ನು ಇಟ್ಟು ಹಂಚಿರುವುದೂ ಸಹ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿತ್ತು.

ಚುನಾವಣಾಧಿಕಾರಿಗಳಿಗೆ ದೂರು

ಮಧುಗಿರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸುತ್ತಿರುವ ಎಂ.ವಿ.ವೀರಭದ್ರಯ್ಯರವರ ಪರವಾಗಿ ಮತ ಹಾಕಲು ಎಂ.ವಿ.ವೀರಭದ್ರಯ್ಯ ಮತ್ತು ಅವರ ಬೆಂಬಲಿಗರು ಇಡೀ ತಾಲ್ಲೂಕಿನಲ್ಲಿ ಮತದಾರರಿಗೆ ತಮ್ಮ ಪರವಾಗಿ ಮತ ಹಾಕಲು ಒಂದು ದಿನ ಅಥವಾ ಎರಡು ದಿನ ಪ್ರವಾಸಗಳನ್ನು ಕೈಗೊಳ್ಳುತ್ತಿರುತ್ತಾರೆ ಮತ್ತು ಮತದಾರರು ಪ್ರವಾಸಕ್ಕೆ ಹೋಗದೆ ಇದ್ದರೆ ಅವರ ಮೇಲೆ ದೌರ್ಜನ್ಯ ಸಹ ಮಾಡುತ್ತಾರೆ ಮತ್ತು ಪ್ರತಿ ದಿನ ಗ್ರಾಮಗಳಿಗೆ ರಾತ್ರಿ ವೇಳೆ ಬಸ್ಸುಗಳನ್ನು ಕಳುಹಿಸಿ ಈ ದಿನ ರಾತ್ರಿಯಿಂದ ಮುಂದಿನ ರಾತ್ರಿ ವರೆಗೆ ಪ್ರವಾಸಕ್ಕೆ ಕಳುಹಿಸುತ್ತಾರೆ. ಕಾನೂನು ಬಾಹಿರವಾಗಿ ಈ ರೀತಿ ಪ್ರವಾಸ ಕೈಗೊಳ್ಳುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚುನಾವಣಾಧಿಕಾರಿಗಳಿಗೆ ದೊಡ್ಡೇರಿ ಹೋಬಳಿಯ ಮುಖಂಡರು ದೂರು ನೀಡಿದ್ದಾರೆ.

ದೊಡ್ಡೇರಿ ಗ್ರಾಮಸ್ಥರು ನೀಡಿರುವ ದೂರು

ಇದನ್ನೂ ಓದಿ :Karnataka Elections : ಬಾಗೇಪಲ್ಲಿಯಲ್ಲಿ ಜೆಡಿಎಸ್‌- ಬಿಜೆಪಿ ಗಿಫ್ಟ್‌ ವಾರ್‌, ಯುಗಾದಿ ನೆಪದಲ್ಲಿ ಉಡುಗೊರೆ ಸುರಿಮಳೆ!

Exit mobile version