Site icon Vistara News

Karnataka Elections 2023 : ಕೆ.ಎಸ್‌. ಈಶ್ವರಪ್ಪಗೆ ಕರೆ ಮಾಡಿ ಕುಶಲೋಪರಿ ವಿಚಾರಿಸಿದ ನರೇಂದ್ರ ಮೋದಿ, ಕುಟುಂಬ ಫುಲ್‌ ಖುಷ್‌

Modi calss KS Eshwarappa

#image_title

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮುಂಜಾನೆ ಮಾಜಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರಿಗೆ ಕರೆ ಮಾಡಿ (Narendra Modi calls KS Eshwarappa) ಕ್ಷೇಮ ಸಮಾಚಾರ ವಿಚಾರಿಸಿದ್ದಾರೆ. ಮುಂಜಾನೆಯೇ ಬಂದ ಕರೆ, ಮಾತನಾಡಿದ ರೀತಿಯಿಂದ ಈಶ್ವರಪ್ಪ ಅವರ ಕುಟುಂಬ ಫುಲ್‌ ಖುಷ್‌ ಆಗಿದೆ.

ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಯಾಗಿದ್ದ ಕೆ.ಎಸ್‌. ಈಶ್ವರಪ್ಪ ಅವರನ್ನು ಇತ್ತೀಚೆಗೆ ರಾಜಕೀಯ ನಿವೃತ್ತಿ ಪಡೆದುಕೊಂಡು ಯುವಕರಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಹೈಕಮಾಂಡ್‌ ಸೂಚನೆಯನ್ನು ಈಶ್ವರಪ್ಪ ಅವರು ಚಾಚೂ ತಪ್ಪದೆ ಪಾಲಿಸಿದ್ದರು. ಆ ಬಳಿಕ ಕ್ಷೇತ್ರದ (Karnataka Elections 2023 : ಕೆ.ಎಸ್‌. ಈಶ್ವರಪ್ಪಗೆ ಕರೆ ಮಾಡಿ ಕುಶಲೋಪರಿ ವಿಚಾರಿಸಿದ ನರೇಂದ್ರ ಮೋದಿ, ಕುಟುಂಬ ಫುಲ್‌ ಖುಷ್‌) ಟಿಕೆಟನ್ನು ಅವರ ಪುತ್ರ ಕೆ.ಇ. ಕಾಂತೇಶ್‌ ಅವರಿಗೆ ನೀಡಬಹುದೇ ಎಂಬ ಚರ್ಚೆ ಇತ್ತು. ಆದರೆ, ಅಂತಿಮವಾಗಿ ಪಕ್ಷದ ಸಾಮಾನ್ಯ ಕಾರ್ಯಕರ್ತರಾದ ಚನ್ನಬಸಪ್ಪ ಅವರಿಗೆ ಟಿಕೆಟ್‌ ಸಿಕ್ಕಿತ್ತು.

ತಮ್ಮ ಜತೆಗೇ ಬೆಳೆದ ಚನ್ನಬಸಪ್ಪ ಅವರಿಗೆ ಟಿಕೆಟ್‌ ನೀಡಿದ್ದನ್ನು ಈಶ್ವರಪ್ಪ ಖುಷಿಯಿಂದ ಸ್ವೀಕರಿಸಿದ್ದರು. ಕಾಂತೇಶ್‌ ಕೂಡಾ ಯಾವುದೇ ಅಡ್ಡ ಮಾತು ಮಾತನಾಡಿರಲಿಲ್ಲ. ಇಬ್ಬರೂ ನಾಯಕರು ನಾಮಪತ್ರ ಸಲ್ಲಿಕೆಯ ಮೆರವಣಿಗೆಯಲ್ಲೂ ಭಾಗವಹಿಸಿದ್ದರು. ಅದರ ಜತೆಗೆ ಈಶ್ವರಪ್ಪ ಅವರು ಹುಬ್ಬಳ್ಳಿಗೆ ತೆರಳಿ ಜಗದೀಶ್ ಶೆಟ್ಟರ್‌ ಅವರ ವಿರುದ್ಧ ಕಣಕ್ಕಿಳಿದಿರುವ ಬಿಜೆಪಿ ಅಭ್ಯರ್ಥಿ ಮಹೇಶ್‌ ಟೆಂಗಿನಕಾಯಿ ಅವರಿಗೆ ಬೆಂಬಲ ಸೂಚಿಸಿದ್ದರು.

ಅದಕ್ಕೂ ಮೊದಲು ಈಶ್ವರಪ್ಪ ಅವರು, ಟಿಕೆಟ್‌ ಸಿಗದ ಸಿಟ್ಟಿನಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರನ್ನು ಬಹಿರಂಗ ಪತ್ರದ ಮೂಲಕ ತರಾಟೆಗೆ ತೆಗೆದುಕೊಂಡಿದ್ದರು.

ಮುಂಜಾನೆಯೇ ಬಂತು ಕರೆ

ಈ ನಡುವೆ ಶುಕ್ರವಾರ ಮುಂಜಾನೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಈಶ್ವರಪ್ಪ ಅವರಿಗೆ ಕರೆ ಮಾಡಿ ಮಾತನಾಡಿದರು. ಅವರ ಆರೋಗ್ಯ ವಿಚಾರಿಸಿದರು. ಶಿವಮೊಗ್ಗದ ರಾಜಕೀಯ ಹೇಗಿದೆ ಎಂದು ಕೇಳಿದರು.

ಮೋದಿ ಅವರೊಂದಿಗೆ ಮಾತನಾಡುತ್ತಾ ಪಕ್ಷ, ಸಂಘಟನೆ ಸದಾ ನಿಮ್ಮೊಂದಿಗೆ ಇದೆಯೆಂದು ಈಶ್ವರಪ್ಪ ಹೇಳಿದರು.

ಇದು ತುಂಬಾ ಆತ್ಮೀಯವಾದ ಮಾತುಕತೆಯಂತೆ ಕಂಡಿತ್ತು. ಈಶ್ವರಪ್ಪ ಅವರು ಮೋದಿ ಅವರ ಜತೆ ಮಾತನಾಡುತ್ತಿದ್ದಾಗ ಅವರ ಪುತ್ರ ಕಾಂತೇಶ್‌, ಸೊಸೆ ಮತ್ತು ಮೊಮ್ಮಗನೂ ಬಂದು ಪ್ರಧಾನಿ ಅವರು ಮಾತನಾಡುವುದನ್ನು ಗಮನಿಸಿದರು.

ಏನು ಹೇಳಿದರು ಮೋದಿ?

ಮೋದಿ ಅವರು ಆರೋಗ್ಯ ವಿಚಾರಿಸಿದರು. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿದ್ದೀರಿ ಎಂದು ಅಭಿನಂದಿಸಿದರು. ಶಿವಮೊಗ್ಗ ಮತ್ತು ರಾಜ್ಯದಲ್ಲಿ ಪಕ್ಷ ಗೆದ್ದೇ ಗೆಲ್ಲುತ್ತದೆ ಎಂದು ನಾನು ಹೇಳಿದಾಗ ಗೆಲ್ಲಲೇಬೇಕು ಎಂದರು. ಕರ್ನಾಟಕಕ್ಕೆ ಬಂದಾಗ ಸಿಗುತ್ತೇನೆ ಎಂದು ಮಾತುಕತೆಯ ಬಳಿಕ ವಿಸ್ತಾರ ನ್ಯೂಸ್‌ ಜತೆ ಮಾತನಾಡುತ್ತಾ ಈಶ್ವರಪ್ಪ ಹೇಳಿದರು.

ಈ ವಿದ್ಯಮಾನದಿಂದ ಈಶ್ವರಪ್ಪ ಅವರಿಗೆ ಭಾರಿ ಖುಷಿಯಾಗಿರುವುದು ಕಂಡುಬಂತು. ಪ್ರಾಮಾಣಿಕವಾಗಿ ಪಕ್ಷಕ್ಕೆ ದುಡಿದಿರುವ ತಾನು ಇನ್ನೂ ದುಡಿಯುವುದಾಗಿ ಹೇಳಿದರು. ಮೋದಿ ಅವರ ಜತೆ ಮಾತನಾಡುತ್ತಲೇ ನಾನೊಬ್ಬ ಸಾಮಾನ್ಯ ಕಾರ್ಯಕರ್ತ ಎಂದೂ ಹೇಳಿಕೊಂಡರು ಈಶ್ವರಪ್ಪ.

ಈಶ್ವರಪ್ಪ ಅವರು ಪಕ್ಷ ನೀಡಿದ ಸೂಚನೆಯನ್ನು ಗೌರವಪೂರ್ವಕವಾಗಿ ಪಾಲಿಸಿದ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನಾಪೂರ್ವಕವಾಗಿ ಮೋದಿ ಈ ಕರೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ : Karnataka Election 2023: ಈಶ್ವರಪ್ಪ ಆಶೀರ್ವಾದ ಪಡೆದ ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ; ಗುರು ಜತೆ ತೆರಳಿ ನಾಮಪತ್ರ

Exit mobile version