Site icon Vistara News

Karnataka Elections : ಗೊಲ್ಲ ಸಮುದಾಯದ ನಾಯಕ ಷಣ್ಮುಖಪ್ಪ ತುಮಕೂರು ಗ್ರಾಮಾಂತರ ಕಾಂಗ್ರೆಸ್‌ ಅಭ್ಯರ್ಥಿ; ದೇವರ ಪೂಜೆಯೊಂದಿಗೆ ಪ್ರಚಾರ ಶುರು

Shanmukhappa

#image_title

ಹೊಳಲ್ಕೆರೆ, ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ತುಮಕೂರು ಗ್ರಾಮಾಂತರ ಕ್ಷೇತ್ರದ‌ (Tumkur Rural constituency) ಕಾಂಗ್ರೆಸ್‌ ಅಭ್ಯರ್ಥಿಯಾಗಿ ಟಿಕೆಟ್‌ ಪಡೆದಿರುವ ಷಣ್ಮುಖಪ್ಪ ಅವರು ಹೊಳಲ್ಕೆರೆಯ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಚಾರ ಕಣಕ್ಕೆ ಇಳಿದಿದ್ದಾರೆ.

ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಶ್ರಮಿಸಿರುವ ನಿವೃತ್ತ ಎಂಜಿನಿಯರ್‌ ಷಣ್ಮುಖಪ್ಪ ಅವರು ಗೊಲ್ಲ ಸಮುದಾಯದ ನಾಯಕರು. ಅವರ ಸೇವೆಯನ್ನು ಗುರುತಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ತುಮಕೂರು ಗ್ರಾಮಾಂತರ ಕ್ಷೇತ್ರಕ್ಕೆ ಟಿಕೆಟ್ ನೀಡಿದ್ದಾರೆ ಎಂದು ಅಭಿಮಾನಿಗಳು ಖುಷಿಯಲ್ಲಿದ್ದಾರೆ. ಅವರು ತಮ್ಮ ಅಭಿಮಾನಿಗಳೊಂದಿಗೆ ಹೊಳಲ್ಕೆರೆ ಪಟ್ಟಣಕ್ಕೆ ಆಗಮಿಸಿ ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ ಅವರು, ಗೊಲ್ಲ ಜನಾಂಗವನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ನೀಡಿದೆ, ರಾಜ್ಯದ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸುರ್ಜೆವಾಲಾ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅದ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಧನ್ಯವಾದ ತಿಳಿಸಿದರು..

ʻʻನನ್ನ ಸ್ವಂತ ತಾಲೂಕು ಹೊಳಲ್ಕೆರೆ. ಆದ್ದರಿಂದ ಪ್ರಸನ್ನ ಗಣಪತಿ, ಗೌಡಿಹಳ್ಳಿ ತಿಮ್ಮಪ್ಪ, ದುಮ್ಮಿಗೊಲ್ಲರಹಟ್ಟಿ, ಜುಂಜಪ್ಪ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದುಕೊಂಡಿದ್ದು, ವಿಘ್ನೇಶ್ವರ, ತಿಮ್ಮಪ್ಪ, ಜುಂಜಪ್ಪ ದೇವರ ದರ್ಶನದಿಂದ ನನಗೆ ಮತ್ತಷ್ಟು ಶಕ್ತಿ ಸಿಕ್ಕಿದೆʼʼ ಎಂದು ಹೇಳಿದರು ಷಣ್ಮುಖಪ್ಪ.

ʻʻನಾನು ಹಿಂದಿನ ದಿನಗಳಲ್ಲಿ ಪ್ರಚಾರಕ್ಕೆ ಹೋದಲ್ಲೆಲ್ಲ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಬೆಲೆ ಏರಿಕೆಯಿಂದಾಗಿ ನಮ್ಮ ಜೀವನ ಅಧೋಗತಿಗೆ ಹೋಗುತ್ತಿದೆ. ಈ ಸಲ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುತ್ತೇವೆ ಎಂದು ಎಲ್ಲ ಕಡೆ ಭರವಸೆ ಕೊಟ್ಟಿದ್ದಾರೆʼʼ ಎಂದು ಹೇಳಿದರು.

ಕ್ಷೇತ್ರದ ಕಾಂಗ್ರೆಸ್‌ ನಾಯಕರ ಜತೆ ಷಣ್ಮುಖಪ್ಪ

ʻʻನಮ್ಮ ಮಾವ ಸಿದ್ದರಾಮಪ್ಪ ಅವರು ಹೊಳಲ್ಕೆರೆ ಕ್ಷೇತ್ರದಲ್ಲಿ ಈ ಹಿಂದೆ ಶಾಸಕರಾಗಿ ಜನರ ಸೇವೆಗಾಗಿ ಹಗಲಿರುಳು ಎನ್ನದೇ ಶ್ರಮಿಸುತ್ತಿದ್ದರು. ಅವರನ್ನು ನೋಡಿ ನಾವು ಸಹ ಜನರ ಸೇವೆ ಮಾಡಬೇಕೆಂದು ಮುಂದೆ ಬಂದಿದ್ದೇನೆ. ನಾಳೆಯಿಂದ ಕಾರ್ಯಕರ್ತರೊಂದಿಗೆ ಸೇರಿ ಅಬ್ಬರದ ಪ್ರಚಾರ ನಡೆಸಲಿದ್ದೇನೆ ಹೀಗಾಗಿ ಇಲ್ಲಿನ ನಮ್ಮ ಯಾದವ ಸಮಾಜದ ಮುಖಂಡರುಗಳು ಹಾಗೂ ನನ್ನ ಅಭಿಮಾನಿಗಳೆಲ್ಲಾ ತುಮಕೂರಿಗೆ ಬಂದು ನನ್ನ ಗೆಲುವಿಗೆ ಶ್ರಮಿಸಬೇಕುʼʼ ಎಂದು ಮನವಿ ಮಾಡಿದರು..

ಈ ಸಂದರ್ಭದಲ್ಲಿ ಚಿರ್ತದುರ್ಗ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಹಾಲೇಶ್ , ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಆದ ಎ. ಚಿತ್ತಪ್ಪ ಯಾದವ್, ಮೋಹನ್ ರಾಜ್, ಆವಿನಹಟ್ಟಿಯ ನಾಗರಾಜಪ್ಪ, ಇನ್ನು ಅನೇಕ ಕಾರ್ಯಕರ್ತರು, ಅಭಿಮಾನಿಗಳು ಮುಖಂಡರುಗಳಿದ್ದರು.

ಇದನ್ನೂ ಓದಿ : Karnataka Election: ಇಂದು ಶೆಟ್ಟರ್‌ ಕಾಂಗ್ರೆಸ್‌ ಸೇರ್ಪಡೆ ಫಿಕ್ಸ್;‌ ಮಾತುಕತೆ ಅಂತಿಮ

Exit mobile version