Site icon Vistara News

ಕರ್ನಾಟಕ ಮಾತೆಯ ಹೊಸ ಅಧಿಕೃತ ಚಿತ್ರ ಇದು: ಎಲ್ಲ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ಬಳಕೆ ಕಡ್ಡಾಯ

Karnataka govt approved new painting of karnataka maathe

ಬೆಂಗಳೂರು: ಕರ್ನಾಟಕ ರಾಜ್ಯೋತ್ಸವ, ವಿವಿಧ ಕಾರ್ಯಕ್ರಮಗಳಲ್ಲಿ ವಿಭಿನ್ನ ರೀತಿಯಲ್ಲಿ ಕರ್ನಾಟಕ ಮಾತೆಯ (ನಾಡದೇವಿಯ) ಚಿತ್ರಗಳಿರುವುದನ್ನು ಗಮನಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಮಾತೆಯ ಹೊಸ ಚಿತ್ರವನ್ನು ಅಧಿಕೃತಗೊಳಿಸಲು ಒಪ್ಪಿದೆ.

ಕರ್ನಾಟಕದ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಚಿತ್ರವನ್ನು ಐವರು ಕಲಾವಿದರ ಸಮಿತಿಯ ಶಿಫಾರಸುಗಳನ್ನು ಒಪ್ಪಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ. ಸಿಎಂ ಬೊಮ್ಮಾಯಿ ಅವರ ಕಚೇರಿಯಿಂದ ಆದೇಶ ಸದ್ಯದಲ್ಲೇ ಹೊರಬೀಳಲಿದ್ದು, ಎಲ್ಲ ಸರ್ಕಾರಿ ಕಾರ್ಯಕ್ರಮಗಳಲ್ಲಿ, ಶಾಲಾ ಕಾಲೇಜುಗಳ ಗೋಡೆಯ ಮೇಲೆ ಈ ಚಿತ್ರವನ್ನೇ ಕಡ್ಡಾಯವಾಗಿ ಬಳಸಬೇಕಾಗುತ್ತದೆ.

ಲಲಿತ ಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಿ.ಮಹೇಂದ್ರ ನೇತೃತ್ವದ ಸಮಿತಿ ಶಿಫಾರಸು ನೀಡಿತ್ತು. ಸಮಿತಿಯಲ್ಲಿ ಡಾ. ಚೂಡಾಮಣಿ ನಂದಗೋಪಾಲ್, ಎಚ್.ಎಚ್.‌ಮ್ಯಾದರ್, ಬಾಬು ನಡೋಣಿ, ವಿ.ಎಸ್. ಕಡೇಮನಿ ಸದಸ್ಯರಾಗಿದ್ದರು.

ಬೆಂಗಳೂರು ವಿವಿ ಆವರಣದಲ್ಲಿ ಸ್ಥಾಪಿಸುವ ನಾಡದೇವಿ ಪ್ರತಿಮೆ ಇದೇ ರೀತಿ ಆಗಿರುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತಿಳಿಸಿದ್ದಾರೆ

ಅಧಿಕೃತ ಚಿತ್ರದಲ್ಲಿ ಕರ್ನಾಟಕದ ಸಾಂಪ್ರದಾಯಿಕ ಕಲೆಯನ್ನು ಬಿಂಬಿಸುವ ಹಾಗೂ ನಾಡಗೀತೆಯಲ್ಲಿರುವ ಕೆಲವು ಅಂಶಗಳನ್ನು ಸಾಂಕೇತಿಕವಾಗಿ ಬಳಸಲಾಗಿದೆ.

ಅಧಿಕೃತ ಭಾವಚಿತ್ರದಲ್ಲಿ ಈ ಕೆಳಗಿನ ಅಂಶಗಳನ್ನು ಅಳವಡಿಸಿಕೊಳ್ಳಲಾಗಿದೆ.

ಸದ್ಯ ಕರ್ನಾಟಕದಲ್ಲಿ ವಿಭಿನ್ನ ಚಿತ್ರಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅತಿ ಹೆಚ್ಚು ಪ್ರಮಾಣದಲ್ಲಿ ಖ್ಯಾತ ಕಲಾವಿದ ಬಿ.ಕೆ.ಎಸ್‌. ವರ್ಮ ಅವರ ಚಿತ್ರವನ್ನು ಬಳಸಲಾಗುತ್ತಿತ್ತು. ಇದೀಗ ಹೊಸ ಚಿತ್ರವನ್ನು ಸಮಿತಿಯು ಸೂಚಿಸಿದಂತೆ ಕೆ. ಸೋಮಶೇಖರ್‌ (ಚಿತ್ರ ಸೋಮು) ರಚಿಸಿದ್ದಾರೆ.

ಕರ್ನಾಟಕದ ವೈಭವವನ್ನು ಚಿತ್ರಿಸಲಾಗಿದೆ 

ಈ ಕುರಿತು ʼವಿಸ್ತಾರ ನ್ಯೂಸ್‌ʼಗೆ ಪ್ರತಿಕ್ರಿಯೆ ನೀಡಿರುವ, ಹಿಂದಿನ ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಹಾಗೂ ಪ್ರಸ್ತುತ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ನಿರ್ದೇಶಕ ಡಿ. ಮಹೇಂದ್ರ, ಕರ್ನಾಟಕದ ಕಲೆ, ಸಂಸ್ಕೃತಿ, ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವಂತೆ ಚಿತ್ರವನ್ನು ರಚಿಸಲು ಸಮಿತಿ ಸಲಹೆ ನೀಡಿತ್ತು. ಅದರಂತೆ ಕಲಾವಿದರು ರಚಿಸಿಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ | ವಿಸ್ತಾರ Exclusive | ಬಿ.ಕೆ. ಎಸ್‌. ವರ್ಮ ಅವರಿಗೆ ಕೊನೆಗೂ ಗೌರವ ನೀಡಿದ ಕನ್ನಡ ಸಾಹಿತ್ಯ ಪರಿಷತ್ತು

Exit mobile version