Site icon Vistara News

Barisu Kannada Dindimava: ಕನ್ನಡ ನಾಡಿನಲ್ಲಿ ಹುಟ್ಟುವುದೇ ಪುಣ್ಯ, ‘ಬಾರಿಸು ಕನ್ನಡ ಡಿಂಡಿಮ’ದಲ್ಲಿ ಬೊಮ್ಮಾಯಿ ಹೇಳಿಕೆ

border-dispute-CM Basavaraja bommai condemns maharashtra govt decision

Basavaraj Bommai

ನವದೆಹಲಿ: “ಕನ್ನಡ ನಾಡಿನಲ್ಲಿ ಹುಟ್ಟುವುದೇ ಪುಣ್ಯ. ಅಂತಹ ನಾಡಿನಲ್ಲಿ ನಾವೆಲ್ಲರೂ ಜನಿಸಿರುವುದೇ ಸಂತಸದ ಸಂಗತಿ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ದೆಹಲಿಯ ಕರ್ನಾಟಕ ಸಂಘದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೆಹಲಿಯ ತಾಲಕಟೋರಾ ಸ್ಟೇಡಿಯಂನಲ್ಲಿ ಆಯೋಜಿಸಿರುವ ‘ಬಾರಿಸುವ ಕನ್ನಡ ಡಿಂಡಿಮವ ಸಾಂಸ್ಕೃತಿಕ ಸಂಭ್ರಮ’ಕ್ಕೆ (Barisu Kannada Dindimava) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಬಳಿಕ ಬೊಮ್ಮಾಯಿ ಮಾತನಾಡಿದರು.

“ಅಧ್ಯಾತ್ಮ, ಸಂಸ್ಕೃತಿ, ಕನ್ನಡ ನಾಡಿನ ವಿದ್ವಾಂಸರು, ನವ ಕರ್ನಾಟಕ ನಿರ್ಮಾಣಕ್ಕೆ ನಾಂದಿ ಹಾಡಿದ ಮೈಸೂರು ಮಹಾರಾಜರು, ಸರ್‌ ಎಂ.ವಿಶ್ವೇರಯ್ಯನವರಿಗೆ ನನ್ನ ನಮನಗಳು ಸಲ್ಲುತ್ತವೆ. ದೆಹಲಿ ಕರ್ನಾಟಕ ಸಂಘದ ಸ್ಥಾಪನೆಗೆ ಮಹತ್ವದ ಪಾತ್ರ ನಿರ್ವಹಿಸಿದ ಕೆ.ಸಿ. ರೆಡ್ಡಿಯವರನ್ನು ಸ್ಮರಿಸೋಣ” ಎಂದು ಹೇಳಿದರು.

“ದೆಹಲಿಯ ಕನ್ನಡಿಗರು ಸೇರಿ ವಿಶ್ವದ ಯಾವುದೇ ಮೂಲೆಯಲ್ಲಿರುವ ಸಮಸ್ತ ಕನ್ನಡಿಗರಿಗೆ ನನ್ನ ನಮನಗಳು. ಇತ್ತೀಚೆಗಷ್ಟೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಹಾಗೆಯೇ, ದಾವಣಗೆರೆಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಮೋದಿ ಅವರನ್ನು ಸ್ವಾಗತಿಸುತ್ತೇನೆ” ಎಂದರು.

“ಕನ್ನಡದ ಸಮಗ್ರತೆ, ಅಖಂಡತೆ ಬಗ್ಗೆ ನಿನ್ನೆಯೇ ಒಂದು ಕಾನೂನು ಪಾಸ್ ಮಾಡಿದ್ದೇವೆ. ಅದೊಂದು ಬಹಳ ಒಳ್ಳೆಯ ಘಳಿಗೆ. ‌ಕೆ.ಸಿ ರೆಡ್ಡಿಯವರ ಪ್ರತಿಮೆ ಅನಾವರಣ ಕೂಡ ಮಾಡಿದ್ದೇವೆ. ಕನ್ನಡದ ಈ ಸಂಘದ ಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರವಹಿಸಿದ ಮೊದಲ‌ನೇ ಮುಖ್ಯಮಂತ್ರಿ ಎಂದು ಕೆ.ಸಿ ರೆಡ್ಡಿ ಎಂದು ಸ್ಮರಿಸಿದರು.

ಪರಮಪೂಜ್ಯರ ಆಶೀರ್ವಾದದೊಂದಿಗೆ ಕರ್ನಾಟಕವನ್ನು ಮುನ್ನಡೆಸುವ ಸಂಕಲ್ಪದಿಂದ ಮುನ್ನೆಡೆಯುತ್ತಿದ್ದೇನೆ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಸಂಕಲ್ಪ ಯಶಸ್ವಿಯಾಗುತ್ತದೆ ಎಂದು ಹೇಳಿ, ಸಿಎಂ ಬೊಮ್ಮಾಯಿ‌ ಅವರು ದಿಲ್ಲಿ ಕನ್ನಡದ ಸಂಘಕ್ಕೆ ಅಭಿನಂದನೆ ಸಲ್ಲಿಸಿದರು.

ಸಂಘದ ಕುರಿತು ನಿರ್ಮಲಾನಂದನಾಥ ಸ್ವಾಮೀಜಿ ಮೆಚ್ಚುಗೆ

“ಕರ್ನಾಟಕ ಸಂಘವು ಎಲ್ಲ ಪ್ರಾಕಾರಗಳ ಕಲೆಗಳಿಗೆ ವೇದಿಕೆಯಾಗಿದೆ. ಕರ್ನಾಟಕ ಸಂಘದ ಅಮೃತ ಮಹೋತ್ಸವದ ಕಾರ್ಯಕ್ರಮಕ್ಕೆ ಮೋದಿ ಅವರು ಆಗಮಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿರುವುದು ಸಂತಸದ ಸಂಗತಿಯಾಗಿದೆ” ಎಂದು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

“ಮೋದಿ ಅವರು ಮೌಲ್ಯಗಳ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗೆಯೇ, ಅವರು ಐದು ಲಕ್ಷ ಕೋಟಿ ಡಾಲರ್‌ ಆರ್ಥಿಕತೆ ಅವರ ಕನಸಾಗಿದೆ. ಇದಕ್ಕೆ ಕರ್ನಾಟಕದ ಕೊಡುಗೆಯೂ ಒಂದು ಲಕ್ಷ ಕೋಟಿ ಡಾಲರ್‌ ಇರಲಿದೆ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದ್ದಾರೆ. ಇದಕ್ಕೆ ಎಲ್ಲ ಕನ್ನಡಿಗರ ಕೊಡುಗೆ ಇರಲಿ” ಎಂದು ತಿಳಿಸಿದರು.

ಕರ್ನಾಟಕ ಭಾರತ ಮಾತೆಯ ಮಗಳು: ಶ್ರೀ ಶಿವಾಚಾರ್ಯ ಸ್ವಾಮೀಜಿ

“ಕರ್ನಾಟಕವು ಭಾರತ ಮಾತೆಯ ಮಗಳು. ಹೀಗೆಂದು ಕರ್ನಾಟಕದ ಗೀತೆಯಲ್ಲಿಯೇ ಉಲ್ಲೇಖಿಸಲಾಗಿದೆ. ದೇಶದ ಅಭಿವೃದ್ಧಿಗೆ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಭಾರತ ಮಾತೆಯ ಶಕ್ತಿ ಹೆಚ್ಚಿದೆ. ಯಾರಿಗೂ ನಾವು ಹೆದರಿಲ್ಲ, ಹೆದರುವುದಿಲ್ಲ. ಇದು ಭಾರತದ ಅಂತಃಸತ್ವ” ಎಂದು ಶ್ರೀ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರೀ ಶಿವಾಚಾರ್ಯ ಸ್ವಾಮೀಜಿ.

“ಕೆಲ ವರ್ಷಗಳ ಹಿಂದೆ ಅಮೆರಿಕವನ್ನು ಜಗತ್ತಿನ ದೊಡ್ಡಣ್ಣ ಎನ್ನುತ್ತಿದ್ದರು. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತವನ್ನು ದೊಡ್ಡಣ್ಣನಂತೆ ಜಗತ್ತು ನೋಡುತ್ತಿದೆ. ನರೇಂದ್ರ ಮೋದಿ ಅವರನ್ನೂ ಇದೇ ರೀತಿ ಕಾಣಲಾಗುತ್ತಿದೆ” ಎಂದರು.

ಇದನ್ನೂ ಓದಿ: Barisu Kannada Dindimava: ದೆಹಲಿಯಲ್ಲಿ ನಗಾರಿ ಬಾರಿಸಿ ‘ಬಾರಿಸು ಕನ್ನಡ ಡಿಂಡಿಮವ’ ಕಾರ್ಯಕ್ರಮಕ್ಕೆ ಮೋದಿ ಚಾಲನೆ

Exit mobile version