Site icon Vistara News

ಶಾಸಕ ಪ್ರಿಯಾಂಕ ಖರ್ಗೆಯವರನ್ನು ಶ್ರೀಮತಿ ಪ್ರಿಯಾಂಕ ಖರ್ಗೆ ಎಂದ ವಿಧಾನಸಭೆ ಸಚಿವಾಲಯ!

priyank kharge

#image_title

ಬೆಂಗಳೂರು: ಚಿತ್ತಾಪುರದ ಶಾಸಕ ಪ್ರಿಯಾಂಕ ಎಂ. ಖರ್ಗೆಯವರನ್ನು ವಿಧಾನಸಭಾ ಸಚಿವಾಲಯವು ʻʻಶ್ರೀಮತಿʼʼ ಪ್ರಿಯಾಂಕ ಎಂ.ಖರ್ಗೆ ಎಂದು ಕರೆದು ನಗೆಪಾಟಲಿಗೆ ಈಡಾಗಿದೆ.

ಶಾಸಕ ಪ್ರಿಯಾಂಕ ಖರ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ ಸಿ ನಾಗೇಶ್‌ ಅವರಿಗೆ ʻಚುಕ್ಕೆ ಗುರುತಿಲ್ಲದ ಪ್ರಶ್ನೆʼ ಕೇಳಿದ್ದರು. ಲಿಖಿತ ಪ್ರಶ್ನೆಗೆ ಶಿಕ್ಷಣ ಇಲಾಖೆಯು ಲಿಖಿತ ಉತ್ತರ ನೀಡಿದ್ದು, ಇದನ್ನು ಸಚಿವಾಲಯವು ವಿಧಾನಸಭೆಯಲ್ಲಿ ಒದಗಿಸಿದೆ. ಇದರಲ್ಲಿ ಪ್ರಿಯಾಂಕ ಎಂ. ಖರ್ಗೆ ಅವರನ್ನು ʻಶ್ರೀಮತಿ ಪ್ರಿಯಾಂಕ ಎಂ. ಖರ್ಗೆʼ ಎಂದು ಕರೆದಿರುವುದು ಆಶ್ಚರ್ಯ ಮೂಡಿಸಿದೆ.

ಪ್ರಿಯಾಂಕ ಎಂ. ಖರ್ಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಸಾಮಾಜಿಕ ಜಾಲತಾಣ ಹಾಗೂ ಸಂವಹನ ವಿಭಾಗದ ಅಧ್ಯಕ್ಷರಾಗಿದ್ದಾರೆ. ಇವರು ರಾಜ್ಯದ ಹಿರಿಯ ರಾಜಕಾರಣಿ, ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರರಾಗಿದ್ದಾರೆ. 2013ರಿಂದ ವಿಧಾನಸಭೆಯ ಸದಸ್ಯರಾಗಿರುವ ಪ್ರಿಯಾಂಕ ಖರ್ಗೆ ಎರಡು ಬಾರಿ ಸಚಿವರೂ ಆಗಿದ್ದಾರೆ. ರಾಜ್ಯದಲ್ಲಿ ಜನಪ್ರಿಯರಾಗಿರುವ ಪ್ರಿಯಾಂಕ ಖರ್ಗೆ ಅವರನ್ನು ʻಶ್ರೀʼ ಗೆ ಬದಲಾಗಿ ʻಶ್ರೀಮತಿʼ ಎಂದು ಉಲ್ಲೇಖಿಸಿರುವುದು ಚರ್ಚೆಗೆ ಕಾರಣವಾಗಿದೆ.

ಇದನ್ನೂ ಓದಿ : Karnataka Election: ಸಿದ್ದರಾಮಯ್ಯರನ್ನು ಹೊಡೆದು ಹಾಕಿ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಅಶ್ವತ್ಥನಾರಾಯಣ

Exit mobile version