Site icon Vistara News

Karnataka Live News : ಪಿಎಸ್‌ಐ ಪರೀಕ್ಷೆ ಮುಂದೂಡಿಕೆ; ಜ. 23ಕ್ಕೆ ಎಕ್ಸಾಂ ಎಂದ ಗೃಹ ಸಚಿವ ಪರಮೇಶ್ವರ್‌

karnataka live news kannada today december 4
Prabhakar R

ಗೋದಾಮಿನಲ್ಲಿ ಯಂತ್ರ ಕುಸಿತ; ಜೋಳದ ಮೂಟೆಗಳಡಿ ಸಿಲುಕಿದ 10 ಕಾರ್ಮಿಕರು

ಮೆಕ್ಕೆ ಜೋಳದ ಮೂಟೆ ತುಂಬುವ ಯಂತ್ರ ಕುಸಿದು ಮೂಟೆಗಳಡಿ 10ಕ್ಕೂ ಹೆಚ್ಚು ಕಾರ್ಮಿಕರು ಸಿಲುಕಿರುವ ಘಟನೆ ವಿಜಯಪುರ ಕೈಗಾರಿಕಾ ಪ್ರದೇಶದ (Vijayapura News) ರಾಜಗುರು ಇಂಡಸ್ಟ್ರೀಸ್‌ ಗೋದಾಮಿನಲ್ಲಿ ನಡೆದಿದೆ. ಫುಡ್ ಪ್ರೊಸೆಸಿಂಗ್ ಯುನಿಟ್‌ನಲ್ಲಿ ಸಿಲುಕಿದ ಕಾರ್ಮಿಕರನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ.

https://vistaranews.com/karnataka/10-labourers-trapped-under-sacks-of-corn-in-godown/524291.html

Prabhakar R

ಪೊಲೀಸರು ಹಾಕಿದ್ದ ಕೇಸ್‌ಗೆ ಹೈಕೋರ್ಟ್ ತಡೆಯಾಜ್ಞೆ; ಕಾಫಿನಾಡಿನಲ್ಲಿ ವಕೀಲರ ಸಂಭ್ರಮ

ವಕೀಲನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವಕೀಲರ ಮೇಲೆ ಪೊಲೀಸರು ಹಾಕಿದ್ದ ಕೇಸ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಕಾಫಿನಾಡಿನಲ್ಲಿ (chikkamagaluru) ವಕೀಲರು ಸಂಭ್ರಮಾಚರಣೆ ನಡೆಸಿದ್ದಾರೆ. ವಕೀಲನ ಮೇಲೆ ಹಲ್ಲೆ ನಡೆಸಿದ ಪೊಲೀಸರ ಬಂಧನಕ್ಕೆ ಆಗ್ರಹಿಸಿ ವಕೀಲರು ಬೃಹತ್‌ ಪ್ರತಿಭಟನೆ ನಡೆಸಿದ್ದರು. ನಂತರ ಪೊಲೀಸರು ಕೂಡ ಪ್ರತಿಭಟನೆ ನಡೆಸಿ, ಐವರು ವಕೀಲರ ಮೇಲೆ ಪ್ರಕರಣ ದಾಖಲಿಸಿದ್ದರು. ಇದೀಗ ಈ ಪ್ರಕರಣಕ್ಕೆ ತಡೆಯಾಜ್ಞೆ ನೀಡಿರುವುದರಿಂದ ಚಿಕ್ಕಮಗಳೂರು ಕೋರ್ಟ್ ಮುಂದೆ ವಕೀಲರು ಸಂಭ್ರಮಿಸಿದ್ದಾರೆ.

ಪೊಲೀಸರು ಹಾಕಿದ್ದ ಕೇಸ್‌ಗೆ ಹೈಕೋರ್ಟ್ ತಡೆಯಾಜ್ಞೆ; ಕಾಫಿನಾಡಿನಲ್ಲಿ ವಕೀಲರ ಸಂಭ್ರಮ
Prabhakar R

8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವು; ಒಂಟಿ ಸಲಗ ದಾಳಿಯಿಂದ ದುರ್ಘಟನೆ

ಮೈಸೂರು ದಸರಾದಲ್ಲಿ ಎಂಟು ಬಾರಿ ಅಂಬಾರಿ ಹೊತ್ತಿದ್ದ ಸಾಕಾನೆ ಅರ್ಜುನ (Dasara Elephant Arjuna) ಮೃತಪಟ್ಟಿದೆ. ಸಕಲೇಶಪುರ ತಾಲೂಕಿನ‌ ಯಸಳೂರು ವಲಯದ ಬಾಳೆಕೆರೆ ಅರಣ್ಯದಲ್ಲಿ ಕಾಡಾನೆಗಳ ಸೆರೆ ಕಾರ್ಯಾಚರಣೆ ವೇಳೆ ಒಂಟಿ ಸಲಗ ದಾಳಿ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡು ಅರ್ಜುನ (Dasara Elephant Arjuna) ಕೊನೆಯುಸಿರೆಳೆದಿದೆ.

Dasara Elephant Arjuna: 8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಸಾವು; ಒಂಟಿ ಸಲಗ ದಾಳಿಯಿಂದ ದುರ್ಘಟನೆ
Adarsha Anche

PSI Exam : ಪಿಎಸ್‌ಐ ಪರೀಕ್ಷೆ ಮುಂದೂಡಿಕೆ; ಜ. 23ಕ್ಕೆ ಎಕ್ಸಾಂ ಎಂದ ಗೃಹ ಸಚಿವ ಪರಮೇಶ್ವರ್‌

ಒಂದು ತಿಂಗಳು ಪರೀಕ್ಷೆ ದಿನಾಂಕವನ್ನು ಮುಂದೂಡಿಕೆ ಮಾಡಲಾಗುವುದು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಘೋಷಿಸಿದ್ದಾರೆ. ಇದರನ್ವಯ ಜನವರಿ 23ಕ್ಕೆ ಮುಂದೂಡಿಕೆಯಾದಂತೆ ಆಗಿದೆ.

PSI Exam: ಪಿಎಸ್‌ಐ ಪರೀಕ್ಷೆ ಮುಂದೂಡಿಕೆ, ಜ. 23ಕ್ಕೆ ಫಿಕ್ಸ್‌: ಗೃಹ ಸಚಿವರ ಘೋಷಣೆ
Adarsha Anche

Belagavi Winter Session: ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಇನ್ಮುಂದೆ ವರ್ಷಪೂರ್ತಿ ಲೈಟಿಂಗ್ಸ್

ಸದ್ಯ ವಿಧಾನ ಮಂಡಲದ ಅಧಿವೇಶನದ ಸಂದರ್ಭದಲ್ಲಿ ಮಾತ್ರ ಸುವರ್ಣ ವಿಧಾನಸೌಧವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗುತ್ತಿದೆ. ಆದರೆ, ಅದೇ ವೆಚ್ಚದಲ್ಲಿ ಇನ್ನು ಮುಂದೆ ವರ್ಷ ಪೂರ್ತಿ ವಿದ್ಯುತ್ ದೀಪಗಳಿಂದ ಅಲಂಕರಿಸಲು ನಿರ್ಧಾರ ಮಾಡಲಾಗಿದೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ.

https://vistaranews.com/karnataka/belagavi/belagavi-winter-session-suvarna-vidhana-soudha-in-belagavi-to-get-year-round-lighting/523958.html

Exit mobile version