Site icon Vistara News

Karnataka Live News : ʼಹಲೋ ಅಪ್ಪಾʼ ಆ್ಯಪ್ ಡೌನ್‌ಲೋಡ್ ಮಾಡಿ ಪೇಮೆಂಟ್ ಮಾಡಿ!

karnataka live news kannada today news live vistara news november 18 and CM Siddaramaiah BS Yediyurappa and DCM DK Shivakumar
Prabhakar R

ಜಿಲ್ಲಾ ಕ್ರೀಡಾಂಗಣಗಳಲ್ಲಿ ಫೈನಲ್‌ ಮ್ಯಾಚ್‌ ವೀಕ್ಷಿಸಲು ಬಿಗ್‌ ಸ್ಕ್ರೀನ್

ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ (ICC World Cup 2023) ಆಸ್ಟ್ರೇಲಿಯಾ ಮತ್ತು ಭಾರತ ತಂಡದ ನಡುವಿನ ಸೆಣಸಾಟ ನೋಡಲು ಅಭಿಮಾನಿಗಳು ಕಾತುರದಿಂದ ಇದ್ದಾರೆ. ಈ ನಡುವೆ ಕ್ರಿಕೆಟ್‌ ಪ್ರಿಯರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಸರ್ಕಾರದ ವತಿಯಿಂದ ಭಾನುವಾರದ ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸಲು ರಾಜ್ಯದ ಎಲ್ಲಾ ಜಿಲ್ಲಾ ಕ್ರೀಡಾಂಗಣಗಳಲ್ಲಿ ದೊಡ್ಡ ಪರದೆ ವ್ಯವಸ್ಥೆ ಮಾಡಲಾಗಿದೆ.

ICC World Cup 2023: ಜಿಲ್ಲಾ ಕ್ರೀಡಾಂಗಣಗಳಲ್ಲಿ ಫೈನಲ್‌ ಮ್ಯಾಚ್‌ ವೀಕ್ಷಿಸಲು ಬಿಗ್‌ ಸ್ಕ್ರೀನ್

Prabhakar R

ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳಿಂದ ಪೂಜೆ; ಶುಭ ಕೋರಿದ ಸಿಎಂ

ಅಹಮದಾಬಾದ್‌ನಲ್ಲಿ ಭಾನುವಾರ ನಡೆಯಲಿರುವ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ (ICC World Cup 2023) ಆಸ್ಟ್ರೇಲಿಯಾ ತಂಡದ ವಿರುದ್ಧ ಟೀಂ ಇಂಡಿಯಾ ಜಯಭೇರಿ ಬಾರಿಸಲಿ ಎಂದು ಪ್ರಾರ್ಥಿಸಿ ದೇವಾಲಯಗಳಲ್ಲಿ ಅಭಿಮಾನಿಗಳು ವಿಶೇಷ ಪೂಜೆ, ಹೋಮಗಳನ್ನು ನೆರವೇರಿಸುತ್ತಿದ್ದಾರೆ. ಅದೇ ರೀತಿ ರೋಹಿತ್‌ ಶರ್ಮಾ ಬಳಗ ಚಾಂಪಿಯನ್‌ ಆಗಲಿ ಎಂದು ಕ್ರೀಡಾಪಟುಗಳು, ರಾಜಕೀಯ ನಾಯಕರು ಸೇರಿ ಗಣ್ಯರು ಶುಭ ಕೋರುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರು ಕೂಡ ಶುಭ ಹಾರೈಸಿದ್ದಾರೆ.

ICC World Cup 2023: ಟೀಂ ಇಂಡಿಯಾ ಗೆಲುವಿಗಾಗಿ ಅಭಿಮಾನಿಗಳಿಂದ ಪೂಜೆ; ಶುಭ ಕೋರಿದ ಸಿಎಂ
Prabhakar R

ಕಾಂಗ್ರೆಸ್ ಸರ್ಕಾರ ಬಡವರು, ರೈತ ವಿರೋಧಿಯಾಗಿದೆ ಎಂದ ವಿಜಯೇಂದ್ರ

ಕರ್ನಾಟಕದ ಕಾಂಗ್ರೆಸ್ ಸರ್ಕಾರವು ಬಡ ಜನರ, ರೈತರ ವಿರೋಧಿಯಾಗಿದೆ. ಈ ಸರ್ಕಾರಕ್ಕೆ ಬಡವರು, ರೈತರು ಹಿಡಿಶಾಪ ಹಾಕುತ್ತಿದ್ದಾರೆ. ಬರಗಾಲದ ಕುರಿತು ನಿರ್ಲಕ್ಷ್ಯ ವಹಿಸಿದ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸುವ ಕಾರ್ಯವನ್ನು ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಟೀಕಿಸಿದರು.

BY Vijayendra: ಕಾಂಗ್ರೆಸ್ ಸರ್ಕಾರ ಬಡವರು, ರೈತ ವಿರೋಧಿಯಾಗಿದೆ ಎಂದ ವಿಜಯೇಂದ್ರ
Prabhakar R

ಸ್ವಂತ ಊರಲ್ಲೇ 8.5 ತಿಂಗಳ ಗರ್ಭಿಣಿಗೆ ಜಡ್ಜ್‌ ಪರೀಕ್ಷೆ ಬರೆಯಲು ಅವಕಾಶ

ಗರ್ಭಿಣಿಯೊಬ್ಬರಿಗೆ ತಾವಿರುವ ಊರಲ್ಲೇ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆ‌ (Civil Judge Exam) ಬರೆಯಲು ಹೈಕೋರ್ಟ್‌ ಅವಕಾಶ ಮಾಡಿಕೊಟ್ಟಿದೆ. ಇದೇ ಮೊದಲ ಬಾರಿ ಅಭ್ಯರ್ಥಿಯೊಬ್ಬರಿಗೆ ಹೈಕೋರ್ಟ್‌ ಈ ರೀತಿಯ ವ್ಯವಸ್ಥೆ ಮಾಡಿರುವುದು ವಿಶೇಷವಾಗಿದೆ.

Civil Judge Exam: ಸ್ವಂತ ಊರಲ್ಲೇ 8.5 ತಿಂಗಳ ಗರ್ಭಿಣಿಗೆ ಜಡ್ಜ್‌ ಪರೀಕ್ಷೆ ಬರೆಯಲು ಅವಕಾಶ
Prabhakar R

ನ. 24ರಿಂದ 26ರವರೆಗೆ ಎಸ್ಕಾಂಗಳ ಆನ್‌ಲೈನ್ ಸೇವೆಗಳು ಅಲಭ್ಯ

ತುರ್ತು ನಿರ್ವಹಣಾ ಕಾರ್ಯ ನಿಮಿತ್ತ ರಾಜ್ಯದ ಎಲ್ಲಾ ಎಸ್ಕಾಂಗಳ ಆನ್‌ಲೈನ್ ಸೇವೆಗಳಾದ ವಿದ್ಯುತ್ ಬಿಲ್‌ ಪಾವತಿ, ಹೊಸ ಸಂಪರ್ಕ, ಹೆಸರು ಮತ್ತು ಜಕಾತಿ ಬದಲಾವಣೆ ಇನ್ನಿತರ ಆನ್‌ಲೈನ್‌ ಸೇವೆಗಳು, ನವೆಂಬರ್ 24ರಂದು ಬೆಳಗ್ಗೆ 12.01 ಗಂಟೆಯಿಂದ ನ. 26ರಂದು ರಾತ್ರಿ 11.59ರವರೆಗೆ RAPDRP ನಗರ ಪ್ರದೇಶದ ಗ್ರಾಹಕರಿಗೆ ಲಭ್ಯವಿರುವುದಿಲ್ಲ ಎಂದು ಬೆಸ್ಕಾಂ ಐಸಿಟಿ ಮತ್ತು ಎಂಐಎಸ್‌ ಪ್ರಧಾನ ವ್ಯವಸ್ಥಾಪಕರು ತಿಳಿಸಿದ್ದಾರೆ.

Escom Online Services: ನ. 24ರಿಂದ 26ರವರೆಗೆ ಎಸ್ಕಾಂಗಳ ಆನ್‌ಲೈನ್ ಸೇವೆಗಳು ಅಲಭ್ಯ
Exit mobile version