Site icon Vistara News

Karnataka Live News : ಹುಬ್ಬಳ್ಳಿ ಗಲಭೆ ಪ್ರಕರಣ: ಬಂಧಿತ ಕರಸೇವಕ ಶ್ರೀಕಾಂತ್‌ ಪೂಜಾರಿಗೆ ಜಾಮೀನು, ಬಿಡುಗಡೆ

karnataka live news karnataka today news live vistara news 05 Jan

ಹುಬ್ಬಳ್ಳಿ: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ 1992ರ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ 31 ವರ್ಷಗಳ ಬಳಿಕ ಬಂಧಿತರಾದ ಶ್ರೀಕಾಂತ್‌ ಪೂಜಾರಿ ಅವರಿಗೆ ಹುಬ್ಬಳ್ಳಿ ಕೋರ್ಟ್‌ ಜಾಮೀನು ನೀಡಿದೆ. ಈ ಮೂಲಕ ಅವರ ಷರತ್ತುಬದ್ಧ ಬಿಡುಗಡೆಗೆ ಅವಕಾಶ ನೀಡಲಾಗಿದೆ.

Deepa S

ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್‌ ಬೆದರಿಕೆ; ಪೊಲೀಸರ ದೌಡು, ಹೈ ಅಲರ್ಟ್‌

ನಗರದ ಶಾಲೆಗಳಿಗೆ ಬರುತ್ತಿದ್ದ ಬಾಂಬ್‌ ಬೆದರಿಕೆ ಇ-ಮೇಲ್‌ (Fake E-mail) ಇದೀಗ ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೂ (Visvesvaraya Museum) ಬಂದಿದೆ. ಮ್ಯೂಸಿಯಂನಲ್ಲಿ ಬಾಂಬ್ (Bomb Threat) ಇಡಲಾಗಿದೆ. ಈಗಾಗಲೇ ಹಲವು ಸ್ಫೋಟಕಗಳನ್ನು ಮ್ಯೂಸಿಯಂ ಸುತ್ತಮುತ್ತ ಬಚ್ಚಿಡಲಾಗಿದೆ. ಬೆಳಗ್ಗೆ ಎಲ್ಲವನ್ನೂ ಒಮ್ಮೆಲೆ ಸ್ಫೋಟಿಸಲಾಗುತ್ತದೆ ಎಂಬ ಬೆದರಿಕೆ ಸಂದೇಶ ರವಾನೆ ಆಗಿದೆ.

Bomb Threat: ಬೆಂಗಳೂರಿನ ವಿಶ್ವೇಶ್ವರಯ್ಯ ಮ್ಯೂಸಿಯಂಗೆ ಬಾಂಬ್‌ ಬೆದರಿಕೆ; ಪೊಲೀಸರ ದೌಡು, ಹೈ ಅಲರ್ಟ್‌
Deepa S

ಬೆಂಗಳೂರು ಸೇರಿ ದಕ್ಷಿಣ ಒಳನಾಡಲ್ಲಿ ಗುಡುಗು, ಮಿಂಚಿನ ಮಳೆ!

ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನಲ್ಲಿ ಹಗುರದಿಂದ ಕೂಡಿದ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ (Karnataka Weather Forecast) ನೀಡಿದೆ.

Karnataka Weather : ಬೆಂಗಳೂರು ಸೇರಿ ದಕ್ಷಿಣ ಒಳನಾಡಲ್ಲಿ ಗುಡುಗು, ಮಿಂಚಿನ ಮಳೆ!
Deepa S

ಕಳೆದ ವರ್ಷ ರಸ್ತೆ ಬದಿ ಹೂತಿದ್ದ ಶವವನ್ನು ಹೊರತೆಗೆದ ಅಧಿಕಾರಿಗಳು!

ಸ್ಮಶಾನಕ್ಕೆ ಜಾಗವಿಲ್ಲದೆ ರಸ್ತೆ ಬದಿಯೇ ಅಂತ್ಯ ಸಂಸ್ಕಾರ ಮಾಡಿದ್ದ ಪ್ರಕರಣಕ್ಕೆ (Crematorium Problem) ಸಂಬಂಧಿಸಿದಂತೆ ಶುಕ್ರವಾರ ಬೆಳ್ಳಂಬೆಳಗ್ಗೆ ಹೂತಿದ್ದ ಶವವನ್ನು ಹೊರತೆಗೆದಿರುವ ಅಧಿಕಾರಿಗಳು ಸ್ಥಳಾಂತರ ಮಾಡಿದ್ದಾರೆ. ತುಮಕೂರು ತಾಲೂಕಿನ ದುರ್ಗದಹಳ್ಳಿ ಗ್ರಾಮದಲ್ಲಿ ಡಿ.26ರಂದು ಗ್ರಾಮದ ತಿಮ್ಮರಾಜುರವರ ತಂದೆ ಪೆದ್ದಯ್ಯ ಎಂಬುವವರು ಮೃತಪಟ್ಟಿದ್ದರು.

Crematorium Problem : ಕಳೆದ ವರ್ಷ ರಸ್ತೆ ಬದಿ ಹೂತಿದ್ದ ಶವವನ್ನು ಹೊರತೆಗೆದ ಅಧಿಕಾರಿಗಳು!
Deepa S

ಎಣ್ಣೆ ವಿಷ್ಯಕ್ಕೆ ಇಟ್ಟಿಗೆಯಿಂದ ಹೊಡೆದ ಕುಡುಕು! ಟೈಟಾಗಿ ರಸ್ತೆಯಲ್ಲಿ ತೇಲಾಡಿದ ಮಹಿಳೆ

ಎಣ್ಣೆ ಕೊಡಿಸಲಿಲ್ಲ, ಎಣ್ಣೆ ಕುಡಿಲಿಲ್ಲ, ಎಣ್ಣೆಗೆ ಕಾಸು ಕೊಡಲಿಲ್ಲ ಹೀಗೆ ನಾನಾ ಎಣ್ಣೆ ವಿಷಯಕ್ಕೆ ಕೊಲೆ, ಹಲ್ಲೆಗಳು ನಡೆದಿವೆ. ಸದ್ಯ ಬೆಂಗಳೂರಿನ ಗಿರಿನಗರದ ಮೂಕಾಂಭಿಕನಗರದಲ್ಲಿ ಮದ್ಯದ ಎಣ್ಣೆ ಕೊಡಿಸದಿದ್ದಕ್ಕೆ ವ್ಯಕ್ತಿಯ ಮೇಲೆ ಹಲ್ಲೆ (Assault Case) ನಡೆಸಲಾಗಿದೆ.

Assault Case : ಎಣ್ಣೆ ವಿಷ್ಯಕ್ಕೆ ಇಟ್ಟಿಗೆಯಿಂದ ಹೊಡೆದ ಕುಡುಕ! ಟೈಟಾಗಿ ರಸ್ತೆಯಲ್ಲಿ ತೇಲಾಡಿದ ಮಹಿಳೆ
Deepa S

ಕಾಫಿ ತೋಟದಲ್ಲಿ ಕಾರ್ಮಿಕನ ಬೆನ್ನಟ್ಟಿ ಕೊಂದ ಕಾಡಾನೆ; ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ

ಕಾಫಿ ತೋಟದಲ್ಲಿ ಕೆಲಸ ಮುಗಿಸಿ ವಾಪಸ್‌ ಬರುವಾಗ ಕಾಡಾನೆಯೊಂದು ದಾಳಿ (Elephant Attack) ಮಾಡಿದೆ. ಕಾರ್ಮಿಕನನ್ನು ಅಟ್ಟಾಡಿಸಿ ಕೊಂದಿದೆ. ಹಾಸನ‌ ಜಿಲ್ಲೆ ಬೇಲೂರು ತಾಲ್ಲೂಕಿನ ಮತ್ತಾವರ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ವಸಂತ್ (45) ಮೃತ ದುರ್ದೈವಿ.

Elephant Attack : ಕಾಫಿ ತೋಟದಲ್ಲಿ ಕಾರ್ಮಿಕನ ಬೆನ್ನಟ್ಟಿ ಕೊಂದ ಕಾಡಾನೆ; ಶವವಿಟ್ಟು ಗ್ರಾಮಸ್ಥರ ಪ್ರತಿಭಟನೆ
Exit mobile version