ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಸೋಮವಾರ ಬೆಳಗ್ಗಿನಿಂದಲೇ ನಡೆಯುತ್ತಿದ್ದ ಖಾಸಗಿ ಪ್ರಯಾಣಿಕ ವಾಹನಗಳ ಒಕ್ಕೂಟದ ಕರೆ ಆಧರಿಸಿದ ಬಂದ್‌ನ್ನು ಹಿಂದಕ್ಕೆ ಪಡೆಯಲಾಗಿದೆ. ಸಾರಿಗೆ ಸಚಿವ ರಾಮ ಲಿಂಗಾ ರೆಡ್ಡಿ ಅವರು ನೀಡಿದ ಭರವಸೆ ಆಧರಿಸಿ ತಕ್ಷಣದಿಂದಲೇ ಬಂದ್‌ನ್ನು ಹಿಂದಕ್ಕೆ ಪಡೆದಿರುವುದಾಗಿ ಒಕ್ಕೂಟ ಪ್ರಕಟಿಸಿದೆ. ಇದರೊಂದಿಗೆ ಆಟೋ, ಟ್ಯಾಕ್ಸಿ, ಬಸ್ ಸೇರಿದಂತೆ ಖಾಸಗಿ ಬಸ್‌ಗಳ ಸಂಚಾರ ತಕ್ಷಣದಿಂದ ಮರು ಆರಂಭಗೊಳ್ಳಲಿದೆ. ರಾಮ ಲಿಂಗಾ ರೆಡ್ಡಿ ಅವರು ನೀಡಿದ ಭರವಸೆಗಳೇನು ಎಂಬ ಬಗ್ಗೆ ಸದ್ಯವೇ ಮಾಹಿತಿ ದೊರೆಯಲಿದೆ.
ಕರ್ನಾಟಕ ಹೂಡಿಕೆದಾರರ ನೆಚ್ಚಿನ ತಾಣ: ನೆದರ್ಲೆಂಡ್ಸ್ ನಿಯೋಗಕ್ಕೆ ಡಿಸಿಎಂ ಡಿಕೆಶಿ ಆಹ್ವಾನ
ಅತ್ಯುತ್ತಮ ಕೈಗಾರಿಕಾ ನೀತಿ, ಮೂಲಭೂತ ಸೌಕರ್ಯ, ಮಾನವ ಸಂಪನ್ಮೂಲ, ಪರಿಸರದಿಂದಾಗಿ ಕರ್ನಾಟಕ ರಾಜ್ಯ ಭಾರತದಲ್ಲೇ ಬಂಡವಾಳ ಹೂಡಿಕೆದಾರರ ನೆಚ್ಚಿನ ತಾಣವಾಗಿದೆ. ಕರ್ನಾಟಕ ಎಂದರೆ ಕೇವಲ ಬೆಂಗಳೂರು ಮಾತ್ರವಲ್ಲ, ಮೈಸೂರು, ಹುಬ್ಭಳ್ಳಿ, ಮಂಗಳೂರು, ಬೆಳಗಾವಿ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಅಗತ್ಯ ನೆರವು ನೀಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ತಿಳಿಸಿದರು. ವಿಧಾನಸೌಧದಲ್ಲಿ ಸೋಮವಾರ ನೆದರ್ಲೆಂಡ್ಸ್ ಪ್ರಧಾನಿ ಮಾರ್ಕ್ ರುಟ್ಟೆ ಹಾಗೂ ಆ ದೇಶದ ಕಂಪನಿಗಳ ಪ್ರಮುಖರ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದರು.
https://vistaranews.com/karnataka/karnataka-is-a-favourite-destination-for-investors-deputy-cm-dk-shivakumar-invites-delegation-from-netherlands/451456.html
ಅಡುಗೆ ಕೋಣೆಯಲ್ಲಿ ನಿದ್ದೆಗೆ ಜಾರಿದ ಚಿರತೆ; ಪ್ರವಾಸಿಗರ ಓಡಿಸಿಕೊಂಡು ಹೋದ ಕಾಡಾನೆ
ತುಮಕೂರಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿದ್ದರೆ, ಇತ್ತ ಸಫಾರಿ ವಾಹನಗಳನ್ನು ಕಾಡಾನೆಯೊಂದು ಅಟ್ಟಾಡಿಸಿಕೊಂಡು ಹೋಗಿದೆ.
Wild animals Attack : ಅಡುಗೆ ಕೋಣೆಯಲ್ಲಿ ನಿದ್ದೆಗೆ ಜಾರಿದ ಚಿರತೆ; ಪ್ರವಾಸಿಗರ ಓಡಿಸಿಕೊಂಡು ಹೋದ ಕಾಡಾನೆ
ಕರಾವಳಿ, ಉತ್ತರ ಆಗಲಿದೆ ಮಳೆಗೆ ತತ್ತರ
ರಾಜ್ಯಾದ್ಯಂತ ಪ್ರತ್ಯೇಕ ಕಡೆಗಳಲ್ಲಿ ವ್ಯಾಪಕದಿಂದ ಸಾಧಾರಣ ಮಳೆಯಾಗುವ (Rain News) ಸಾಧ್ಯತೆ ಇದೆ. ಕರಾವಳಿ ಹಾಗೂ ಉತ್ತರ ಒಳನಾಡಲ್ಲಿ ಭಾರೀ ಮಳೆ ಸೂಚನೆ ಇದ್ದರೆ, ಮಲೆನಾಡಿನ ಕೆಲವು ಕಡೆ ಚದುರಿದ (Weather report) ಮಳೆಯಾಗಲಿದೆ. ದಕ್ಷಿಣ ಒಳನಾಡಲ್ಲಿ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಸಹಿತ ಗುಡುಗಿನ ಮಳೆಯಾಗುವ ಸಾಧ್ಯತೆ ಇದೆ.
Weather Report : ಕರಾವಳಿ, ಉತ್ತರ ಆಗಲಿದೆ ಮಳೆಗೆ ತತ್ತರ
ಗಣೇಶ ಹಬ್ಬಕ್ಕೆ ಕೆಂಗೇರಿ-ಚಲ್ಲಘಟ್ಟ, ಬೈಯಪ್ಪನಹಳ್ಳಿ- ಕೆಆರ್‌ಪುರಂ ಮುಕ್ತ ಸಂಚಾರ!
ರಾಜಧಾನಿ ಬೆಂಗಳೂರಲ್ಲಿ ಬಿಎಂಆರ್‌ಸಿಎಲ್ ಮತ್ತೊಂದು ಹಂತದ ಮೆಟ್ರೋ ಸಂಚಾರಕ್ಕೆ ಸಜ್ಜಾಗುತ್ತಿದೆ. ಬೈಯಪ್ಪನಹಳ್ಳಿ-ಕೆಆರ್‌ಪುರಂ, ಕೆಂಗೇರಿ-ಚಲ್ಲಘಟ್ಟ ಮಾರ್ಗದ ಮೆಟ್ರೋ ಸಂಚಾರಕ್ಕೆ (Namma Metro) ಸಿದ್ಧ ಮಾಡಿಕೊಳ್ಳುತ್ತಿದೆ. ಈ ಮಾರ್ಗವು ಸೆ. 18ರ ಗಣೇಶ ಹಬ್ಬದಂದೇ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.
Namma Metro : ಗಣೇಶ ಹಬ್ಬಕ್ಕೆ ಕೆಂಗೇರಿ-ಚಲ್ಲಘಟ್ಟ, ಬೈಯಪ್ಪನಹಳ್ಳಿ- ಕೆಆರ್‌ಪುರಂ ಮುಕ್ತ ಸಂಚಾರ!
ಏರ್‌ಪೋರ್ಟ್‌ನಲ್ಲಿ ವೈಟ್‌ಬೋರ್ಡ್ ಕಾರುಗಳಲ್ಲಿ ಡಬಲ್ ರೇಟ್ ಸುಲಿಗೆ
ಖಾಸಗಿ ಸಾರಿಗೆ ನೌಕರರ ಮುಷ್ಕರ (Bengaluru Bandh) ಹಿನ್ನೆಲೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport Passengers) ಟ್ಯಾಕ್ಸಿಗಳಿಲ್ಲದೆ ಪ್ರಯಾಣಿಕರು ಪರದಾಡಿದರು. ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು, ವೈಟ್ ಬೋರ್ಡ್ ಕಾರುಗಳನ್ನು ತಂದು ಡ್ರಾಪ್ ನೀಡುವ ನೆಪದಲ್ಲಿ ದುಪ್ಪಟ್ಟು ಹಣವನ್ನು ವಸೂಲಿ ಮಾಡಿದ್ದಾರೆ.
Bengaluru Bandh : ಏರ್‌ಪೋರ್ಟ್‌ನಲ್ಲಿ ವೈಟ್‌ಬೋರ್ಡ್ ಕಾರುಗಳಲ್ಲಿ ಡಬಲ್ ರೇಟ್ ಸುಲಿಗೆ