ಬೆಂಗಳೂರು: ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಸೋಮವಾರ ಬೆಳಗ್ಗಿನಿಂದಲೇ ನಡೆಯುತ್ತಿದ್ದ ಖಾಸಗಿ ಪ್ರಯಾಣಿಕ ವಾಹನಗಳ ಒಕ್ಕೂಟದ ಕರೆ ಆಧರಿಸಿದ ಬಂದ್‌ನ್ನು ಹಿಂದಕ್ಕೆ ಪಡೆಯಲಾಗಿದೆ. ಸಾರಿಗೆ ಸಚಿವ ರಾಮ ಲಿಂಗಾ ರೆಡ್ಡಿ ಅವರು ನೀಡಿದ ಭರವಸೆ ಆಧರಿಸಿ ತಕ್ಷಣದಿಂದಲೇ ಬಂದ್‌ನ್ನು ಹಿಂದಕ್ಕೆ ಪಡೆದಿರುವುದಾಗಿ ಒಕ್ಕೂಟ ಪ್ರಕಟಿಸಿದೆ. ಇದರೊಂದಿಗೆ ಆಟೋ, ಟ್ಯಾಕ್ಸಿ, ಬಸ್ ಸೇರಿದಂತೆ ಖಾಸಗಿ ಬಸ್‌ಗಳ ಸಂಚಾರ ತಕ್ಷಣದಿಂದ ಮರು ಆರಂಭಗೊಳ್ಳಲಿದೆ. ರಾಮ ಲಿಂಗಾ ರೆಡ್ಡಿ ಅವರು ನೀಡಿದ ಭರವಸೆಗಳೇನು ಎಂಬ ಬಗ್ಗೆ ಸದ್ಯವೇ ಮಾಹಿತಿ ದೊರೆಯಲಿದೆ.
ಪ್ರೀತಿಸುವಂತೆ ವಿವಾಹಿತೆಗೆ ಜೈಲಿನಿಂದಲೇ ಪಾಗಲ್ ಪ್ರೇಮಿ ಬ್ಲ್ಯಾಕ್‌ಮೇಲ್!
ಜೈಲಿನಿಂದಲೇ ಫೋನ್ ಮಾಡಿ ವಿವಾಹಿತೆಗೆ ಪ್ರೀತಿಸುವಂತೆ (Love Case) ಪ್ರೇಮಿಯೊಬ್ಬ ಕೊಲೆ ಬೆದರಿಕೆ (Blackmailing) ಹಾಕಿರುವ ಘಟನೆ ವರದಿ ಆಗಿದೆ. ಅಕ್ರಮಗಳ ಅಡ್ಡೆಯಾಗಿರುವ ಪರಪ್ಪನ ಅಗ್ರಹಾರ ಜೈಲಿನಲ್ಲಿ ಆರೋಪಿಗಳಿಗೆ ಸಲೀಸಾಗಿ ಮೊಬೈಲ್ ಸಿಗುತ್ತಿದೆ. ಶ್ರೀನಿವಾಸ ಎಂಬಾತ ಜೈಲು ಸೇರಿದ್ದರೂ, ಅಲ್ಲಿಂದಲೇ ಅಮಲಾ ಎಂಬಾಕೆಗೆ ಕೊಲೆ ಬೆದರಿಕೆ (Blackmail Case) ಹಾಕುತ್ತಿದ್ದಾನೆ.
Love Case : ಪ್ರೀತಿಸುವಂತೆ ವಿವಾಹಿತೆಗೆ ಜೈಲಿನಿಂದಲೇ ಪಾಗಲ್ ಪ್ರೇಮಿ ಬ್ಲ್ಯಾಕ್‌ಮೇಲ್!
ಫೀಲ್ಡಿಗಿಳಿದ ರ‍್ಯಾಪಿಡೋ ಚಾಲಕರು; ಪ್ರತಿಭಟನಾಕಾರರಿಂದ ಹೊಡಿಬಡಿ
ರಾಜ್ಯ ಖಾಸಗಿ ಸಾರಿಗೆ ಒಕ್ಕೂಟದ ವತಿಯಿಂದ ಸೋಮವಾರ (ಸೆಪ್ಟೆಂಬರ್ 11) ಬೆಂಗಳೂರು ಬಂದ್‌ಗೆ (Bengaluru Bandh) ಕರೆ ನೀಡಲಾಗಿದೆ. ಖಾಸಗಿ ಬಸ್, ಆಟೋ, ಓಲಾ, ಉಬರ್‌ನಂತಹ ಕ್ಯಾಬ್‌ಗಳ ಓಡಾಟ ಸ್ಥಗಿತಗೊಂಡಿವೆ. ಇದನ್ನೇ ಬಂಡವಾಳ ಮಾಡಿಕೊಂಡ ರ‍್ಯಾಪಿಡೋ ಚಾಲಕರು ರಸ್ತೆಗಿಳಿದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಪ್ರತಿಭಟನಾಕಾರರು ರ‍್ಯಾಪಿಡೋ ಚಾಲಕರನ್ನು ಅಡ್ಡಗಟ್ಟಿ ಮನಬಂದಂತೆ ಥಳಿಸುತ್ತಿದ್ದಾರೆ.
Bengaluru Bandh : ಫೀಲ್ಡಿಗಿಳಿದ ರ‍್ಯಾಪಿಡೋ ಚಾಲಕರು; ಪ್ರತಿಭಟನಾಕಾರರಿಂದ ಹೊಡಿಬಡಿ
ಬೆಂಗಳೂರಲ್ಲಿ ಚಾಲಕರ ಪ್ರತಿಭಟನೆಗೆ ಮಳೆ ಅಡ್ಡಿ; ಕರಾವಳಿಯಲ್ಲಿ ವರುಣಾರ್ಭಟ
ರಾಜ್ಯದ ಹಲವೆಡೆ ಸೋಮವಾರ ಮಳೆ (Rain News) ಅಬ್ಬರ ಜೋರಾಗಿ ಇರಲಿದೆ. ಬೆಂಗಳೂರಲ್ಲಿ ಖಾಸಗಿ ಚಾಲಕರ ಒಕ್ಕೂಟವು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, ಚಾಲಕರ ಪ್ರತಿಭಟನೆಗೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.
Weather Report : ಬೆಂಗಳೂರಲ್ಲಿ ಚಾಲಕರ ಪ್ರತಿಭಟನೆಗೆ ಮಳೆ ಅಡ್ಡಿ; ಕರಾವಳಿಯಲ್ಲಿ ವರುಣಾರ್ಭಟ