Site icon Vistara News

Karnataka Live News : ಗಟ್ಟಿಯಾಯ್ತು ಬಿಜೆಪಿ ಮೈತ್ರಿ; ಪಕ್ಷದ ನಿರ್ಧಾರಕ್ಕೆ ಬದ್ಧವೆಂದ ಜೆಡಿಎಸ್‌ ಶಾಸಕರು, ನಾಯಕರು!

karnataka live news
Prabhakar R

ಕೇಂದ್ರವು 4 ರಾಜ್ಯಗಳ ಜತೆ ಚರ್ಚಿಸಿ ಕಾವೇರಿ ವಿವಾದಕ್ಕೆ ತೆರೆ ಎಳೆಯಲಿ: ಎಸ್.ಎಂ. ಕೃಷ್ಣ

ಕಾವೇರಿ ನೀರು ಹಂಚಿಕೆ ಸಮಸ್ಯೆಗೆ (Cauvery Dispute) ಅಂತಿಮ ತೆರೆ ಎಳೆಯಲು ಕೇಂದ್ರ ಸರ್ಕಾರವು ನಾಲ್ಕು ರಾಜ್ಯಗಳ ಜತೆ ಚರ್ಚೆ ಮಾಡಿ ಸಂಕಷ್ಟ ಪರಿಹಾರದ ಸೂತ್ರ ರೂಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಹೇಳಿದ್ದಾರೆ.

Cauvery Dispute: ಕೇಂದ್ರವು 4 ರಾಜ್ಯಗಳ ಜತೆ ಚರ್ಚಿಸಿ ಕಾವೇರಿ ವಿವಾದಕ್ಕೆ ತೆರೆ ಎಳೆಯಲಿ: ಎಸ್.ಎಂ. ಕೃಷ್ಣ
Adarsha Anche

JDS Politics : ಗಟ್ಟಿಯಾಯ್ತು ಬಿಜೆಪಿ ಮೈತ್ರಿ; ಪಕ್ಷದ ನಿರ್ಧಾರಕ್ಕೆ ಬದ್ಧವೆಂದ ಜೆಡಿಎಸ್‌ ಶಾಸಕರು, ನಾಯಕರು!

ಬಿಜೆಪಿ ಮೈತ್ರಿ ಬಗ್ಗೆ ಅನುಮಾನ ಗೊಂದಲಗಳನ್ನು ಜೆಡಿಎಸ್ ವರಿಷ್ಠರು ನಿವಾರಿಸಿದ್ದಾರೆ. ಪಕ್ಷದ ನಿರ್ಧಾರಕ್ಕೆ ಬದ್ಧ ಎಂದು ಜೆಡಿಎಸ್‌ ಶಾಸಕರು, ನಾಯಕರು ಘೋಷಿಸಿದ್ದಾರೆ. ಅಲ್ಲದೆ, ಇದೇ ವೇಳೆ ಬಿಲ್ಡಪ್ ನಾಯಕರನ್ನು ಪಕ್ಷದಿಂದ ಹೊರ ಹಾಕಿ ಎಂದು ಮುಸ್ಲಿಂ ನಾಯಕರು ಒತ್ತಾಯಿಸಿದ್ದಾರೆ.

JDS Politics : ಗಟ್ಟಿಯಾಯ್ತು ಬಿಜೆಪಿ ಮೈತ್ರಿ; ಪಕ್ಷದ ನಿರ್ಧಾರಕ್ಕೆ ಬದ್ಧವೆಂದ ಜೆಡಿಎಸ್‌ ಶಾಸಕರು, ನಾಯಕರು!
Prabhakar R

ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ, ಕಲ್ಲು ತೂರಾಟ; ಮೂವರಿಗೆ ಗಾಯ

ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆಯಾಗಿ ಕಲ್ಲು ತೂರಾಟ ನಡೆದಿದ್ದರಿಂದ ಮೂವರು ಗಾಯಗೊಂಡಿರುವ ಘಟನೆ ನಗರದ (Shivamogga Clash) ಶಿವಮೊಗ್ಗದ ರಾಗಿಗುಡ್ಡದ ಬಳಿಯ ಶಾಂತಿನಗರದಲ್ಲಿ ಭಾನುವಾರ ನಡೆದಿದೆ. ಮೆರವಣಿಗೆ ವೇಳೆ ಕೆಲವರು ಕಲ್ಲು ಬಿದ್ದಿರುವುದಾಗಿ ಹೇಳಿದ್ದರಿಂದ ಮೆರವಣಿಗೆಯಲ್ಲಿ ಭಾಗಿಯಾಗಿದ್ದವರು ಮತ್ತೊಂದು ಕೋಮಿನ ಪ್ರದೇಶಗಳಿಗೆ ನುಗ್ಗಿದ್ದರಿಂದ ಗಲಭೆ ಉಂಟಾಗಿದೆ.

Shivamogga Clash: ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ, ಕಲ್ಲು ತೂರಾಟ; ಮೂವರಿಗೆ ಗಾಯ
Adarsha Anche

HD Devegowda : ಮಿಸ್ಟರ್ ಡಿ.ಕೆ. ಶಿವಕುಮಾರ್ ನಿಮ್ಮ ಕೆಟ್ಟ ರಾಜಕೀಯ ಆಟ ನಡೆಯಲ್ಲ; ಗುಡುಗಿದ ಎಚ್.ಡಿ. ದೇವೇಗೌಡ

ಡಿಸಿಎಂ ಡಿ.ಕೆ. ಶಿವಕುಮಾರ್ ಮೇಲೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಿಸ್ಟರ್ ಡಿ.ಕೆ. ಶಿವಕುಮಾರ್ ನಿಮ್ಮ ಕೆಟ್ಟ ರಾಜಕೀಯ, ಆಟ ನಡೆಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

HD Devegowda : ಮಿಸ್ಟರ್ ಡಿ.ಕೆ. ಶಿವಕುಮಾರ್ ನಿಮ್ಮ ಕೆಟ್ಟ ರಾಜಕೀಯ ಆಟ ನಡೆಯಲ್ಲ; ಗುಡುಗಿದ ಎಚ್.ಡಿ. ದೇವೇಗೌಡ

Deepa S

ಭಾರಿ ವರ್ಷಧಾರೆ ಜತೆಗೆ ಶೀತಮಯ ವಾತಾವರಣ; ಹೊಸನಗರದಲ್ಲಿ ದಾಖಲೆ ಮಳೆ!

ವಾಡಿಕೆ ಮಳೆಯಾಗದೇ ಕೈಕೊಟ್ಟಿದ್ದ ಮಳೆರಾಯ ಈಗ ಸಕ್ರಯವಾಗಿದ್ದಾನೆ. ರಾಜ್ಯದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು, ಶೀತಮಯ ವಾತಾವರಣ (karnataka weather forecast)ನಿರ್ಮಾಣವಾಗಿದೆ.

https://vistaranews.com/weather/karnataka-weather-forecast-cold-weather-with-heavy-rain-record-rain-in-hosanagara/468798.html

Exit mobile version