Site icon Vistara News

Karnataka live news : ರಾಜ್ಯಪಾಲರಿಗೆ ದಯಾಮರಣ ಪತ್ರ; ಕಾಮಗಾರಿಯನ್ನೇ ಮಾಡದ ಗುತ್ತಿಗೆದಾರರಿಗೆ ಕಾನೂನು ಸಂಕಷ್ಟ!

Karnataka Live News

ಬಿಬಿಎಂಪಿ ಗುತ್ತಿಗೆದಾರರ ದಯಾಮರಣ ಪತ್ರದ ಬಗ್ಗೆ ಪೊಲೀಸ್ ತನಿಖೆ ತೀವ್ರಗೊಂಡಿದ್ದು, ಪತ್ರಕ್ಕೆ ಸಹಿ ಹಾಕಿದ ಕೆಲವು ಗುತ್ತಿಗೆದಾರರಿಗೆ ಕಾನೂನು ಕಂಟಕ ಎದುರಾಗಿದೆ. ಕೆಲವರು ಕಾಮಗಾರಿ ಮಾಡದೇ ಇದ್ದರೂ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವಿಚಾರ ಗೊತ್ತಾಗಿದೆ.

Prabhakar R

ಆ.30ಕ್ಕೆ ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ; ಅಂದೇ ಮಹಿಳೆಯರ ಖಾತೆಗೆ 2000 ರೂ.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಗಸ್ಟ್‌ 30ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಗಲಿದ್ದು, ಅಂದೇ ಕುಟುಂಬದ ಯಜಮಾನಿ ಖಾತೆಗೆ 2 ಸಾವಿರ ರೂ. ವರ್ಗಾವಣೆ ಆಗಲಿದೆ. ಬಟನ್ ಒತ್ತುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಯೋಜನೆಗೆ (Gruha Lakshmi Scheme) ಚಾಲನೆ ನೀಡಲಿದ್ದು, 1,09,54,000 ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಅಗಲಿದೆ.

Gruha Lakshmi Scheme: ಆ.30ಕ್ಕೆ ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ; ಅಂದೇ ಮಹಿಳೆಯರ ಖಾತೆಗೆ 2000 ರೂ.
Prabhakar R

ಸಿಎಂ ಭೇಟಿಯಾದ ಎಸ್‌.ಟಿ.ಸೋಮಶೇಖರ್‌; ಕಾಂಗ್ರೆಸ್‌ ಸೇರ್ಪಡೆ ಫಿಕ್ಸ್‌ ಆಯ್ತಾ?

ಯಶವಂತಪುರ ಕ್ಷೇತ್ರ ಬಿಜೆಪಿ ಶಾಸಕ, ಮಾಜಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರು ಕಾಂಗ್ರೆಸ್‌ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ನಡುವೆ ಅವರು ಭಾನುವಾರ ಸಿಎಂ ಸಿದ್ದರಾಮಯ್ಯರನ್ನು ದಿಢೀರ್ ಭೇಟಿ ಮಾಡಿ ಮತುಕತೆ ನಡೆಸಿದ್ದಾರೆ. ಇದರಿಂದ ಬಿಜೆಪಿ ಮಾಜಿ ಸಚಿವ ಕಾಂಗ್ರೆಸ್‌ ಸೇರ್ಪಡೆಯಾಗುವುದು (Operation Hasta) ಖಚಿತವಾಯಿತಾ ಎಂಬ ಅನುಮಾನಗಳು ಮೂಡಿವೆ.

Operation Hasta: ಸಿಎಂ ಭೇಟಿಯಾದ ಎಸ್‌.ಟಿ.ಸೋಮಶೇಖರ್‌; ಕಾಂಗ್ರೆಸ್‌ ಸೇರ್ಪಡೆ ಫಿಕ್ಸ್‌ ಆಯ್ತಾ?
Deepa S

ಆ.21ರಂದು ಬಿರುಗಾಳಿ ಸಹಿತ ಗುಡುಗಿನ ಮಳೆ!

ಮುಂದಿನ 24 ಗಂಟೆಯಲ್ಲಿ ಕರಾವಳಿಯ ಹಲವು ಕಡೆಗಳಲ್ಲಿ ಮತ್ತು ಒಳನಾಡಿನ ಕೆಲವು ಕಡೆಗಳಲ್ಲಿ ಗುಡುಗು (Rain News) ಮಳೆಯಾಗುವ ಸಾಧ್ಯತೆ ಇದೆ. ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದ್ದು, ಒಳನಾಡಿನಲ್ಲಿ ಬಿರುಗಾಳಿಯ ವೇಗವು ಗಂಟೆಗೆ 30-40 ಕಿ.ಮೀ. ಇರುವ ಸಾಧ್ಯತೆ (Weather report) ಇದೆ.

Weather Report : ಆ.21ರಂದು ಬಿರುಗಾಳಿ ಸಹಿತ ಗುಡುಗಿನ ಮಳೆ!
Deepa S

ಗೊಲ್ಲರದೊಡ್ಡಿ ಅಪಘಾತ ಪ್ರಕರಣ; ಚಿಕಿತ್ಸೆ ಫಲಿಸದೆ ಮತ್ತೊಂದು ಮಗು ಸಾವು

ರಾಮನಗರ: ಇಲ್ಲಿನ ಮಾಗಡಿ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ (Gollaradoddi Accident) ಆಗಸ್ಟ್‌ 9ರಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಕ್ಕಳಿಗೆ ವಾಹನವೊಂಡು (Road Accident) ಡಿಕ್ಕಿ ಹೊಡೆದಿತ್ತು. ಪರಿಣಾಮ ಸ್ಥಳದಲ್ಲೆ ರೋಹಿತ್(5), ಶಾಲಿನಿ(8) ಎಂಬುವವರು ಮೃತಪಟ್ಟಿದ್ದರು. ಕಳೆದ ಮೂರು ದಿನಗಳ ಹಿಂದೆ ಒಂದು ಮಗು ಸಾವನ್ನಪ್ಪಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮತ್ತೊಂದು ಮಗು ಜ್ಞಾನೇಶ್ವರಿ (6) ಮೃತಪಟ್ಟಿದೆ.

Road Accident : ಗೊಲ್ಲರದೊಡ್ಡಿ ಅಪಘಾತ ಪ್ರಕರಣ; ಚಿಕಿತ್ಸೆ ಫಲಿಸದೆ ಮತ್ತೊಂದು ಮಗು ಸಾವು
Deepa S

ಅಪಘಾತದಲ್ಲಿ ಯುವಕ ಸಾವು; ಸುದ್ದಿ ತಿಳಿದು ಸ್ನೇಹಿತನಿಗೆ ಹೃದಯಾಘಾತ!

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕೆಎಸ್‌ಆರ್‌ಟಿಸಿ ಡಿಪೊ ಸಮೀಪ ಬೈಕ್‌ಗಳ ಮುಖಾಮುಖಿ ಡಿಕ್ಕಿಯಾಗಿದ್ದು, ಯುವಕನೊಬ್ಬ ಮೃತಪಟ್ಟಿದ್ದಾನೆ. ಈ ಸುದ್ದಿ ತಿಳಿದ ಯುವಕನ ಸ್ನೇಹಿತನಿಗೆ ಹೃದಯಾಘಾತವಾಗಿದೆ. ಪುಣೇದಹಳ್ಳಿಯ ಆನಂದ (30) ಮೃತ ದುರ್ದೈವಿ.

Road Accident : ಅಪಘಾತದಲ್ಲಿ ಯುವಕ ಸಾವು; ಸುದ್ದಿ ತಿಳಿದು ಸ್ನೇಹಿತನಿಗೆ ಹೃದಯಾಘಾತ!
Exit mobile version