Site icon Vistara News

Karnataka live news : ರಾಜ್ಯಪಾಲರಿಗೆ ದಯಾಮರಣ ಪತ್ರ; ಕಾಮಗಾರಿಯನ್ನೇ ಮಾಡದ ಗುತ್ತಿಗೆದಾರರಿಗೆ ಕಾನೂನು ಸಂಕಷ್ಟ!

Karnataka Live News

ಬಿಬಿಎಂಪಿ ಗುತ್ತಿಗೆದಾರರ ದಯಾಮರಣ ಪತ್ರದ ಬಗ್ಗೆ ಪೊಲೀಸ್ ತನಿಖೆ ತೀವ್ರಗೊಂಡಿದ್ದು, ಪತ್ರಕ್ಕೆ ಸಹಿ ಹಾಕಿದ ಕೆಲವು ಗುತ್ತಿಗೆದಾರರಿಗೆ ಕಾನೂನು ಕಂಟಕ ಎದುರಾಗಿದೆ. ಕೆಲವರು ಕಾಮಗಾರಿ ಮಾಡದೇ ಇದ್ದರೂ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ವಿಚಾರ ಗೊತ್ತಾಗಿದೆ.

Adarsha Anche

Operation Hasta : ಆಯನೂರು ಸೇರ್ಪಡೆ ಪಕ್ಕಾ? ʼಆಪರೇಷನ್‌ ಹಸ್ತʼ ಹೌದು ಅಂದ್ರು ಡಿಕೆಶಿ, ಸತೀಶ್!

ರಾಜ್ಯದಲ್ಲಿ ಅಧಿಕೃತವಾಗಿ ಆಪರೇಷನ್‌ ಹಸ್ತಕ್ಕೆ ಚಾಲನೆ ಸಿಕ್ಕಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಪರೋಕ್ಷವಾಗಿ ಹೇಳಿದ್ದರೆ, ಸಚಿವ ಸತೀಶ್‌ ಜಾರಕಿಹೊಳಿ ನೇರವಾಗಿ ಒಪ್ಪಿಕೊಂಡಿದ್ದಾರೆ. ಈ ಮಧ್ಯೆ ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್‌ ಅವರು ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

http://vistaranews.com/politics/operation-hasta-ayanur-manjunath-to-join-congress-fix/431229.html

Deepa S

ನೀರು ಕುಡಿಯಲು ಹೋಗಿ ಕಾಲು ಜಾರಿ ಕಾಲುವೆಗೆ ಬಿದ್ದ ಬಾಲಕ ಮೃತ್ಯು

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೊಗೇರಿ ಗ್ರಾಮದ ಸಮೀಪ ಬಾಲಕನೊಬ್ಬ ಕಾಲುವೆಯಲ್ಲಿ (Drowned in canal) ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಅಭಿಷೇಕ್‌ ಮೈಲೆಪ್ಪ ಮಾದರ (14) ಮೃತ ದುರ್ದೈವಿ.

Drowned in canal : ನೀರು ಕುಡಿಯಲು ಹೋಗಿ ಕಾಲು ಜಾರಿ ಕಾಲುವೆಗೆ ಬಿದ್ದ ಬಾಲಕ ಮೃತ್ಯು
Deepa S

ನಮ್ಮಣ್ಣನೇ ಬಾಸ್‌ ಎಂದು ಯುವಕನಿಗೆ ಲಾಂಗ್‌ ಬೀಸಿದ ರೀಲ್ಸ್‌ ಬಾಯ್ಸ್‌ ಅರೆಸ್ಟ್‌

ರಾಜಧಾನಿ ಬೆಂಗಳೂರಲ್ಲಿ ಪುಂಡರ ದಾಂಧಲೆ ನಿಲ್ಲುವಂತೆ ಕಾಣುತ್ತಿಲ್ಲ. ಒಂದಲ್ಲ ಒಂದು ಏರಿಯಾದಲ್ಲಿ ಪುಡಿರೌಡಿಗಳ ಕಿರಿಕ್‌ (Assault Case) ಇದ್ದೆ ಇರುತ್ತೆ. ಅದರಲ್ಲೂ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದೆ. ಏರಿಯಾದಲ್ಲಿ ಹವಾ ಇರಬೇಕೆಂದು ಪುಡಿರೌಡಿಯೊಬ್ಬ ಯುವಕನ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿದವನನ್ನು ಪೊಲೀಸರ ಅತಿಥಿಯಾಗಿದ್ದಾನೆ.

Assault Case : ನಮ್ಮಣ್ಣನೇ ಬಾಸ್‌ ಎಂದು ಯುವಕನಿಗೆ ಲಾಂಗ್‌ ಬೀಸಿದ ರೀಲ್ಸ್‌ ಬಾಯ್ಸ್‌ ಅರೆಸ್ಟ್‌
Adarsha Anche

Minister Chaluvarayaswamy : ರಾಜ್ಯಪಾಲರಿಗೆ ಪತ್ರ ಬರೆದಿದ್ದ ಮೈಸೂರಿನ ಕೃಷಿ ಅಧಿಕಾರಿಗಳಿಬ್ಬರ ಸೆರೆ

ಕೃಷಿ ಸಚಿವ ಚಲುವರಾಯಸ್ವಾಮಿ ಅವರು ಲಂಚ ಕೇಳಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರಬರೆದಿದ್ದ ಪ್ರಕರಣವನ್ನು ಸಿಐಡಿ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಮೈಸೂರಿನ ಇಬ್ಬರು ಕೃಷಿ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

http://vistaranews.com/karnataka/two-agriculture-officials-of-mysuru-arrested-for-writing-to-governor-alleging-that-minister-chaluvarayaswamy-was-demanding-a-bribe/431187.html

Deepa S

ನಾಗಮಲೆಯಲ್ಲಿ ಕಾಡಾನೆ ದಾಳಿಗೆ ಒಬ್ಬ ಬಲಿ, ಮತ್ತೊಬ್ಬ ಬಚಾವ್‌

ಮಲೆಮಹಾದೇಶ್ವರ ಬೆಟ್ಟದಲ್ಲಿ (Male Mahadeshwara hills) ಭಕ್ತರ ಮೇಲೆ ಕಾಡಾನೆ ದಾಳಿ (Elephant attack) ಮಾಡಿದೆ. ದಾಳಿಯಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದರೆ, ಮತ್ತೊಬ್ಬ ಪ್ರಾಣಾಪಾಯದಿಂದ ಬಚಾವ್‌ ಆಗಿದ್ದಾನೆ.

Elephant attack : ನಾಗಮಲೆಯಲ್ಲಿ ಕಾಡಾನೆ ದಾಳಿಗೆ ಒಬ್ಬ ಬಲಿ, ಮತ್ತೊಬ್ಬ ಬಚಾವ್‌
Exit mobile version