Site icon Vistara News

Karnataka Live News : ರಾಜ್ಯದಲ್ಲಿನ ಪ್ರಮುಖ ಬೆಳವಣಿಗೆಗಳ ಲೇಟೆಸ್ಟ್ ಮಾಹಿತಿ; ಬೈಕ್‌ನಲ್ಲಿ ಬಂದು ಕತ್ತು ಸೀಳಿದ ಪ್ರೇಮಿ

karnataka today news live
Deepa S

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಮಳೆ ಅಡ್ಡಿ!

ಹೆಣ್ಮಕ್ಕಳ ಹಬ್ಬ ವರಮಹಾಲಕ್ಷ್ಮಿ ಹಬ್ಬಕ್ಕೆ (varamahalakshmi festival) ಮಳೆ ಅಡ್ಡಿಯಾಗುವ (rain News) ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಲ್ಲಿ ಚದುರಿದಂತೆ ಹಾಗೂ ಮಲೆನಾಡು, ಒಳನಾಡಿನಲ್ಲಿ ಪ್ರತ್ಯೇಕವಾಗಿ ಕಡಿಮೆ ಮಳೆಯಾಗುವ (Weather report) ಸಾಧ್ಯತೆಯಿದೆ. ರಾಜ್ಯದ ಕೆಲವು ಸ್ಥಳಗಳಲ್ಲಿ ಮಿಂಚು ಹಾಗೂ ಗುಡುಗಿನ ಮಳೆಯಾಗಲಿದೆ.

Weather report : ವರಮಹಾಲಕ್ಷ್ಮಿ ಹಬ್ಬದ ಸಂಭ್ರಮಕ್ಕೆ ಮಳೆ ಅಡ್ಡಿ!
Deepa S

ಪ್ರೇಯಸಿಯ ಕತ್ತು ಸೀಳಿದ ಪ್ರೇಮಿ; 4 ವರ್ಷದ ಪ್ರೀತಿ ಕೊಲೆಯಲ್ಲಿ ಅಂತ್ಯ

ಬೈಕ್‌ನಲ್ಲಿ ಬಂದ ಪ್ರಿಯಕರನೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆ (Murder case) ಮಾಡಿದ ಘಟನೆ ದಕ್ಷಿಣ ಕ‌ನ್ನಡ ಜಿಲ್ಲೆಯ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಸಮೀಪವೇ ನಡೆದಿದೆ. ಗೌರಿ (18) ಮೃತ ದುರ್ದೈವಿ. ಪದ್ಮರಾಜ್‌ ಎಂಬಾತ ಹತ್ಯೆಗೈದವನು.

Murder Case : ಪ್ರೇಯಸಿಯ ಕತ್ತು ಸೀಳಿದ ಪ್ರೇಮಿ; 4 ವರ್ಷದ ಪ್ರೀತಿ ಕೊಲೆಯಲ್ಲಿ ಅಂತ್ಯ
Deepa S

ಗಾಂಧಿ ಪ್ರತಿಮೆಯನ್ನು ದೂಡಿ ಕೆಡವಿದ್ದ ದುರುಳರ ಸೆರೆ

ಗಾಂಧಿ ಪ್ರತಿಮೆಯನ್ನು ದೂಡಿ ಹಾನಿ ಮಾಡಿದ್ದ ದುಷ್ಟರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಇಲ್ಲಿನ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನಲ್ಲಿ ಮಹಾತ್ಮ ಗಾಂಧಿ (Mahatma gandhi) ವೃತ್ತದಲ್ಲಿದ್ದ ಗಾಂಧಿ ಪ್ರತಿಮೆಗೆ ಕಿಡಿಗೇಡಿಗಳು ಹಾನಿ ಎಸಗಿದ್ದರು. ಇಬ್ಬರು ಕಿಡಿಗೇಡಿಗಳಿಂದ ಕೃತ್ಯ ನಡೆದಿರುವುದು ಸಿಸಿಟಿವಿ ಪರಿಶೀಲಿಸಿದಾಗ ಕಂಡುಬಂದಿತ್ತು. ಇದೀಗ ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಪಂಡರಹಳ್ಳಿಯ ಗಣೇಶ್ (24), ವಿನಯ್ (25) ಬಂಧಿತರು.

Shivamogga News : ಗಾಂಧಿ ಪ್ರತಿಮೆಯನ್ನು ದೂಡಿ ಕೆಡವಿದ್ದ ದುರುಳರ ಸೆರೆ
Deepa S

ಬೈಕ್‌ನಲ್ಲಿ ಬಂದು ಯುವತಿಯ ಕತ್ತು ಸೀಳಿ ಪರಾರಿ

ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿ ಯುವತಿಯ ಕತ್ತು ಸೀಳಿ ಪರಾರಿ (Attempt Murder Case) ಆಗಿದ್ದಾನೆ. ದಕ್ಷಿಣ ಕ‌ನ್ನಡ ಜಿಲ್ಲೆಯ ಪುತ್ತೂರು ಮಹಿಳಾ ಪೊಲೀಸ್ ಠಾಣೆಯ (Puttur Womens Police Station) ಪಕ್ಕದಲ್ಲೇ ಈ ದುರ್ಘಟನೆ ಗುರುವಾರ (ಆ.24) ನಡೆದಿದೆ.

Attempt Murder Case : ಬೈಕ್‌ನಲ್ಲಿ ಬಂದು ಯುವತಿಯ ಕತ್ತು ಸೀಳಿ ಪರಾರಿ
Krishna Bhat

CM Siddaramaiah : ಇಸ್ರೋ ಅಂಗಳದಲ್ಲಿ ಸಿಎಂ ಸಿದ್ದರಾಮಯ್ಯ; ಚಂದ್ರನ ಗೆದ್ದವರಿಗೆ ರಾಜ್ಯ ಸರ್ಕಾರದಿಂದ ವಿಶೇಷ ಗೌರವ
Exit mobile version