Site icon Vistara News

Karnataka Live News : ರಾಜ್ಯದಲ್ಲಿನ ಪ್ರಮುಖ ಬೆಳವಣಿಗೆಗಳ ಲೇಟೆಸ್ಟ್ ಮಾಹಿತಿ; ಬೈಕ್‌ನಲ್ಲಿ ಬಂದು ಕತ್ತು ಸೀಳಿದ ಪ್ರೇಮಿ

karnataka today news live
Krishna Bhat

Pramod Mutalik : ಪ್ರಕಾಶ್‌ರಾಜ್ ಭಾರತದಲ್ಲಿ ಹುಟ್ಟಿದ್ದೇ ಕಳಂಕ, ಅವರಿಗೆ ಚೀನಾ ಬೆಸ್ಟ್‌ ಎಂದ ಮುತಾಲಿಕ್‌
Deepa S

ನಿಲ್ಲದ ಗೊಲ್ಲರ ಮೈಲಿಗೆ ಸಂಪ್ರದಾಯ! ಮಗು-ಬಾಣಂತಿಯ ರಕ್ಷಿಸಿದ ಗುಬ್ಬಿ ನ್ಯಾಯಾಧೀಶೆ

ದೇವರಿಗೆ ಮೈಲಿಗೆ ಆಗುತ್ತೆ, ಸೂತಕವು ಆಗಿ ಬರುವುದಿಲ್ಲ ಎಂದು ಬಾಣಂತಿ, ಹಸುಗೂಸನ್ನೇ ಊರಿನಿಂದ ಹೊರಗಿಟ್ಟ ಮೌಡ್ಯ ಆಚರಣೆಯಿಂದಾಗಿ ಮಗುವೊಂದು ತುಮಕೂರಲ್ಲಿ (Tumkur News) ಬಲಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ವರದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ (kadugollara Tradition) ಕಳೆದ ಕೆಲವು ದಿನಗಳಿಂದ ಮಗು ಬಾಣಂತಿಯನ್ನು ಊರಿಂದಾಚೆಗೆ ಇಡಲಾಗಿದೆ. ಪ್ರಾಣಿಗಳಿಗೂ ಯೋಗ್ಯವಲ್ಲದ ಚಿಕ್ಕ ಗುಡಿಸಲಿನಲ್ಲಿ ಮಗು ಬಾಣಂತಿಯನ್ನು ಇರಿಸಲಾಗಿದೆ.

Tumkur News : ನಿಲ್ಲದ ಗೊಲ್ಲರ ಮೈಲಿಗೆ ಸಂಪ್ರದಾಯ! ಮಗು-ಬಾಣಂತಿಯ ರಕ್ಷಿಸಿದ ಗುಬ್ಬಿ ನ್ಯಾಯಾಧೀಶೆ
Deepa S

ಸ್ಕೂಟರ್‌ ಡಿಕ್ಕಿಯೊಳಗೆ ಹಾಯಾಗಿ ಮಲಗಿದ್ದ ಹಾವು; ಬೆದರಿ ಎದ್ದು ಬಿದ್ದು ಓಡಿದ ಮಹಿಳೆ!

ಸ್ಕೂಟರ್‌ನ ಡಿಕ್ಕಿಯಲ್ಲಿ ಹಾಯಾಗಿ ಮಲಗಿದ್ದ ಹಾವು (Snake Rescue) ಕಂಡೊಡನೆ ಮಹಿಳೆಯೊಬ್ಬರು ಬೆದರಿ ಎದ್ದು ಬಿದ್ದು ಓಡಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯದ ಹೋಟೆಲ್‌ ಸಮೀಪದಲ್ಲಿ ಹಾವೊಂದು ಪ್ರತ್ಯಕ್ಷವಾಗಿ ಕ್ಷಣಕಾಲ ಆತಂಕ ಹೆಚ್ಚಿಸಿತ್ತು.

Snake Rescue : ಸ್ಕೂಟರ್‌ ಡಿಕ್ಕಿಯೊಳಗೆ ಹಾಯಾಗಿ ಮಲಗಿದ್ದ ಹಾವು; ಬೆದರಿ ಎದ್ದು ಬಿದ್ದು ಓಡಿದ ಮಹಿಳೆ!
Deepa S

ರಾಜ್ಯದ ಹಲವೆಡೆ ಇಂದು ಚಿಟಪಟ ಮಳೆಗೆ ಗುಡುಗು, ಮಿಂಚು ಸಾಥ್

ರಾಜ್ಯದಲ್ಲಿ ಆಗಸ್ಟ್‌ ತಿಂಗಳಲ್ಲಿ ಬಿರುಸಿನ ಮಳೆಯಾಗುವ (Rain News) ನಿರೀಕ್ಷೆ ಇತ್ತು. ಆದರೆ ಈಗ ವರುಣ ತೆಪ್ಪಗಾಗಿದ್ದಾನೆ. ಆಗಸ್ಟ್‌ 24ರಂದು ಕರಾವಳಿ, ಮಲೆನಾಡು ಸೇರಿದಂತೆ ಒಳನಾಡಿನ ಜಿಲ್ಲೆಗಳಲ್ಲಿ ಚದುರಿದಂತೆ ಅತಿ ಸಾಧಾರಣ ಮಳೆಯಾಗುವ (Weather report) ಸಾಧ್ಯತೆಯಿದೆ. ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು, ಗುಡುಗು ಸಾಥ್‌ ನೀಡಲಿದೆ.

Weather Report : ರಾಜ್ಯದ ಹಲವೆಡೆ ಇಂದು ಚಿಟಪಟ ಮಳೆಗೆ ಗುಡುಗು, ಮಿಂಚು ಸಾಥ್

Deepa S

ಡೈರಿ ಸರ್ಕಲ್‌ ಬಳಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ; ಒಬ್ಬ ಸಾವು, ಮತ್ತಿಬ್ಬರು ಗಂಭೀರ

ಬೆಂಗಳೂರಿನ ಡೈರಿ ಸರ್ಕಲ್ ಸಮೀಪದ ಮಹಾಲಿಂಗೇಶ್ ಬಡಾವಣೆಯಲ್ಲಿ ಗುರುವಾರ (ಆ.24) ಬೆಳಗ್ಗೆ 9 ಗಂಟೆ ಸುಮಾರಿಗೆ ಗ್ಯಾಸ್‌ ಸಿಲಿಂಡರ್ (Bengaluru Cylinder Blast) ಸ್ಫೋಟಗೊಂಡಿದೆ. ಸಿಲಿಂಡರ್‌ ಪಕ್ಕದಲ್ಲೇ ಮಲಗಿದ್ದ ರವಿ (45) ಎಂಬಾತ ಮೃತಪಟ್ಟಿದ್ದಾನೆ. ಮತ್ತಿಬ್ಬರು ಗಂಭೀರ ಗಾಯಗೊಂಡಿದ್ದಾರೆ.

Cylinder Blast : ಡೈರಿ ಸರ್ಕಲ್‌ ಬಳಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ; ಒಬ್ಬ ಸಾವು, ಮತ್ತಿಬ್ಬರು ಗಂಭೀರ
Exit mobile version