ತುಲಾಭಾರದ ವೇಳೆ ತಕ್ಕಡಿ ಕಳಚಿ ಬಿದ್ದು ಪೇಜಾವರ ಶ್ರೀಗಳಿಗೆ ಗಾಯ
ತುಲಾಭಾರದ ವೇಳೆ ತಕ್ಕಡಿ ಕಳಚಿ ಬಿದ್ದು ಪೇಜಾವರ ಶ್ರೀಗಳಿಗೆ (Pejawar Seer) ಗಾಯವಾಗಿರುವ ಘಟನೆ ನಡೆದಿದೆ. ಚಾತುರ್ಮಾಸ್ಯ ಪೂರ್ಣಗೊಳಿಸಿ ಬಂದ ಹಿನ್ನೆಲೆಯಲ್ಲಿ ದೆಹಲಿಯ ಪೇಜಾವರ ಮಠದಲ್ಲಿ ಭಕ್ತರು ಸ್ವಾಮೀಜಿಗೆ ತುಲಾಭಾರ ನಡೆಸುತ್ತಿದ್ದಾಗ ಹಗ್ಗ ತುಂಡಾಗಿ ತಕ್ಕಡಿ ಬಿದ್ದಿದ್ದು, ಶ್ರೀಗಳಿಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎಂದು ಮಠದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
Pejawar Seer: ತುಲಾಭಾರದ ವೇಳೆ ತಕ್ಕಡಿ ಕಳಚಿ ಬಿದ್ದು ಪೇಜಾವರ ಶ್ರೀಗಳಿಗೆ ಗಾಯ
ಮೈ ಮೇಲೆ ಬಿಸಿ ಸಾಂಬಾರ್ ಬಿದ್ದು ಬಾಲಕ ಸಾವು; ಕುಳಿತಲ್ಲೇ ಸ್ತಬ್ಧವಾಯ್ತು ಪ್ರಯಾಣಿಕನ ಹೃದಯ!
ಮನೆಯಲ್ಲಿ ಆಟವಾಡುವಾಗ ಮೈ ಮೇಲೆ ಬಿಸಿ ಸಾಂಬಾರ್ ಬಿದ್ದು ಬಾಲಕ ಮೃತಪಟ್ಟ ದಾರುಣ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಇತ್ತ ಮೈಸೂರಲ್ಲಿ ಬಸ್‌ನಲ್ಲಿ ಕುಳಿತಿದ್ದ ಪ್ರಯಾಣಿಕನಿಗೆ ಹೃದಯಾಘಾತವಾಗಿ (Heart attack) ಮೃತಪಟ್ಟಿದ್ದಾರೆ.
ಮೈ ಮೇಲೆ ಬಿಸಿ ಸಾಂಬಾರ್ ಬಿದ್ದು ಬಾಲಕ ಸಾವು; ಕುಳಿತಲ್ಲೇ ಸ್ತಬ್ಧವಾಯ್ತು ಪ್ರಯಾಣಿಕನ ಹೃದಯ!
Karnataka Politics : ನಾನು ಮುಖ್ಯಮಂತ್ರಿ ಆಗಲು ಸಿದ್ಧ ಎಂದ ಪ್ರಿಯಾಂಕ್ ಖರ್ಗೆ
ತಾವೇ ಮುಂದಿನ ಐದು ವರ್ಷ ಮುಖ್ಯಂಮತ್ರಿಯಾಗಿ ಮುಂದುವರಿಯುತ್ತೇನೆ ಎಂದು ಹೇಳಿರುವುದು ಸಿದ್ದರಾಮಯ್ಯ ಅವರದ್ದು ವೈಯುಕ್ತಿಕ ಹೇಳಿಕೆಯಾಗಿದೆ. ಸಿಎಂ ಯಾರಾಗಬೇಕು? ಯಾರು ಮುಂದುವರಿಯಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಒಂದು ವೇಳೆ ಹೈಕಮಾಂಡ್ ನೀನು ಸಿಎಂ ಆಗು ಅಂದರೆ ನಾನೂ ಸಿದ್ಧನಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Karnataka Politics : ನಾನು ಮುಖ್ಯಮಂತ್ರಿ ಆಗಲು ಸಿದ್ಧ ಎಂದ ಪ್ರಿಯಾಂಕ್ ಖರ್ಗೆ
CM Siddaramaiah : ಸಿಎಂ ಹುದ್ದೆ ಖಾಲಿ ಇಲ್ಲ; ಸಿದ್ದರಾಮಯ್ಯ ಅವರೇ ನಮ್ಮ ನಾಯಕರು ಎಂದ ಡಿ.ಕೆ. ಸುರೇಶ್
ಕಾಂಗ್ರೆಸ್ ಪಕ್ಷಕ್ಕೆ 5 ವರ್ಷ ಆಡಳಿತ ನೀಡಲು ಜನ ಅವಕಾಶ ನೀಡಿದ್ದಾರೆ. ಸಿಎಂ ಹುದ್ದೆ ಖಾಲಿ ಇಲ್ಲ , ಈಗ ಚರ್ಚೆ ಮಾಡಿ ಏನು ಪ್ರಯೋಜನ? ನಮ್ಮ ನಾಯಕರು ಸಿದ್ದರಾಮಯ್ಯ ಅವರಾಗಿದ್ದಾರೆ. ಅದರಲ್ಲಿ ಸಂದೇಹ ಬೇಡ ಎಂದು ಸಂಸದ ಡಿ.ಕೆ. ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಿಕ್ಕಿ ಹೊಡೆದ ಬುಲೆರೋ; ಬೈಕ್‌ನಿಂದ ಎಗರಿ ಬಿದ್ದ ಸವಾರರು ಮೃತ್ಯು, ಕಾಲ್ಕಿತ್ತ ಚಾಲಕ!
ಇತ್ತೀಚೆಗೆ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿದೆ. ಮೈಸೂರಲ್ಲಿ ಬೈಕ್‌ಗೆ ಬುಲೆರೋ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದೆಡೆ ಕೆಎಸ್‌ಆರ್‌ಟಿಸಿ ಬಸ್‌ಗಳು ಅಪಘಾತಕ್ಕೀಡಾಗಿದೆ.
https://vistaranews.com/karnataka/road-accident-road-accidents-at-isolated-place-two-dead/497404.html