Site icon Vistara News

Karnataka Live News : ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

karnataka live
Deepa S

9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟ ನಿವೃತ್ತ ಕ್ಲರ್ಕ್!

ನಾಲ್ಕನೇ ತರಗತಿ ಓದುತ್ತಿರುವ ಬಾಲಕಿಗೆ ಲೈಂಗಿಕ ಕಿರುಕುಳ (Physical Abuse) ನೀಡುತ್ತಿದ್ದ ವ್ಯಕ್ತಿಯ ಬಂಧನವಾಗಿದೆ. ತಿ.ನರಸೀಪುರ ಪಟ್ಟಣದ ಹೌಸಿಂಗ್ ಬೋರ್ಡ್‌ನಲ್ಲಿ ಈ ಘಟನೆ ನಡೆದಿದೆ. ಹೌಸಿಂಗ್ ಬೋರ್ಡ್ ನಿವಾಸಿ ಜಗದೀಶ್ ಬಂಧಿತ ಆರೋಪಿಯಾಗಿದ್ದಾನೆ.

Physical Abuse : 9 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ಕೊಟ್ಟ ನಿವೃತ್ತ ಕ್ಲರ್ಕ್!
Adarsha Anche

TN Seetharam: ನನ್ನ ರಾಜಕೀಯ ಪ್ರವೇಶಕ್ಕೆ ಪ್ರೊ. ನಂಜುಂಡಸ್ವಾಮಿ ಕಾರಣ: ಸಿಎಂ ಸಿದ್ದರಾಮಯ್ಯ

ನನ್ನ ರಾಜಕೀಯ ಜೀವನ ಪ್ರವೇಶಕ್ಕೆ ಪ್ರೊ. ನಂಜುಂಡಸ್ವಾಮಿಯವರೇ ಕಾರಣ ಎಂದು ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹಳೇ ಜೀವನವನ್ನು ಮೆಲುಕು ಹಾಕಿದ್ದಾರೆ. ಅಲ್ಲದೆ, ತಾವು ಸ್ಕೂಟರ್‌ನಲ್ಲಿ ಓಡಾಡುತ್ತಿದ್ದ ದಿನಗಳ ಬಗ್ಗೆ ಹಂಚಿಕೊಂಡಿದ್ದಾರೆ. ಜತೆಗೆ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಂ ಅವರು ಬದುಕಿನ ವಿವಿಧ ಸ್ತರಗಳ ಅನುಭವವಿರುವ ಕ್ರಿಯಾಶೀಲ ವ್ಯಕ್ತಿ ಎಂದು ಬಣ್ಣಿಸಿದ್ದಾರೆ.

https://vistaranews.com/politics/i-entered-politics-from-nanjundaswamy-says-cm-siddaramaiah-tn-seetharam-book-release/528948.html

Prabhakar R

ನರೇಗಾದಲ್ಲಿ 150 ಕೋಟಿ ರೂ. ಭ್ರಷ್ಟಾಚಾರ; ನಾಲ್ವರು ಪಿಡಿಒಗಳ ಅಮಾನತು

ನರೇಗಾದಲ್ಲಿ ವ್ಯಾಪಕ ಭ್ರಷ್ಟಾಚಾರ ಕಂಡುಬಂದ ಹಿನ್ನೆಲೆಯಲ್ಲಿ ದೇವದುರ್ಗ ತಾಲೂಕಿನ ನಾಲ್ವರು ಪಿಡಿಒಗಳನ್ನು ಅಮಾನತು ಮಾಡಲಾಗಿದೆ. 33 ಗ್ರಾಮ‌ ಪಂಚಾಯತಿಗಳಲ್ಲಿ 150 ಕೋಟಿ ರೂ. ಮೊತ್ತದ ಭ್ರಷ್ಟಾಚಾರ ಸಂಬಂಧ ರಾಜ್ಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಮಿತಿ ದೂರು ನೀಡಿದ್ದರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತಿ ಸಿಇಒ ಆದೇಶ ಹೊರಡಿಸಿದ್ದಾರೆ.

https://vistaranews.com/karnataka/four-pdos-suspended-for-corruption-in-mgnrega/528979.html

Adarsha Anche

Shiva Rajkumar: ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

ನಟ ಶಿವರಾಜ್‌ ಕುಮಾರ್‌ ಅವರಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಈಡಿಗ ಸಮಾವೇಶದಲ್ಲಿ ಆಫರ್‌ ನೀಡಿದ್ದಾರೆ. ಆದರೆ, ಸಿನಿಮಾ ಜೀವನದಿಂದ ನಾನು ಹೊರಗೆ ಬರಲ್ಲ. ನನಗೆ ರಾಜಕೀಯ ಬೇಡ ಎಂದು ನಯವಾಗಿಯೇ ತಿರಸ್ಕಾರ ಮಾಡಿದ್ದಾರೆ.

https://vistaranews.com/politics/shiva-rajkumar-rejects-dk-shivakumar-lok-sabha-election-ticket-offer/528963.html

Deepa S

ಸಾವಿನಲ್ಲೂ ಒಂದಾದ ಪ್ರೇಮಿಗಳು; ರಸ್ತೆ ಅಪಘಾತದಲ್ಲಿ ಮೃತ್ಯು

ನೂರಾರು ಕನಸುಗಳನ್ನು ಹೊತ್ತಿದ್ದ ಆ ಜೋಡಿ ಸಾವಿನಲ್ಲೂ ಒಂದಾಗಿದೆ. ಶಾಲಾ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ (Road Accident) ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಪ್ರೇಮಿಗಳು (Lovers Death) ಮೃತಪಟ್ಟಿದ್ದಾರೆ. ಕೆಬ್ಬೆಹಳ್ಳಿ ಗ್ರಾಮದ ದೀಪು (25), ತಿಪ್ಪೂರು ಗ್ರಾಮದ ಶೈಲ (20) ಮೃತ ದುರ್ದೈವಿಗಳು.

Road Accident : ಸಾವಿನಲ್ಲೂ ಒಂದಾದ ಪ್ರೇಮಿಗಳು; ರಸ್ತೆ ಅಪಘಾತದಲ್ಲಿ ಮೃತ್ಯು
Exit mobile version