Site icon Vistara News

Karnataka Live News : ಲೋಕಸಭೆಗೆ ಸ್ಪರ್ಧಿಸಿ ಎಂದ ಡಿಕೆಶಿ; ನಾನು ರಾಜಕೀಯಕ್ಕೆ ಬರಲ್ಲ ಎಂದ ಶಿವರಾಜ್‌ಕುಮಾರ್!

karnataka live
Deepa S

ಕಿಟಕಿ ಒರೆಸುವಾಗ ಜಾರಿದ ಕಾಲು; 5ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು

ಮನೆಯೊಳಗಿದ್ದ ಕಿಟಕಿಯನ್ನು ಕ್ಲೀನ್‌ ಮಾಡುವಾಗ ಮಹಿಳೆಯೊಬ್ಬರ ಕಾಲು ಜಾರಿದ್ದು ಆಯತಪ್ಪಿ 5ನೇ ಮಹಡಿಯಿಂದ (Accident Case) ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಖುಷ್ಬು ಅಶೀಷ್ ತ್ರಿವೇದಿ (31) ಎಂಬಾಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾಡುಗೋಡಿ ಸಮೀಪದ ದೊಡ್ಡಬನಹಳ್ಳಿಯ ಬಿಡಿಎ ವಿಂಧ್ಯಗಿರಿ ಅಪಾರ್ಟ್‌ಮೆಂಟ್‌ನಲ್ಲಿ ಈ ದುರ್ಘಟನೆ ಶನಿವಾರ ನಡೆದಿದೆ.

Accident Case : ಕಿಟಕಿ ಒರೆಸುವಾಗ ಜಾರಿದ ಕಾಲು; 5ನೇ ಮಹಡಿಯಿಂದ ಬಿದ್ದು ಮಹಿಳೆ ಸಾವು
Deepa S

ಅನಿಮಲ್‌ ಸಿನಿಮಾ ನೋಡಿ ಪರ್ಸ್‌ ಬಿಟ್ಟು ಬಂದಳು; ವಾಪಸ್‌ ತರಲು ಹೋದಾಗ ಸೆಕ್ಯುರಿಟಿ ಗಾರ್ಡ್‌ಗೆ ಒದ್ದಳು!

ಅನಿಮಲ್‌ ಸಿನಿಮಾ ವೀಕ್ಷಣೆಗೆ ಮಾಲ್‌ಗೆ ಬಂದಿದ್ದ ಮಹಿಳೆಯೊಬ್ಬರು ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ (assault case) ನಡೆಸಿದ್ದಾರೆ. ಮರೆತು ಹೋಗಿದ್ದ ವ್ಯಾಲೆಟ್ ಹಿಂಪಡೆಯುವ ವಿಚಾರಕ್ಕೆ ಶುರುವಾದ ಕಿರಿಕ್ ಠಾಣೆ ಮೆಟ್ಟಿಲೇರಿದೆ. ಗರುಡಾ ಮಾಲ್​ನ (garuda mall) ಪಿವಿಆರ್ ಐನಾಕ್ಸ್ ಚಿತ್ರಮಂದಿರದ ಬಳಿ ನಡೆದಿದೆ.

ಅನಿಮಲ್‌ ಸಿನಿಮಾ ನೋಡಿ ಪರ್ಸ್‌ ಬಿಟ್ಟು ಬಂದಳು; ವಾಪಸ್‌ ತರಲು ಹೋದಾಗ ಸೆಕ್ಯುರಿಟಿ ಗಾರ್ಡ್‌ಗೆ ಒದ್ದಳು!
Deepa S

ನಿನ್ನ ಗಂಡನ ಸಾವು ಎಂದ ಬುಡುಬುಡಿಕೆ; ಮಹಿಳೆಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಕಳವು

ಕಳ್ಳನೊಬ್ಬ ಬುಡಬುಡಿಕೆ ವೇಷಧಾರಿಯಾಗಿ ಬಂದು ಮಹಿಳೆಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣವನ್ನು (Fraud Case) ಕದ್ದಿರುವ ಪ್ರಕರಣವೊಂದು ಐಟಿಬಿಟಿ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

Theft Case : ನಿನ್ನ ಗಂಡನ ಸಾವು ಎಂದ ಬುಡುಬುಡಿಕೆ; ಮಹಿಳೆಯ ಪ್ರಜ್ಞೆ ತಪ್ಪಿಸಿ ಚಿನ್ನಾಭರಣ ಕಳವು
Deepa S

ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಕಿವಿಯಲ್ಲಿ ಹುಡುಕಿದ ENT ಡಾಕ್ಟರ್ಸ್‌!

ಕಳೆದ ಅಕ್ಟೋಬರ್‌ನಲ್ಲಿ ವಿವಿಧ ನಿಗಮ ಮಂಡಳಿಗಳ ಹುದ್ದೆಗಳ ಭರ್ತಿಗಾಗಿ ಕೆಇಎ ಪರೀಕ್ಷೆಯನ್ನು ನಡೆಸಿತ್ತು. ಈ ವೇಳೆ ಬ್ಲೂಟೂತ್‌ ಬಳಸಿ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳು ಸಿಕ್ಕಿ ಬಿದ್ದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಡಿ.10ರಂದು ಕಾನ್ಸ್‌ಟೇಬಲ್ (Police Constable) ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ ನಡೆಯುತ್ತಿರುವುದರಿಂದ ಅಕ್ರಮಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಬಾರಿ ಇಎನ್‌ಟಿ ವೈದ್ಯರಿಂದಲೇ ಪರೀಕ್ಷಾರ್ಥಿಗಳ ಕಿವಿಗಳ ತಪಾಸಣೆ ಮಾಡಲಾಗಿದೆ.

Police Constable: ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಕಿವಿಯಲ್ಲಿ ಹುಡುಕಿದ ENT ಡಾಕ್ಟರ್ಸ್‌!
Exit mobile version