Site icon Vistara News

Karnataka Live News : ನ.16ರ ಬಿಜೆಪಿ ಸಮಾವೇಶ ಮುಂದಕ್ಕೆ; ಈ ಮಾಸಾಂತ್ಯಕ್ಕೆ ಸಭೆ, ನಡ್ಡಾ ಆಗಮನ

karnataka today news live vistara news november 12
Prabhakar R

ಸಿಗಂದೂರು ಸೇತುವೆ ಕಾಮಗಾರಿ ವೇಳೆ ಬಿದ್ದು ಕಾರ್ಮಿಕ ಸಾವು

ಸಿಗಂದೂರು ಸೇತುವೆ ಕಾಮಗಾರಿ ವೇಳೆ ಕೆಳಗೆ ಬಿದ್ದು ಕಾರ್ಮಿಕ ಮೃತಪಟ್ಟಿರುವ ಘಟನೆ ಜಿಲ್ಲೆಯ ತುಮರಿ ಸಮೀಪ ನಡೆದಿದೆ. ಕಾಮಗಾರಿ ವೇಳೆ ಮೂರ್ಛೆ ಬಂದಿದ್ದರಿಂದ ಕಾರ್ಮಿಕ ಕೆಳಗೆ ಬಿದ್ದು ಗಾಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Shivamogga News: ಸಿಗಂದೂರು ಸೇತುವೆ ಕಾಮಗಾರಿ ವೇಳೆ ಬಿದ್ದು ಕಾರ್ಮಿಕ ಸಾವು

Adarsha Anche

BY Vijayendra : ನ.16ರ ಬಿಜೆಪಿ ಸಮಾವೇಶ ಮುಂದಕ್ಕೆ; ಈ ಮಾಸಾಂತ್ಯಕ್ಕೆ ಸಭೆ, ನಡ್ಡಾ ಆಗಮನ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಸಮಾವೇಶಕ್ಕೆ ಬರುವುದಾಗಿ ಅವರು ಒಪ್ಪಿಗೆ ಕೊಟ್ಟಿದ್ದಾರೆ. ಹೀಗಾಗಿ ನ. 23ರ ಬಳಿಕ 30ರ ಒಳಗೆ ಬೃಹತ್‌ ಸಾರ್ವಜನಿಕ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎನ್. ರವಿಕುಮಾರ್‌ ತಿಳಿಸಿದ್ದಾರೆ.

https://vistaranews.com/politics/bjp-to-hold-november-16-rally-by-vijayendra-updates/504779.html

Adarsha Anche

BY Vijayendra : ಬಿ.ವೈ. ವಿಜಯೇಂದ್ರ 3 ವರ್ಷಕ್ಕೆ ಅಧ್ಯಕ್ಷ, ನಂತರ ಮತ್ತೊಬ್ಬರು ಎಂದ ಪ್ರಲ್ಹಾದ್‌ ಜೋಶಿ

ವಿಜಯೇಂದ್ರ ನಾಯಕತ್ವದಲ್ಲಿ, ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (BS Yediyurappa) ನೇತೃತ್ವದಲ್ಲಿ ನಾವು ಪಕ್ಷವನ್ನು ಗಟ್ಟಿಗೊಳಿಸುತ್ತೇವೆ. ಬಿ.ವೈ. ವಿಜಯೇಂದ್ರ ಮೂರು ವರ್ಷ ಮಾತ್ರ ಅಧ್ಯಕ್ಷರಾಗಿರುತ್ತಾರೆ. ನಂತರ ಮತ್ತೊಬ್ಬ ಕಾರ್ಯಕರ್ತ ಅಧ್ಯಕ್ಷರಾಗುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಹೇಳಿದ್ದಾರೆ.

BY Vijayendra : ಬಿ.ವೈ. ವಿಜಯೇಂದ್ರ 3 ವರ್ಷಕ್ಕೆ ಅಧ್ಯಕ್ಷ, ನಂತರ ಮತ್ತೊಬ್ಬರು ಎಂದ ಪ್ರಲ್ಹಾದ್‌ ಜೋಶಿ

Prabhakar R

ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಪ್ರಲ್ಹಾದ್ ಜೋಶಿ

ವ್ಯಕ್ತಿಯೊಬ್ಬನನ್ನು ಠಾಣೆಗೆ ಕರೆಸಿ ಹೊಡೆದಿದ್ದ ಹಿನ್ನೆಲೆಯಲ್ಲಿ ಪೊಲೀಸ್‌ ಇನ್ಸ್‌ಪೆಕ್ಟರ್‌ಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ. ಯುವಕನಿಗೆ ಹೊಡೆಯಲು ನಿಮಗೇನು ಅಧಿಕಾರ ಇದೆ. ನಿಮ್ಮನ್ನು ಮನೆಗೆ ಕಳಿಸುತ್ತೇನೆ, ಸುಮ್ಮನೆ ಬಿಡಲ್ಲ. ಕಾಂಗ್ರೆಸ್ ಸರ್ಕಾರದ ಮಾತು ಕೇಳಿ ಮನಬಂದಂತೆ ವರ್ತಿಸುತ್ತಿದ್ದೀರಿ ಎಂದು ಧಾರವಾಡ ಶಹರ ಠಾಣೆ ಇನ್ಸ್‌ಪೆಕ್ಟರ್ ಕಾಡದೇವರಮಠ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Pralhad Joshi: ಪೊಲೀಸ್ ಇನ್ಸ್‌ಪೆಕ್ಟರ್‌ಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಪ್ರಲ್ಹಾದ್ ಜೋಶಿ

Deepa S

ಯಮನಂತೆ ಬಂದ ಟಿಪ್ಪರ್‌ಗೆ ಮಹಿಳೆ ಸಾವು! ಸವಾರ ಗಂಭೀರ

ಬಾಗಲಕೊಟೆ: ಇಲ್ಲಿನ ಸೀಮಿಕೇರಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಬೈಕ್‌ ಹಿಂಬದಿಗೆ ಟಿಪ್ಪರ್ ವಾಹನ (Road Accident) ಡಿಕ್ಕಿಯಾಗಿದೆ. ಸ್ಥಳದಲ್ಲೇ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ತಬಶುಮ್ ಅತ್ತಾರ್ ಮೃತ ದುರ್ದೈವಿ.

https://vistaranews.com/crime/road-accident-woman-killed-after-being-hit-by-bike-tipper-vehicle/504783.html

Exit mobile version